Wholesale price inflation: ಮಾರ್ಚ್​ನಲ್ಲಿ ಗಗನಕ್ಕೇರಿದ ಸಗಟು ಹಣದುಬ್ಬರ ದರ ಶೇ 7.39ರಲ್ಲಿ

ಮಾರ್ಚ್​ನಲ್ಲಿ ಸಗಟು ದರ ಆಧಾರಿತ ಹಣದುಬ್ಬರವು ಶೇ 7.39 ತಲುಪುವ ಮೂಲಕ ಗಗನಮುಖಿಯಾಗಿದೆ. ಏರುತ್ತಿರುವ ತೈಲದರ, ಆಹಾರ ಪದಾರ್ಥಗಳು ಈ ಹಣದುಬ್ಬರ ದರ ಏರಿಕೆಗೆ ಕಾರಣ ಆಗಿವೆ.

Wholesale price inflation: ಮಾರ್ಚ್​ನಲ್ಲಿ ಗಗನಕ್ಕೇರಿದ ಸಗಟು ಹಣದುಬ್ಬರ ದರ ಶೇ 7.39ರಲ್ಲಿ
ಹಣ್ಣು ಮತ್ತು ತರಕಾರಿಗಳು (ಸಾಂದರ್ಭಿಕ ಚಿತ್ರ)
Follow us
Srinivas Mata
|

Updated on: Apr 15, 2021 | 1:36 PM

ನವದೆಹಲಿ: ಭಾರತದ ಸಗಟು ದರ ಹಣದುಬ್ಬರವು (wholesale price inflation- WPI) ಮಾರ್ಚ್ ತಿಂಗಳಲ್ಲಿ ಶೇ 7.39 ತಲುಪುವ ಮೂಲಕ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತೈಲ ದರ ಏರಿಕೆ, ಇದರ ಜತೆಗೆ ಉತ್ಪಾದಕರಿಗೆ ಇನ್​ಪುಟ್ ವೆಚ್ಚದಲ್ಲಿ ಹೆಚ್ಚಳ ಆಗುತ್ತಿದ್ದು, ಕೊರೊನಾ ಎರಡನೇ ಅಲೆಯಲ್ಲಿ ಹೆಚ್ಚುತ್ತಿರುವ ಸೋಂಕು ಪ್ರಮಾಣದಿಂದಾಗಿ ಆರ್ಥಿಕ ಚೇತರಿಕೆಯು ನಿರೀಕ್ಷೆಗಿಂತ ನಿಧಾನ ಆಗಬಹುದು ಎನ್ನಲಾಗುತ್ತಿದೆ. ಫೆಬ್ರವರಿಯಲ್ಲಿ ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು ಶೇ 4.17 ಇತ್ತು. ಕೈಗಾರಿಕೆ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಮಾರ್ಚ್​​ನಲ್ಲಿ ತೈಲ ದರ ಶೇ 10.25ರಷ್ಟು ಮೇಲೇರಿದೆ. ಉತ್ಪಾದನೆ ವಸ್ತುಗಳು ಶೇ 7.34ರಷ್ಟು ಹೆಚ್ಚಳವಾಗಿದೆ. ಇನ್ನು ಆಹಾರ ವಸ್ತುಗಳ ಪೈಕಿ ದ್ವಿದಳ ಧಾನ್ಯಗಳು (ಶೇ 13.14) ಮತ್ತು ಹಣ್ಣುಗಳು (ಶೇ 16.33) ಬೆಲೆಯಲ್ಲಿ ಭಾರೀ ಏರಿಕೆ ಕಂಡಿವೆ.

ಆಹಾರ ದರಗಳಲ್ಲಿನ ಹೆಚ್ಚಳದ ಕಾರಣಕ್ಕೇ ಭಾರತದ ಚಿಲ್ಲರೆ (ರೀಟೇಲ್) ಹಣದುಬ್ಬರ ದರವು ಮಾರ್ಚ್ ತಿಂಗಳಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 5.52 ತಲುಪಿತ್ತು. ಸೋಮವಾರದಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ಅಂಕಿ- ಅಂಶದಿಂದ ಈ ದತ್ತಾಂಶ ತಿಳಿದುಬಂದಿದೆ. ಆಹಾರ ಹಣದುಬ್ಬರ ಶೇ 4.94 ಹೆಚ್ಚಾಗಿದೆ. ಈ ಬೆಲೆ ಏರಿಕೆಗೆ ಕಾರಣ ಆಗಿರುವುದು ದ್ವಿದಳ ಧಾನ್ಯಗಳು, ಮಾಂಸ, ಮೀನು ಮತ್ತು ಮೊಟ್ಟೆಯ ದರ. ಮಾರ್ಚ್ ತಿಂಗಳಲ್ಲಿ ತೈಲ ದರ ಶೇ 4.5ರಷ್ಟು ಹೆಚ್ಚಳವಾಗಿದ್ದರೆ, ಸೇವಾ ಹಣದುಬ್ಬರ ಶೇ 6.88ರಷ್ಟಿದೆ.

