Winter Season 2021: ಆನಿಮೇಟೆಡ್ ಡೂಡಲ್ ಮೂಲಕ ಚಳಿಗಾಲವನ್ನು ವಿಶೇಷವಾಗಿ ಸ್ವಾಗತಿಸಿದ ಗೂಗಲ್
Google Doodles: ಈ ಬಾರಿಯ ಚಳಿಗಾಲವನ್ನು ಗೂಗಲ್ ಹಿಮದಲ್ಲಿ ಮುಳ್ಳು ಹಂದಿಯನ್ನು ಒಳಗೊಂಡಿರುವ ಆನಿಮೇಟೆಡ್ ಡೂಡಲ್ ಅನ್ನು ನಿರ್ಮಿಸಿ ವಿಶೇಷವಾಗಿ ಸ್ವಾಗತಿಸಿದೆ.
ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಚಳಿಗಾಲ ಆರಂಭವಾಗಿದೆ. ಮೈಕೊರೆಯುವ ಚಳಿಗೆ ಜನ ನಡುಗುತ್ತಿದ್ದಾರೆ. ಭಾರತದ ಬಹುತೇಕ ರಾಜ್ಯಗಳಲ್ಲಿ ತಾಪಮಾನ ಇಳಿದಿದ್ದು, ಶೀತ ಗಾಳಿ ಬೀಸುತ್ತಿದೆ. ಈ ನಡುವೆ ಗೂಗಲ್ ಚಳಿಗಾಲವನ್ನು ಡೂಡಲ್ ಮೂಲಕ ವಿಶೇಷವಾಗಿ ಸ್ವಾಗತಿಸಿದೆ. ಡಿಸೆಂಬರ್ 21ರಂದು ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಆರಂಭಗೊಂಡು 2022ರ ಮಾರ್ಚ್ 20ರಂದು ಅಂತ್ಯಗೊಳುತ್ತದೆ.ಈ ಸಮಯದಲ್ಲಿ ಹಗಲಿನ ಅವಧಿ ಕಡಿಮೆ ಹಾಗೂ ದೀರ್ಘ ರಾತ್ರಿಯನ್ನು ಹೊಂದಿರುತ್ತದೆ. ಈ ಬಾರಿಯ ಚಳಿಗಾಲವನ್ನು ಗೂಗಲ್ ಹಿಮದಲ್ಲಿ ಮುಳ್ಳು ಹಂದಿಯನ್ನು ಒಳಗೊಂಡಿರುವ ಆನಿಮೇಟೆಡ್ ಡೂಡಲ್ ಅನ್ನು ನಿರ್ಮಿಸಿ ವಿಶೇಷವಾಗಿ ಸ್ವಾಗತಿಸಿದೆ.
ಬ್ರಿಟಾನಿಕ ವರದಿಯ ಪ್ರಕಾರ ಚಳಿಗಾಲ ಎನ್ನುವುದು ಜರ್ಮನಿ ಭಾಷೆಯಿಂದ ಬಂದ ಪದವಾಗಿದೆ. ಚಳಿಗಾಲವೆಂದರೆ ನೀರಿನ ಸಮಯ ಎಂದರ್ಥ. ಅಂದರೆ ಹಿಮದಿಂದ ಕೂಡಿದ ನೀರಿನ ಮಳೆಯ ದಿನಗಳು. ಚಳಿಗಾಲದ ಆರಂಭದಲ್ಲಿ ಅಂದರೆ ಡಿಸೆಂಬರ್ 21ರಂದು ಸೂರ್ಯನು ತನ್ನ ಪಥದಲ್ಲಿ ಉತ್ತರ ಗೋಳಾರ್ಧದಿಂದ ದಕ್ಷಿಣಕ್ಕೆ ಸಂಚರಿಸುತ್ತಾನೆ. ಹಾಗೂ ಸಾಮಾನ್ಯವಾಗಿ ಜೂನ್ 21 ಅಥವಾ 22ರಂದು ದೂರದ ಉತ್ತರ ಗೋಳಾರ್ಧಕ್ಕೆ ಸಂಚರಿಸುತ್ತಾನೆ. ಆ ದಿನ ಕಡಿಮೆ ಹಗಲು ಹಾಗೂ ದೀರ್ಘ ರಾತ್ರಿಯನ್ನು ನೋಡಬಹುದು.
ಈಗಾಗಲೇ ದೆಹಲಿಯಲ್ಲಿ ಕನಿಷ್ಠ ಮಟ್ಟಕ್ಕೆ ತಾಪಮಾನ ಕುಸಿದಿದ್ದು, 3.2ರಷ್ಟು ತಾಪಮಾನ ದಾಖಲಾಗಿದೆ. ಇನ್ನು ಎರಡು ದಿನ ವಾಯುವ್ಯ ಭಾರತದ ಭಾಗಗಳಲ್ಲಿ ಶೀತ ಗಾಳಿ ಹಾಗೂ ಮೈಕೊರೆಯುವ ಚಳಿಯ ವಾತಾವರಣ ಮುಂದುವರೆಯಲಿದೆ. ಬುಧವಾರದ ನಂತರ ಹವಾಮಾನ ಬದಲಾವಣೆಯಾಗಲಿದೆ. ಹಿಮಾಲಯದ ಪಶ್ಚಿಮ ಬಾಗಗಳಲ್ಲಿ ಚದುರಿದ ಮಳೆ ಬೀಳುವ ಸಾಧ್ಯತೆ ಇದ್ದು, ಇದರಿಂದ ಶೀತ ಗಾಳಿ ಮತ್ತು ಚಳಿಯ ಪ್ರಮಾಣ ಏರಿಕೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
As the Earth tilts on its axis, many across the Southern Hemisphere prepare to chill out for the next few months ❄️
Happy first day of Winter! #GoogleDoodle → https://t.co/jnu70KdmkK pic.twitter.com/FdagBBvQbe
— Google Doodles (@GoogleDoodles) June 21, 2021
ಜಮ್ಮು ಕಾಶ್ಮೀರದ ಚಿಲ್ಲೈನ್ ಕಲನ್ ಪ್ರದೇಶದಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಮಂಗಳವಾರ ಜಮ್ಮು ಜನತೆ ಹಿಮ ತುಂಬಿದ ಮುಂಜಾವನ್ನು ಅನುಭವಿಸಿದ್ದಾರೆ. ಜನವರಿ 31ರ ವರೆಗೂ ಇದು ಮುಂದುವರೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ:
video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್ ಎಂದ ನೆಟ್ಟಿಗರು