ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಮೇಲೆ ಸರ್ಕಾರದಿಂದ ಹೆಚ್ಚುವರಿ ತೆರಿಗೆ ಕಡಿತ

ಆಮದಾಗುವ ಪ್ರತಿ ಒಂದು ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು ರೂ. 6 ಕಡಿಮೆ ಮಾಡಿದೆ, ಹಾಗೆಯೇ ಏವಿಯೇಶನ್ ಟರ್ಬೈನ್ ಇಂಧನದ (ಎಟಿಎಫ್) (ವಿಮಾನ ಇಂಧನ) ಮೇಲಿನ ತೆರಿಗೆಯನ್ನು ರೂ. 6ರಿಂದ 4 ರೂಪಾಯಿಗಳಿಗೆ ಸರ್ಕಾರ ಇಳಿಸಿದೆ.

ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಮೇಲೆ ಸರ್ಕಾರದಿಂದ ಹೆಚ್ಚುವರಿ ತೆರಿಗೆ ಕಡಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 20, 2022 | 10:58 AM

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ (international market) ಕಚ್ಚಾ ತೈಲದ ಬೆಲೆಗಳಲ್ಲಿ ಗಣನೀಯ ಕಡಿತ ಆಗಿರುವುದರಿಂದ ಬುಧವಾರದಂದು ಕೇಂದ್ರ ಸರ್ಕಾರವು ಪ್ರತಿ ಲೀಟರ್ ಆಮದು ಪೆಟ್ರೋಲ್ (petrol) ಮೇಲೆ ಹೆಚ್ಚುವರಿ (windfall) ತೆರಿಗೆ ರಿಯಾಯಿತಿಯನ್ನು ಪ್ರಕಟಿಸಿದೆ.

ಸರ್ಕಾರವು ಆಮದಾಗುವ ಪ್ರತಿ ಒಂದು ಲೀಟರ್ ಪೆಟ್ರೋಲ್ ಮೇಲಿನ ತೆರಿಗೆಯನ್ನು ರೂ. 6 ಕಡಿಮೆ ಮಾಡಿದೆ, ಹಾಗೆಯೇ ಏವಿಯೇಶನ್ ಟರ್ಬೈನ್ ಇಂಧನದ (ಎಟಿಎಫ್) (ವಿಮಾನ ಇಂಧನ) ಮೇಲಿನ ತೆರಿಗೆಯನ್ನು ರೂ. 6ರಿಂದ 4 ರೂಪಾಯಿಗಳಿಗೆ ಇಳಿಸಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ರೂ.13 ರಿಂದ ರೂ. 11 ಕ್ಕೆ ಇಳಿಸಿರುವ ಬಗ್ಗೆಯೂ ಹಣಕಾಸು ಸಚಿವಾಲಯದಿಂದ ಹೊರಬಿದ್ದಿರುವ ಪ್ರಕಟಣೆ ತಿಳಿಸುತ್ತದೆ.

ಸ್ವದೇಶದಲ್ಲಿ ಉತ್ಪತ್ತಿಯಾಗುವ ಪ್ರತಿ ಟನ್ ಕಚ್ಚಾ ತೈಲದ ಮೇಲೆ ತೆರಿಗೆಯನ್ನು ಸರ್ಕಾರವು ರೂ. 23,250 ರಿಂದ ರೂ.17,000 ಕ್ಕೆ ಇಳಿಸಿದೆ.

Published On - 10:56 am, Wed, 20 July 22