ಕೇಂದ್ರ ಬ್ಯಾಂಕ್​ನಿಂದ ಐದು ವರ್ಷಗಳ ಅವಧಿಗೆ ಹಣದುಬ್ಬರ- ಗುರಿಯ ವ್ಯಾಪ್ತಿಯನ್ನು ಹಾಗೇ ಉಳಿಸಿಕೊಳ್ಳಲಾಗುವುದು. ಅದು ಏಪ್ರಿಲ್ 1ರಿಂದ ಅನ್ವಯ ಆಗುತ್ತದೆ ಎಂದು ಸರ್ಕಾರ ಘೋಷಿಸಿದ ಮೇಲೆ ಹೊರಬಂದಿರುವ ಮೊಸಲ ಕಂತಿನ ಹಣದುಬ್ಬರ ದರ ಇದು. ಈಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಣಕಾಸು ನೀತಿ ಪರಿಶೀಲನೆ ವೇಳೆಯಲ್ಲಿ ರೆಪೋ- ರಿವರ್ಸ್ ರೆಪೋ ದರವನ್ನು ಹಾಗೇ ಉಳಿಸಿಕೊಂಡಿತ್ತು. ಕಳೆದ 40 ವರ್ಷಗಳಲ್ಲೇ ಕಾಣದಂಥ ಆರ್ಥಿಕ ಕುಸಿತವನ್ನು ದೇಶವು FY21ರಲ್ಲಿ ಕಂಡಿತ್ತು. ಅದರಿಂದ ಚೇತರಿಕೆ ಕಾಣಿಸಿಕೊಳ್ಳುವಂತೆ ಮಾಡಲು ಇಂಥದ್ದೊಂದು ನಿರ್ಧಾರಕ್ಕೆ ಬಂದಿತ್ತು. ಕೊರೊನಾ ಬಿಕ್ಕಟ್ಟಿನ ಎರಡನೇ ಅಲೆ ಆತಂಕ ದೇಶದಲ್ಲಿ ಹೆಚ್ಚಾಗಿದೆ. ಸೋಂಕು ಪ್ರಕರಣಗಳು ಹೆಚ್ಚುತ್ತಾ ಹೋದರೆ ಆರ್ಥಿಕ ಚೇತರಿಕೆ ನಿರೀಕ್ಷೆ ಮಟ್ಟಕ್ಕೆ ಆಗುವುದು ಸಾಧ್ಯವಿಲ್ಲ.

ಆರ್​ಬಿಐನಿಂದ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಹಾಗೇ ಉಳಿಸಿಕೊಳ್ಳಲಾಗಿದೆ. ಹಣಕಾಸು ಸಮಿತಿಯು ಕಳೆದ ವಾರ ತಿಳಿಸಿದ್ದ ಪ್ರಕಾರ, ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ ದರವು ಮೇಲ್ಮಟ್ಟ ಹಾಗೂ ಕೆಳಮಟ್ಟ ಎರಡೂ ಕಡೆಯಲ್ಲಿ ಒತ್ತಡ ಅನುಭವಿಸುತ್ತಿದೆ.

ಇದನ್ನೂ ಓದಿ: ಸಿಪಿಐ ಆಧಾರಿತ ಮಾರ್ಚ್ ತಿಂಗಳ ಹಣದುಬ್ಬರ ಏರಿಕೆ; ಫೆಬ್ರವರಿಯ ಕೈಗಾರಿಕೆ ಉತ್ಪಾದನೆಯಲ್ಲಿ ಇಳಿಕೆ

(Wholesale Price Inflation (WPI) at 7.39% in March month. Same was 4.17% in February.)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್