Viral Video :10 ಲಕ್ಷ ರೂ ವರದಕ್ಷಿಣೆಗೆ ಬೇಡಿಕೆಯಿಟ್ಟ ವರನ ಕುಟುಂಬ: ಹಿಗ್ಗಾಮುಗ್ಗ ಥಳಿಸಿದ ವಧುವಿನ ತಂದೆ
ಮದುವೆ ಮನೆಯಲ್ಲಿ ಡೌರಿ ಕೇಳಿದ್ದಕ್ಕಾಗಿ ವಧುವಿನ ಕಡೆಯವರು ವರ ಮತ್ತು ಆತನ ತಂದೆಗೆ ಹಿಗ್ಗಾಮುಗ್ಗ ಥಳಿಸಿದ ವೀಡಿಯೋ ವೈರಲ್ ಆಗಿದೆ
ಸಾಮಾಜಿಕ ಜಾಲತಾಣಗಳು ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ರೀತಿಯ ವೀಡಿಯೋಗಳಿಗೆ ತಾಣವಾಗಿದೆ. ಉತ್ತರಪ್ರದೇಶದಲ್ಲಿ ಹಲವು ನಗೆಟಿವ್ ಘಟನೆಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಮದುವೆ ಮನೆಯಲ್ಲಿ ಡೌರಿ ಕೇಳಿದ್ದಕ್ಕಾಗಿ ವಧುವಿನ ಕಡೆಯವರು ವರ ಮತ್ತು ಆತನ ತಂದೆಗೆ ಹಿಗ್ಗಾಮುಗ್ಗ ಥಳಿಸಿದ ವೀಡಿಯೋ ವೈರಲ್ ಆಗಿದೆ. ವರದಿಯ ಪ್ರಕಾರ ಆಗ್ರಾ ನಿವಾಸಿ ಮುಜಾಮಿಲ್ ಎನ್ನುವ ವ್ಯಕ್ತಿ ಹಾಗೂ ಆತನ ತಂದೆ ಮೊಹಮ್ಮದ್ ಹುಸೇನ್ ಮದುವೆಯ ಹಿಂದಿನ ದಿನ ರಾತ್ರಿ ವಧುವಿನ ಕಡೆಯವರನ್ನು 10 ಲಕ್ಷ ರೂ ವರದಕ್ಷಿಣೆ ನೀಡುವಂತೆ ಕೇಳಿದ್ದಾರೆ. ಇಲ್ಲವಾದರೆ ಮದುವೆಯನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಕೋಪಗೊಂಡ ವಧುವಿನ ಕಡೆಯವರು ವರ ಮತ್ತು ಆತನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಡಿಸೆಂಬರ್ 12ರಂದು ನಡೆದಿದ್ದು, ಇದೀಗ ವೈರಲ್ ಆಗಿದೆ. ಡೈಲಿ ಪಾಕಿಸ್ತಾನ ಸುದ್ದಿ ಸಂಸ್ಥೆಯು ಈ ಕುರಿತು ವರದಿ ಮಾಡಿದೆ. ಘಟನೆಯ ಬಗ್ಗೆ ವಧುವಿನ ತಂದೆ, ಈಗಾಗಲೇ ನಾವು ವರನ ಕಡೆಯವರಿಗೆ ವಜ್ರದ ಉಂಗುರ ಹಾಗೂ 3 ಲಕ್ಷ ರೂಗಳನ್ನು ನೀಡಿದ್ದೇವೆ. ಆದರೂ ಅವರು ಮತ್ತೆ 10 ಲಕ್ಷಕೇಳುತ್ತಿದ್ದಾರೆ. ಕೊಡುವುದಿಲ್ಲ ಎಂದರೆ ಮದುವೆಯನ್ನು ನಿಲ್ಲಿಸುವುದಾಗ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಅವರ ಮೇಲೆ ಹಲ್ಲೆ ನಡೆಸುವಂತಾಯಿತು ಎಂದು ಹೇಳಿಕೆ ನೀಡಿದ್ದಾರೆ.
गाजियाबाद से हैरान कर देने वाला मामला 12 दिसंबर का है, दूल्हे की पिटाई का वीडियो हर तरफ चर्चा का विषय बना हुआ है. बताया जा रहा है कि खाना खाने के बाद दूल्हे मुजम्मिल हुसैन और उसके पिता महमूद हुसैन ने निकाह से पहले 10 लाख रुपये नकद की मांग की और बिना पैसे दिए निकाह से मना कर दिया pic.twitter.com/C3u3sP4eLY
— Mohammad Mohsin I.A.S (@mmiask) December 21, 2021
ಇದರ ವೀಡಿಯೋವನ್ನು ಮೊದಲು ವೈರಲ್ ವಿಡಿಯೋ ಎನ್ನುವ ಟ್ವಿಟರ್ ಖಾತೆ ಹಂಚಿಕೊಂಡಿತ್ತು. ಬಳಿಕ ಹಲವು ಪುಟಗಳು ವೀಡಿಯೋ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ.