Viral : 60ರ ಹರೆಯದ ವೃದ್ಧೆಯ ಬ್ರಾಂಡ್​ ಫೋಟೋಶೂಟ್​: ವೃದ್ಧೆಯ ಸ್ಟೈಲಿಷ್​ ಲುಕ್​ಗೆ ನೆಟ್ಟಿಗರು ಫಿದಾ

ಪ್ಯಾಷನ್​ ಡಿಸೈನರ್ ಒಬ್ಬರು 60 ವರ್ಷದ ತಮ್ಮ ತಾಯಿಗೆ ತಾವು ತಯಾರಿಸಿದ ಡ್ರೆಸ್​ ತೊಡಿಸಿ ಫೊಟೋಶೂಟ್​ ಮಾಡಿಸಿದ್ದಾರೆ. ಅದರ ಕಿರು ವೀಡಿಯೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ.

Viral : 60ರ ಹರೆಯದ ವೃದ್ಧೆಯ ಬ್ರಾಂಡ್​ ಫೋಟೋಶೂಟ್​: ವೃದ್ಧೆಯ ಸ್ಟೈಲಿಷ್​ ಲುಕ್​ಗೆ ನೆಟ್ಟಿಗರು ಫಿದಾ
ಫೋಟೋಶೂಟ್​ನಲ್ಲಿ ವ್ಥದ್ಧೆ ಕಾಣಿಸಿಕೊಂಡಿದ್ದು ಹೀಗೆ
Follow us
TV9 Web
| Updated By: Pavitra Bhat Jigalemane

Updated on: Dec 21, 2021 | 1:04 PM

ಪ್ಯಾಷನ್​ ಲೋಕವೇ ಹಾಗೆ, ಪ್ರತಿದಿನ ಬದಲಾಗುತ್ತಿರುತ್ತದೆ. ಹೊಸ ಟ್ರೆಂಡ್​ಗಳು ವಿಭಿನ್ನ ರೀತಿಯ ಉಡುಗೆಗಳು ಪ್ಯಾಷನ್​ ಪ್ರಿಯರನ್ನು ಆಕರ್ಷಿಸುತ್ತವೆ. ಇನ್ನು ಪ್ಯಾಷನ್​ ಡಿಸೈನರ್​ ಗಳಂತೂ ತಮ್ಮ ಕ್ರಿಯೆಟಿವಿಟಿಗೆ ತಕ್ಕಹಾಗೆ ವಿಭಿನ್ನ, ವಿಚಿತ್ರ ರೀತಿಯ ಡ್ರೆಸ್​ಗಳನ್ನು ವಿನ್ಯಾಸಗೊಳಿಸುತ್ತಾರೆ. ಅದನ್ನು ರೂಪದರ್ಶಿಗಳಿಗೆ ತೊಡಿಸಿ ಜಾಹೀರಾತು ನೀಡುತ್ತಾರೆ. ಸಾಮಾನ್ಯವಾಗಿ ಪ್ಯಾಷನ್​ ಡಿಸೈನರ್​ಗಳು ತಮ್ಮ ವಿನ್ಯಾಸಿತ ಡ್ರೆಸ್​ಗಳಿಗೆ ಹದಿಹರೆಯದ ಅಂದವಾಗಿರುವ ಮಾಡೆಲ್​ಗಳನ್ನು ಹುಡುಕಿ ಅವರಿಗೆ ತೊಡಿಸಿ ಪ್ರಚಾರ ಮಾಡುತ್ತಾರೆ. ಆದರೆ ಇಲ್ಲೊಬ್ಬ ಪ್ಯಾಷನ್​ ಡಿಸೈನರ್​ 60 ವರ್ಷದ ತಮ್ಮ ತಾಯಿಗೆ ತಾವು ತಯಾರಿಸಿದ ಡ್ರೆಸ್​ ತೊಡಿಸಿ ಫೊಟೋಶೂಟ್​ ಮಾಡಿಸಿದ್ದಾರೆ. ಅದರ ಕಿರು ವೀಡಿಯೋವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ 60ರ ಹರೆಯದ ವೃದ್ಧೆಯ ಬ್ರಾಂಡ್​ ಫೋಟೊ ಶೂಟ್​ ಸಖತ್​ ವೈರಲ್​ ಅಗಿದೆ.

