AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ವರದಕ್ಷಿಣೆ ಕೇಳ್ತೀಯಾ… ಮಗಳು, ನೆಂಟರಿಷ್ಟರ ಎದುರೇ ಅಳಿಯನಿಗೆ ಬಿತ್ತು ಮಾವನಿಂದ ಚಪ್ಪಲಿ ಏಟು!

ವರದಕ್ಷಿಣೆ ಪಡೆಯುವುದನ್ನು ತಡೆಯಲು ಅನೇಕ ಕಾನೂನುಗಳು ಚಾಲ್ತಿಯಲ್ಲಿವೆ, ಇದರ ಹೊರತಾಗಿಯೂ ವರದಕ್ಷಿಣೆ ಕಿರುಕುಳದ ಹಲವು ಘಟನೆಗಳು ಮುನ್ನಲೆಗೆ ಬರುತ್ತಿವೆ.

Viral Video: ವರದಕ್ಷಿಣೆ ಕೇಳ್ತೀಯಾ... ಮಗಳು, ನೆಂಟರಿಷ್ಟರ ಎದುರೇ ಅಳಿಯನಿಗೆ ಬಿತ್ತು ಮಾವನಿಂದ ಚಪ್ಪಲಿ ಏಟು!
ವರ
ನಯನಾ ರಾಜೀವ್
|

Updated on:May 16, 2023 | 2:23 PM

Share

ವರದಕ್ಷಿಣೆ ಪಡೆಯುವುದನ್ನು ತಡೆಯಲು ಅನೇಕ ಕಾನೂನುಗಳು ಚಾಲ್ತಿಯಲ್ಲಿವೆ, ಇದರ ಹೊರತಾಗಿಯೂ ವರದಕ್ಷಿಣೆ ಕಿರುಕುಳದ ಹಲವು ಘಟನೆಗಳು ಮುನ್ನಲೆಗೆ ಬರುತ್ತಿವೆ. ವರದಕ್ಷಿಣೆ ಕೇಳುವುದು ಎಷ್ಟು ತಪ್ಪೋ, ಕೊಡುವುದು ಕೂಡ ಅಷ್ಟೇ ದೊಡ್ಡ ತಪ್ಪು, ಮೊದಲೆಲ್ಲಾ ವರದಕ್ಷಿಣೆ ಇಂತಿಷ್ಟು ಬೇಕು ಎಂದು ನೇರವಾಗಿ ಕೇಳಿ ಪಡೆಯುತ್ತಿದ್ದರು, ಆದರೆ ಈಗೀಗ ನನಗೇನು ಬೇಡ, ಏನಾದರೂ ಕೊಡುವುದಿದ್ದರೆ ನಿಮ್ಮ ಮಗಳಿಗೆ ಕೊಡಿ, ನಿಮ್ಮ ಮಗಳು ಖುಷಿಯಾಗಿರಬೇಕಲ್ಲಾ ಎಂದು ಹೇಳಿ ಪಡೆಯುತ್ತಾರೆ.

ಹಾಗೆಯೇ ಇಲ್ಲೊಬ್ಬ ವರ ವಧುವಿನ ತಂದೆಯ ಬಳಿ ವರದಕ್ಷಿಣೆಯಾಗಿ ಬೈಕ್​ ಒಂದನ್ನು ಕೇಳಿದ್ದಾರೆ, ಅದಕ್ಕೆ ಕೋಪಗೊಂಡ ಮಾವ ಅಳಿಯನಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ.

ಈ ವೈರಲ್ ವೀಡಿಯೊದಲ್ಲಿ, ಹುಡುಗಿಯ ತಂದೆ ವರನನ್ನು ತನ್ನ ಕಾಲರ್‌ ಹಿಡಿದು ಥಳಿಸುತ್ತಿರುವುದನ್ನು ನೀವು ನೋಡಬಹುದು. ಈ ಸಮಯದಲ್ಲಿ, ಅಳಿಯನನ್ನು ಉಳಿಸಲು ಅನೇಕರು ಪ್ರಯತ್ನಿಸುತ್ತಾರೆ. ಇದರ ನಂತರ, ವರನು ತನ್ನ ವಧುವಿನ ಕೈಯನ್ನು ಹಿಡಿದುಕೊಂಡು ಮುಂದೆ ಸಾಗಲು ಪ್ರಾರಂಭಿಸುತ್ತಾನೆ ಮತ್ತು ತಪ್ಪಾಯಿತು ಎಂದು ಹೇಳುತ್ತಾನೆ.

ಮತ್ತಷ್ಟು ಓದಿ: ತುಮಕೂರು: ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ; ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ಕೆಲವರು ಈ ವೀಡಿಯೊವನ್ನು ಸ್ಕ್ರಿಪ್ಟೆಡ್ ಎಂದು ಕರೆಯುತ್ತಿದ್ದಾರೆ. ವರನ ಈ ವರ್ತನೆಯನ್ನು ಕೆಲವರು ಖಂಡಿಸಿದ್ದಾರೆ. ಒಬ್ಬ ಬಳಕೆದಾರ, ವರದಕ್ಷಿಣೆಯನ್ನು ವಿರೋಧಿಸಿ,ಅದನ್ನು ಬೆಂಬಲಿಸಬೇಡಿ’ ಎಂದು ಹೇಳಿದ್ದಾರೆ. ಮತ್ತೊಬ್ಬರು ವರದಕ್ಷಿಣೆ ಕೇಳುವವರ ಸ್ಥಿತಿ ಬದಲಾಗಬೇಕು ಎಂದಿದ್ದಾರೆ.

ಕೆಲವರು ಕೇವಲ ವರದಕ್ಷಿಣೆ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಿ, ಈಗೀಗ ಹೆಣ್ಣುಮಕ್ಕಳು ವರನ ಸಂಬಳ ಎಷ್ಟಿದೆ, ಕೆಲಸ ಎಂಥದ್ದು, ಸ್ಯಾಲರಿ ಸ್ಲಿಪ್ ಹೀಗೆ ಎಲ್ಲವನ್ನೂ ಕೇಳುತ್ತಾರೆ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:23 pm, Tue, 16 May 23

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು