Sign In

By signing in or creating an account, you agree with Associated Broadcasting Company's Terms & Conditions and Privacy Policy.

Suicide: ನೇಣು ಬಿಗಿದುಕೊಂಡು 4 ತಿಂಗಳ ಗರ್ಭಿಣಿ ಸಾವು, ಗಂಡನ ವರದಕ್ಷಿಣೆ ಕಿರುಕುಳದಿಂದ್ಲೇ ಆತ್ಮಹತ್ಯೆ ಎಂದು ಕುಟುಂಬಸ್ಥರ ಆರೋಪ

ಮುಸ್ಕಾನ್ ಪತಿ ರೋಹಿಮ್, ಪ್ರತಿದಿನ ಗಾಂಜಾ ಸೇವಿಸಿ ಮನೆಗೆ ಬಂದು ಪತ್ನಿಗೆ ಟಾರ್ಚರ್ ಕೊಟ್ಟಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಿದ್ದ ಹೀಗಾಗಿ ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Suicide: ನೇಣು ಬಿಗಿದುಕೊಂಡು 4 ತಿಂಗಳ ಗರ್ಭಿಣಿ ಸಾವು, ಗಂಡನ ವರದಕ್ಷಿಣೆ ಕಿರುಕುಳದಿಂದ್ಲೇ ಆತ್ಮಹತ್ಯೆ ಎಂದು ಕುಟುಂಬಸ್ಥರ ಆರೋಪ
ಮೃತ ಮುಸ್ಕಾನ್ ಹಾಗೂ ಪತಿ ರೋಹಿಮ್
Follow us
TV9 Web
| Updated By: ಆಯೇಷಾ ಬಾನು

Updated on: Sep 19, 2021 | 9:36 AM

ಬೆಳಗಾವಿ: ಬೆಳಗಾವಿ ನಗರದ ಖಂಜರ್ ಗಲ್ಲಿಯ ನಿವಾಸಿ ಮುಸ್ಕಾನ್ ಎಂಬ 4 ತಿಂಗಳ ಗರ್ಭಿಣಿ ಗಂಡನ ಕಿರುಕುಳ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಸ್ಕಾನ್ ಪತಿ ರೋಹಿಮ್, ಪ್ರತಿದಿನ ಗಾಂಜಾ ಸೇವಿಸಿ ಮನೆಗೆ ಬಂದು ಪತ್ನಿಗೆ ಟಾರ್ಚರ್ ಕೊಟ್ಟಿದ್ದ. ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ನೀಡುತ್ತಿದ್ದ ಹೀಗಾಗಿ ಮುಸ್ಕಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬಡ ಕುಟುಂಬದಲ್ಲಿ ಜನಿಸಿದ್ದ ಮುಸ್ಕಾನ್, ಚಿಕ್ಕವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ಲು. ಹೆತ್ತಮ್ಮ ಕೂಲಿ ಮಾಡಿ ಮಗಳನ್ನ ಸಾಕಿ ಸಲುಹಿದ್ರು. ಮಗಳ ಮೇಲೆ ನೂರಾರು ಕನಸು ಕಂಡಿದ್ದ ತಾಯಿ, ಕಳೆದ 8 ತಿಂಗಳ ಹಿಂದೆ ಬೆಳಗಾವಿಯ ಶಹಾಪುರದ ಅಳವಣ ಗಲ್ಲಿಯ ನಿವಾಸಿಯಾಗಿದ್ದ ರೋಹಿಮ್ ಅನ್ನೋನ ಜೊತೆ ಮದುವೆ ಮಾಡಿದ್ರು. ಒಂದು ತಿಂಗಳು ಸುಮ್ಮನಿದ್ದ ರೋಹಿಮ್ ತನ್ನ ಅಸಲಿ ಮುಖ ತೋರಿಸಿದ್ದಾನೆ. ಪ್ರತಿದಿನ ಗಾಂಜಾ ಸೇವಿಸಿ ಮನೆಗೆ ಬಂದು ಪತ್ನಿಗೆ ಟಾರ್ಚರ್ ಕೊಟ್ಟಿದ್ದಾನೆ. ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡ್ತಿದ್ನಂತೆ. ಹೀಗಿದ್ರೂ ಎಲ್ಲಾ ಸಹಿಸಿಕೊಂಡು ಸಂಸಾರ ಮಾಡಿದ್ದ ಮುಸ್ಕಾನ್ 4 ತಿಂಗಳ ಗರ್ಭಿಣಿ ಆಗಿದ್ಲು. ಆದ್ರೆ, ಇತ್ತೀಚೆಗೆ ಆತನ ಗಂಡ, ಗರ್ಭಿಣಿ ಅಂತ್ಲೂ ನೋಡದೆ ಟಾರ್ಚರ್ ಕೊಟ್ಟಿದ್ನಂತೆ. ಇದೇ ಕಾರಣಕ್ಕೆ ಸೆಪ್ಟೆಂಬರ್ 14ರಂದು ಮುಸ್ಕಾನ್ ನೇಣಿಗೆ ಕೊರಳೊಡಿದ್ದಾಳೆ ಅಂತಾ ನೊಂದ ಕುಟುಂಬಸ್ಥರು ಆರೋಪಿಸ್ತಿದ್ದಾರೆ.