ಈ ಫೋಟೋ ಶೂಟ್​ ಮಾಡಿದ್ದು ಜನಪ್ರಿಯ ಬ್ರಾಂಡ್​ ಐಇಎಂಬಿಇ (IEMBE) ಕಂಪನಿ. ಈ ಕಂಪನಿಯ ಸಂಸ್ಥಾಪಕ ಟ್ರಾವಿಸ್​ ಡಿಮೀರ್ ​ ( Travis Di’meer)​ ಎನ್ನುವವರು ತಮ್ಮ 60 ವರ್ಷದ ತಾಯಿಗೆ ತಾವು ವಿನ್ಯಾಸಗೊಳಿಸಿದ ಡ್ರೆಸ್​ ತೊಡಿಸಿ ಫೊಟೋಶೂಟ್​ ಮಾಡಿಸಿದ್ದಾರೆ. ಹಸಿರು ಬಣ್ಣದ ಕೋಟ್​, ಹಸಿರು ಬಣ್ಣದ ಹ್ಯಾಂಡ್​ ಬಾಗ್​, ಟೋಪಿ, ಕಪ್ಪು ಕನ್ನಡಕ, ಕೈಗೆ ಬಿಳಿಯ ಬಣ್ಣದ ಗ್ಲೌಸ್​ ಧರಿಸಿ ಕ್ಯಾಟ್ ವಾಕ್​ ಮಾಡಿದ ವೃದ್ಧೆಯ ಆತ್ಮವಿಶ್ವಾಸಕ್ಕೆ ಮೆಚ್ಚಲೇಬೇಕು ಎನ್ನುತ್ತಿದ್ದಾರೆ ವೀಕ್ಷಕರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪೋಟೋಶೂಟ್​ನ ವೀಡಿಯೋ ಹಾಗೂ ಫೋಟೋ ವೈರಲ್​ ಆಗಿದೆ. ಟ್ರಾವಿಸ್​ ಡಿಮೀರ್​ ( Travis Di’meer) ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡ ಫೋಟೋಗಳು 79 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿದ್ದು, ವೀಡಿಯೋ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. ನೆಟ್ಟಿಗರು ಈ ವಿಭಿನ್ನ​ ಕಾಂಬಿನೇಷನ್​ ಉಡುಗೆಯ ಫೋಟೋಶೂಟ್​ನ್ನು ಮೆಚ್ಚಿಕೊಂಡಿದ್ದಾರೆ. ಜೆತೆಗೆ ಅಮೆರಿಕದ ಖ್ಯಾತ ರಾಪ್​ ಗಾಯಕಿ ಹಾಗೂ ಬರಹಗಾರ್ತಿ ಕಾರ್ಡಿ ಬಿ ಕೂಡ ಈ ಉಡುಗೆಯನ್ನು ಮೆಚ್ಚಿಕೊಂಡಿದ್ದು, ರೀಟ್ಟವೀಟ್​ ಮಾಡಿದ್ದಾರೆ.

ಇದನ್ನೂ ಓದಿ:

Winter Season 2021: ಆನಿಮೇಟೆಡ್ ಡೂಡಲ್​ ಮೂಲಕ ಚಳಿಗಾಲವನ್ನು ವಿಶೇಷವಾಗಿ ಸ್ವಾಗತಿಸಿದ ಗೂಗಲ್​

ಕುಟುಂಬದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾದ ಸಲಿಂಗಿ ಜೋಡಿ; ಹೈದರಾಬಾದ್​ನಲ್ಲಿ ನಡೆದ ಮದುವೆ ಫೋಟೋಗಳು ವೈರಲ್​

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