ತುಮಕೂರಿನ ನಾನಾ ಕಡೆಗಳಲ್ಲಿ ಡಿಸೆಂಬರ್ 29 ಕ್ಕೆ ವಿದ್ಯುತ್ ವ್ಯತ್ಯಯ, ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ನೋ ಪವರ್
ಬೆಸ್ಕಾಂ ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಕೂಡ ವಾರ್ಷಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ, ಹೀಗಾಗಿ ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ತುಮಕೂರು ಬೆಸ್ಕಾಂ ವಿಭಾಗದ ಕ್ಯಾತ್ಸಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾರ್ಯ ನಿರ್ವಹಣೆ ನಡೆಯುತ್ತಿದೆ. ಹೀಗಾಗಿ ಡಿಸೆಂಬರ್ 29 ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಬಡ್ಡಿ ಹಳ್ಳಿ, ಗೋಕುಲ ಬಡಾವಣೆ, ಟೂಡಾ ಲೇಔಟ್, ಮಂಜುನಾಥ್ ನಗರ, ಗಿರಿನಗರ, ಶಿವರಾಮಕಾರಂತ ನಗರ, ಸಿದ್ದರಾಮೇಶ್ವರ ನಗರ, ಸಾಬರಪಾಳ್ಯ ಬಡಾವಣೆ, ಊರ್ಡಿಗೆರೆ, ದೇವರಾಯನದುರ್ಗ, ದುರ್ದದಹಳ್ಳಿ ಅರೆಗುಜ್ಜನಹಳ್ಳಿ, ಮೈದಾಳ ಹೊದೆಕಲ್ಲು, ಸೀತಕಲ್ಲು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಜೊತೆಗೆ ಬೆಸ್ಕಾಂ ನಗರ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ಕೂಡ ವಾರ್ಷಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ, ಹೀಗಾಗಿ ನಾಳೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ನಗರದ ಮರಳೂರು ಜನತಾ ಕಾಲೋನಿ, ಟೂಡಾ ಲೇಔಟ್, ಸದಾಶಿವನಗರ, ಬನಶಂಕರಿ, ಕುರಿಪಾಳ್ಯ, ಉಪ್ಪಾರಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶನಾಲಯವು, ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಾಂಸ್ಕೃತಿಕ ಸಂಘಸಂಸ್ಥೆಗಳ ಚಟುವಟಿಕೆ ಅಸಂಘಟಿತ ಕಲಾವಿದರಿಗೆ ವಾದ್ಯಪರಿಕರ/ ವೇಷಭೂಷಣ ಖರೀದಿ ಹಾಗೂ ಶಿಲ್ಪ ಚಿತ್ರಕಲಾವಿದರ ಕಲಾಪ್ರದರ್ಶನಕ್ಕೆ ಧನ ಸಹಾಯ ನೀಡಲು ಸೇವಾ ಸಿಂದು ಮೂಲಕ ಅರ್ಜಿ ಆಹ್ವಾನಿಸಿದೆ. ಆಸಕ್ತರು 2022 ರ ಜನವರಿ 18 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿಎಮ್ ರವಿಕುಮಾರ್ ತಿಳಿಸಿದ್ದಾರೆ.
ವರದಿ: ಮಹೇಶ್, ಟಿವಿ9 ತುಮಕೂರು
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್; ಯುವಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ಮುಂಬೈ ಪೊಲೀಸ್