ಬೆಳಗಾವಿಯಲ್ಲಿ ಬೋರ್ವೆಲ್ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಸಾವು; ಸಾವಿನ ಹಿಂದೆ ತಂದೆಯ ಕೈವಾಡದ ಶಂಕೆ
ಆದರೆ ಬೋರ್ವೆಲ್ಗೆ ಬಿದ್ದ ಮಗುವನ್ನು ರಕ್ಷಿಸುವ ಕಾರ್ಯಚರಣೆ ಯಶಸ್ಸು ಪಡೆಯಲು ವಿಧಿ ಬಿಡಲಿಲ್ಲ.
ಬೆಳಗಾವಿ: ಬೋರ್ವೆಲ್ಗೆ ಬಿದ್ದಿದ್ದ ಎರಡೂವರೆ ವರ್ಷದ ಮಗು ಮೃತಪಟ್ಟಿದೆ. ಮಗು ಮೃತಪಟ್ಟಿರುವುದಾಗಿ ಬೆಳಗಾವಿ ಎಸ್ಪಿ ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಅಧಿಕೃತ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಆಲಖನೂರು ಗ್ರಾಮದಲ್ಲಿ ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದ ಶರತ್ ಹಸಿರೆ ಎಂಬ ಎರಡೂವರೆ ವರ್ಷದ ಮಗು ಇಂದು ಸಂಜೆ ಬೋರ್ವೆಲ್ ಬಿದ್ದಿದ್ದು ಬೆಳಕಿಗೆ ಬಂದಿತ್ತು. ತೋಟದ ಮನೆಯಲ್ಲೇ ಬಾಲಕನ ಕುಟುಂಬ ವಾಸವಿತ್ತು. ಮನೆಯಿಂದ 200 ಮೀಟರ್ ದೂರದಲ್ಲಿದ್ದ ಬೋರ್ವೆಲ್ ಬಿದ್ದು ಮಗು ಮೃತಪಟ್ಟಿದೆ.
ತನಿಖೆಗೆ ಆಗಮಿಸಿದ್ದ ಪೊಲೀಸರನ್ನು ಮಗುವಿನ ತಂದೆ ಸಿದ್ದಪ್ಪ ಬೋರ್ವೆಲ್ ಬಳಿ ಕರೆದೊಯ್ದಿದ್ದ. ಜಮೀನಿನಲ್ಲಿ ಬೋರ್ವೆಲ್ ಇದೆ ಬನ್ನಿ ನೋಡೋಣ ಎಂದಿದ್ದ. ಬೋರ್ವೆಲ್ನಲ್ಲಿ ಮಗು ಬಿದ್ದಿರಬಹುದೆಂದು ಕರೆದೊಯ್ದಿದ್ದ. ಬೋರ್ವೆಲ್ನಲ್ಲಿ ನೋಡಿದಾಗ ಮಗು ಇರುವುದು ಗೊತ್ತಾಗಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆನಂತರ ಬೋರ್ವೆಲ್ನಿಂದ ಮಗುವನ್ನು ಹೊರತೆಗೆದು ಮಗುವಿನ ತಂದೆ ಸಿದ್ದಪ್ಪನನ್ನು ಹಾರೂಗೇರಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಮಗುವನ್ನು ರಕ್ಷಿಸಲು ಸ್ಥಳಕ್ಕೆ ತಹಶೀಲ್ದಾರ್ ಕಳಿಸಿ ಕಾರ್ಯಾಚರಣೆ ಆರಂಭಿಸಿದ್ದೇವೆ. ಅಗ್ನಿಶಾಮಕ ಸಿಬ್ಬಂದಿಯಿಂದ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದೇವೆ. ನಿನ್ನೆ ಸಂಜೆ ಬಾಲಕ ನಾಪತ್ತೆಯಾದ ಬಗ್ಗೆ ತಂದೆ ದೂರು ನೀಡಿದ್ದರು ಎಂದು ಟಿವಿ9ಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದರು. ಆದರೆ ಅವರ ಕಾರ್ಯಚರಣೆ ಯಶಸ್ಸು ಪಡೆಯಲು ವಿಧಿ ಬಿಡಲಿಲ್ಲ.
ಇದನ್ನೂ ಓದಿ:
ಬೆಳಗಾವಿಯಲ್ಲಿ ಬೋರ್ವೆಲ್ಗೆ ಬಿದ್ದ ಎರಡೂವರೆ ವರ್ಷದ ಮಗು; ಬದುಕಿ ಬರಲು ಪ್ರಾರ್ಥಿಸೋಣ
(Belagavi 2 and half years kid died by fell in Borewell rescue operation failed)
Published On - 8:59 pm, Sat, 18 September 21