ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವೀಟ್; ಯುವಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದ ಮುಂಬೈ ಪೊಲೀಸ್
ಯುವಕ ಮಾನಸಿಕವಾಗಿ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಮಾಡಿದ್ದ. ಆದರೆ ಮುಂಬೈ ಸೈಬರ್ ಪೊಲೀಸ್, ಪಿಎಸ್ಐ ವಾಫ್, ವಿರಾರ್ ಅವರು ತಕ್ಷಣಕ್ಕೆ ಅಮೀರ್ನನ್ನು ಭೇಟಿಯಾಗಿ ಆತನ ಮನಃಪರಿವರ್ತನೆಗೆ ಮುಂದಾಗಿದ್ದಾರೆ.
ಟ್ವಿಟರ್ನಲ್ಲಿ ಪೋಸ್ಟ್ ಪ್ರಕಟಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ ಯುವಕನನ್ನು ಮುಂಬೈನ ಸೈಬರ್ ಪೊಲೀಸರು ರಕ್ಷಣೆ ಮಾಡಿದ್ದಾರೆ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಯುವಕ ಡೆತ್ ನೋಟ್ ಬರೆದು ಅದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಯುವಕನ ನಿರ್ಧಾರವನ್ನು ಬದಲಾಯಿಸಲು ಮುಂದಾದ ಪೊಲೀಸರು ಜೀವದ ಮತ್ತು ಬದುಕಿನ ಮೌಲ್ಯವನ್ನು ಆತನಿಗೆ ಅರ್ಥೈಸುವ ಪ್ರಯತ್ನ ಮಾಡಿದ್ದು, ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ವತಃ ಈ ಸಂಗತಿಯನ್ನು ಮುಂಬೈ ಪೊಲೀಸರು (Mumbai Police) ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿದ ಯುವಕನನ್ನು ಅಮೀರ್ ಎಂದು ಗುರುತಿಸಲಾಗಿದೆ.
ಮುಂಬೈ ಪೊಲೀಸರ ಟ್ವೀಟ್ ಪ್ರಕಾರ, ಯುವಕ ಮಾನಸಿಕವಾಗಿ ನೊಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಮಾಡಿದ್ದ. ಆದರೆ ಮುಂಬೈ ಸೈಬರ್ ಪೊಲೀಸ್, ಪಿಎಸ್ಐ ವಾಫ್, ವಿರಾರ್ ಅವರು ತಕ್ಷಣಕ್ಕೆ ಅಮೀರ್ನನ್ನು ಭೇಟಿಯಾಗಿ ಆತನ ಮನಃಪರಿವರ್ತನೆಗೆ ಮುಂದಾಗಿದ್ದಾರೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಎಂದು ಅರಿವು ಮೂಡಿಸಿ ಯುವಕನ ತಪ್ಪು ನಿರ್ಧಾರಕ್ಕೆ ಕಡಿವಾಣ ಹಾಕಿದ್ದಾರೆ.
We are happy to share that after the intervention of Mumbai Cyber Police, PSI Wagh, Virar, met Aamir & spoke him out of his dangerous ideas. We request citizens to never resort to such extremes,the repercussions of which could be irreversible. Reach out for help. #YouMatterMumbai https://t.co/0GvhzDKImY
— Mumbai Police (@MumbaiPolice) December 27, 2021
ಮೀಟರ್ ಬಡ್ಡಿಗೆ ಬೇಸತ್ತು ನಿದ್ದೆ ಮಾತ್ರೆ ಸೇವಿಸಿ ಮಹಿಳೆ ಆತ್ಮಹತ್ಯೆ, ವಿಡಿಯೋ ಆಧರಿಸಿ ಮೂವರ ವಿರುದ್ಧ ದೂರು ದಾಖಲು
Published On - 9:51 am, Tue, 28 December 21