ತುಮಕೂರು: ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ; ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು
ಸದ್ಯ ಮಧುಗಿರಿ ಅಧಿಕ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಐವರ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಐಪಿಸಿ 323, 324, 498ಎ, 504, 506, 149 ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು: ಪತ್ನಿಗೆ ವರದಕ್ಷಿಣೆ (Dowry) ತರುವಂತೆ ಮಾನಸಿಕ ಹಾಗೂ ದೈಹಿಕ ಕಿರಕುಳ ನೀಡಿದ ಪರಿಣಾಮ ಪತಿ ಸೇರಿದಂತೆ ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ವಡ್ಡರಹಟ್ಟಿಯ ಹನುಮಂತ ಹಾಗೂ ಮೀನಾಕ್ಷಿ ಜೊತೆ ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು ಎಂಟು ಲಕ್ಷ ರೂಪಾಯಿ ಖರ್ಚು ಮಾಡಿ ಮದುವೆ (Marriage) ಮಾಡಲಾಗಿತ್ತು. ಜೊತೆಗೆ 20 ಗ್ರಾಂ ಬ್ರಾಸ್ಲೈಟ್, 25 ಗ್ರಾಂ ಬಂಗಾರದ ಚೈನ್ ಮತ್ತು ಡಾಲರ್, 10 ಗ್ರಾಂ ಉಂಗುರ, ಬೈಕ್ ಕೊಳ್ಳಲು 60 ಸಾವಿರ ಹಣ, ಇದರ ಜೊತೆಗೆ 1 ಲಕ್ಷದ 40 ಸಾವಿರ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಇಷ್ಟಾದರೂ ಪತ್ನಿಗೆ ಹನುಮಂತ ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡಿದ್ದಾನೆ.
ಹನುಮಂತನ ಕುಟುಂಬಸ್ಥರಾದ ಗಂಗಾಧರ, ರಾಮಾಂಜಿನಿಪ್ಪ, ರಾಧ, ಅಂಜಿನಪ್ಪ ಎಂಬುವವರು ನಿತ್ಯ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಆಕೆಯ ಜುಟ್ಟನ್ನು ಹಿಡಿದು ಎಳೆದಾಡಿ ಹೊಡೆಯುವುದು, ಬಡಿಯುವುದು ಮಾಡಿ ಮನೆಯಿಂದ ಹೊರದಬ್ಬಿದ್ದರು. ಇದರಿಂದ ನೊಂದ ಮಹಿಳೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸದ್ಯ ಮಧುಗಿರಿ ಅಧಿಕ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರ ಆದೇಶದಂತೆ ಐವರ ವಿರುದ್ಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಾಗಿದೆ. ಐಪಿಸಿ 323, 324, 498ಎ, 504, 506, 149 ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ: ಮಹೇಶ್
ಇದನ್ನೂ ಓದಿ: Viral Video :10 ಲಕ್ಷ ರೂ ವರದಕ್ಷಿಣೆಗೆ ಬೇಡಿಕೆಯಿಟ್ಟ ವರನ ಕುಟುಂಬ: ಹಿಗ್ಗಾಮುಗ್ಗ ಥಳಿಸಿದ ವಧುವಿನ ತಂದೆ
Published On - 9:47 am, Wed, 29 December 21