ಮುಸ್ಕಾನ್ ದೂರದ ಸಂಬಂಧಿಯಾಗಿರೋ ಹಸೀನಾ ಎಂಬಾಕೆ ಜೊತೆ ಈ ರೋಹಿಮ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ನಂತೆ. ಮದುವೆಗೂ ಮೊದ್ಲೇ ಮಹಿಳೆ ಜೊತೆ ಸರಸ ಆಡ್ತಿದ್ನಂತೆ. ಇಷ್ಟೇ ಅಲ್ಲ, ಇದೇ ಹಸೀನಾ ನಮ್ಮ ಅಕ್ರಮ ಸಂಬಂಧಕ್ಕೆ ಯಾರು ಅಡ್ಡಿ ಬರಬಾರ್ದು ಅಂತಾ ಮುಸ್ಕಾನ್ ಮತ್ತು ರೋಹಿಮ್ಗೆ ಮದುವೆ ಮಾಡಿಸಿದ್ಲಂತೆ. ಈ ವಿಚಾರ ಮುಸ್ಕಾನ್ಗೆ ಗೊತ್ತಾಗ್ತಿದ್ದಂತೆ ಮನೆಯಲ್ಲಿ ಗಲಾಟೆ ಮಾಡೋಕೆ ಸ್ಟಾರ್ಟ್ ಮಾಡ್ತಿದ್ನಂತೆ. ಮತ್ತೊಂಡ್ಕೆ, ರೋಹಿಮ್ನ ಅಪ್ಪ, ಅಮ್ಮ ಕೂಡ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ ಟಾರ್ಚರ್ ಕೊಡ್ತಿದ್ರಂತೆ. ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಮೃತಳ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದಾರೆ.

ಸದ್ಯ, ಪೊಲೀಸರು ರೋಹಿಮ್ನನ್ನ ವಶಕ್ಕೆ ಪಡೆದು ವಿಚಾರಣೆ ಮಾಡ್ತಿದ್ದಾರೆ. ಮತ್ತೊಂದ್ಕಡೆ ಸ್ಥಳೀಯ ನಿವಾಸಿಗಳು ರೋಹಿಮ್ ಪೋಷಕರನ್ನೂ ಬಂಧಿಸಿ ಅಂತಾ ಪ್ರತಿಭಟನೆ ಮಾಡಿದ್ದಾರೆ. ಅಲ್ದೆ, ಮದುವೆ ಮಾಡಿಸಿದ ಹಸೀನಾಗೆ ಒಂದು ಗತಿ ಕಾಣಿಸುವವರೆಗೂ ನ್ಯಾವ್ಯಾರು ಸುಮ್ಮನೆ ಕೂರಲ್ಲ ಅಂತಾ ಆಕ್ರೋಶ ಹೊರ ಹಾಕಿದ್ದಾರೆ. ಏನೇ ಇರಲಿ, 4 ತಿಂಗಳ ಗರ್ಭಿಣಿ ಸಾವಿನ ಮನೆ ಸೇರಿದ್ದು ಮಾತ್ರ ನಿಜಕ್ಕೂ ಅನ್ಯಾಯ.

ಇದನ್ನೂ ಓದಿ: ಬೆಂಗಳೂರು: 14 ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