AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್​ ಎಂದ ನೆಟ್ಟಿಗರು

ದೆಹಲಿಯ ಫುಡ್​ ಬ್ಲಾಗರ್ ಒಬ್ಬರು ಪಾರ್ಲೆ ಜಿ ಬಿಸ್ಕತ್ತಿನ ಬರ್ಫಿ ತಯಾರಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ ಎಲ್ಲೆಡೆ ವೈರಲ್​ ಆಗಿದೆ.

video: ಪಾರ್ಲೆ ಜಿ ಬಿಸ್ಕತ್ತಿನಲ್ಲಿ ಬರ್ಫಿ ತಯಾರಿಸಿದ ವ್ಯಕ್ತಿ: ವಾವ್​ ಎಂದ ನೆಟ್ಟಿಗರು
ಪಾರ್ಲೆ ಜಿ ಬರ್ಫಿ
TV9 Web
| Edited By: |

Updated on:Dec 21, 2021 | 9:37 AM

Share

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿ ನೆಟ್ಟಿಗರನ್ನು ಸೆಳೆಯುವ ವೀಡಿಯೋಗಳು ಆಗಾಗ ಹರಿದಾಡುತ್ತಿರುತ್ತದೆ. ಈ ವರ್ಷ ಮುಗಿಯುತ್ತಿದೆ. ಈಗಾಗಲೇ ಹಲವು ವಿಭಿನ್ನ, ವಿಚಿತ್ರ ಖಾದ್ಯಗಳು ಇಂಟೆರ್​ನೆಟ್​ನಲ್ಲಿ ವೈರಲ್​ ಆಗಿ ನೋಡುಗರನ್ನು ಆಶ್ಚರ್ಯಚಕಿತಗೊಳಿಸಿದೆ. ಉದಾಹರಣೆಗೆ ಮಿರಿಂಡಾ ಮಿಶ್ರಿತ ಗೋಲಗಪ್ಪಾ, ಓರಿಯೋ ಬಿಸ್ಕತ್ತಿನ ಪಕೋಡ ಹೀಗೆ ಹತ್ತಾರು ಬಗೆಯ ಖಾದ್ಯಗಳ ನಡುವೆ ಇದೀಗ ದೆಹಲಿಯ ಫುಡ್​ ಬ್ಲಾಗರ್ ಒಬ್ಬರು ಪಾರ್ಲೆ ಜಿ ಬಿಸ್ಕತ್ತಿನ ಬರ್ಫಿ ತಯಾರಿಸಿ ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವೀಡಿಯೋ ಎಲ್ಲೆಡೆ ವೈರಲ್​ ಆಗಿದೆ.

ದೆಹಲಿ ಮೂಲದ ಫುಡ್​ ಬ್ಲಾಗರ್​ ಕರಣ್​ ಸಿಂಘಾಲ್​ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ದೇಸಿ ತುಪ್ಪ ಬಳಸಿ ಪಾರ್ಲೆ ಜಿ ಬಿಸ್ಕತ್​ ಬರ್ಫಿ ತಯಾರಿಸಿದ ವೀಡಿಯೋ ಹಂಚಿಕೊಂಡಿದ್ದಾರೆ. ಐದಾರು ಪಾರ್ಲೆ ಜಿ ಬಿಸ್ಕತ್ತುಗಳು. ದೇಸಿ ಹಸುವಿನ ತುಪ್ಪ ಸಕ್ಕರೆ, ಹಾಲು, ಮತ್ತು ಡ್ರೈ ಫ್ರೂಟ್ಸ್ ಗಳನ್ನು ಹಾಕಿ ರುಚಿಯಾದ ಪಾರ್ಲೆ ಜಿ ಬರ್ಫಿ ತಯಾರಿಸಿದ್ದಾರೆ.  ವೀಡಿಯೋದಲ್ಲಿ ಕರಣ್​ ಅವರು ಮೊದಲು ದೇಸಿ ತುಪ್ಪದಲ್ಲಿ ಬಿಸ್ಕತ್ತುಗಳನ್ನು ಚೆನ್ನಾಗಿ ಹುರಿಯುತ್ತಾರೆ. ಬಳಿಕ ಅದನ್ನು ರುಬ್ಬಿಕೊಂಡು ಅದಕ್ಕೆ ಸಕ್ಕರೆ, ಹಾಲನ್ನು ಹಾಕಿ ಬರ್ಫಿ ಹದ ಬರುವವರೆಗೆ ಪಾತ್ರೆಯನ್ನು ಒಲೆಯ ಮೇಲಿರಿಸಿ  ತಿರುವುತ್ತಾರೆ. ನಂತರ ಹಲ್ವಾ ರೀತಿಯಲ್ಲಿ ಬಟ್ಟಲಿಗೆ ಹಾಕಿ ಮೆಲಿನಿಂದ ಡ್ರೈ ಫ್ರುಟ್ಸ್​ ಮೂಲಕ ಅಲಂಕರಿಸುತ್ತಾರೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರ ಮನಗೆದ್ದಿದೆ. 71 ಸಾವಿರಕ್ಕೂ ಅಧಿಕ ಲೈಕ್ಸ್​ ಪಡೆದಿರುವ ವೀಡಿಯೋ ಸದ್ಯ ಟ್ರೆಂಡ್ ಆಗಿದೆ. ಹಲವರು ಪಾರ್ಲೆ ಜಿ ಬಗ್ಗೆ ಬರ್ಫಿ ಬಗ್ಗೆ ನೆಗೆಟಿವ್​ ಆಗಿ ಮಾತನಾಡಿದರೆ ಇನ್ನೂ ಕೆಲವರು ಪಾರ್ಲೆ ಜಿ ಬರ್ಫಿ ತಯಾರಿಸಲು ಉತ್ಸುಕರಾಗಿದ್ದಾರೆ.

Published On - 9:27 am, Tue, 21 December 21

Follow Us
TV9 Web
TV9 Web

TV9 Kannada

Read More
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್