100 ಅಡಿ ಎತ್ತರದಿಂದ ಪ್ಯಾರಾಚೂಟ್ನಿಂದ ಸಮುದ್ರಕ್ಕೆ ಬಿದ್ದ ಮಹಿಳೆಯರು : ವೀಡಿಯೋ ವೈರಲ್
ಪ್ಯಾರಾಸೈಲಿಂಗ್ ವೇಳೆ ಹಗ್ಗ ತುಂಡಾಗಿ 100 ಅಡಿ ಎತ್ತರಿಂದ ಸಮುದ್ರಕ್ಕೆ ಬಿದ್ದ ಮಹಿಳೆಯರನ್ನು ರಕ್ಸಿಸಲಾಗಿದೆ.
ಪ್ರವಾಸಕ್ಕೆ ತೆರಳಿದ ವೇಳೆ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು ಸಾಮಾನ್ಯ, ಆದರೆ ಅದರ ಬಗ್ಗೆ ಜಾಗೃತೆ ವಹಸುವುದು ಕೂಡ ಅಷ್ಟೆ ಮುಖ್ಯ. ಪ್ಯಾರಾಸೈಲಿಂಗ್ ಅಥವಾ ಪ್ಯಾರಾಚೂಟ್ ಒಂದು ಉತ್ತಮ ಅನುಭವ ನೀಡುವ ಕ್ರೀಡೆ. ಆದರೆ ಈ ರೀತಿಯ ಸಾಹಸಗಳು ಕೆಲವೊಮ್ಮ ಜೀವಕ್ಕೇ ಅಪಾಯ ತಂದೊಡ್ಡಬಹದು. ಮುಂಬೈ ನಲ್ಲಿ ಪ್ಯಾರಾಸೈಲಿಂಗ್ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಇಬ್ಬರು ಮಹಿಳೆಯರು ಲೈಫ್ ಜಾಕೆಟ್ ಧರಿಸಿಕೊಂಡು ಸಮುದ್ರ ಮಧ್ಯೆ ಪ್ಯಾರಾಸೈಲಿಂಗ್ ಮಾಡುತ್ತಿದ್ದರು. ಆದರೆ ಈ ವೇಳೆ ಹಗ್ಗ ತುಂಡಾಗಿ 100 ಅಡಿ ಎತ್ತರದಿಂದ ಇಬ್ಬರೂ ಮಹಿಳೆಯರು ಸಮುದ್ರಕ್ಕೆ ಬೀಳುತ್ತಾರೆ. ಅದೃಷ್ಟವಶಾತ್ ಲೈಫ್ ಜಾಕೆಟ್ ನಿಂದ ಮಹಿಳೆಯರಿಬ್ಬರೂ ಸಮುದ್ರದ ನೀರಿನಲ್ಲಿ ಮುಳುಗಲಿಲ್ಲ. ತಕ್ಷಣವೇ ರಕ್ಷಣಾ ಸಿಬ್ಬಂದಿ ಸಮುದ್ರಕ್ಕೆ ಜಿಗಿದು ಮಹಿಳೆಯರನ್ನು ರಕ್ಷಿಸಿದ್ದಾರೆ. ಸದ್ಯ ಪ್ಯಾರಾಚೂಟ್ ಹಗ್ಗ ತುಂಡಾಗಿ ಬೀಳುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ಯಾರಾಸೈಲಿಂಗ್ ನಿಂದಾದ ಅನಾಹುತಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹಗ್ಗ ತುಂಡಾಗಿ ಉತ್ಸಾಹದಿಂದ ಬಂದ ಪ್ರವಾಸಿಗರು ಅನಾಹುತಕ್ಕೆ ಸಿಲುಕಿದ ಉದಾಹರಣೆಗಳು ಸಾಕಷ್ಟಿವೆ. ಆದರೂ ಈ ರೀತಿಯ ಸಾಹಸ ಕ್ರೀಡೆಗಳ ನಿರ್ವಾಹಕರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಜೋರಾಗಿಯೇ ಕೇಳಿಬರುತ್ತದೆ. ಲೈಫ್ ಜೆಟ್ ಸೇರಿದಂತೆ ಹಲವು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. ಆದರೂ ಅನಾಹುತಗಳ ಸಂಖ್ಯೆ ಏರುತ್ತಲೇ ಇದೆ . ಈ ನಡುವೆ ಸರ್ಕಾರ ಜಲ ಕ್ರೀಡೆ ಸೇರಿದಂತೆ ಪ್ಯಾರಾಸೈಲಿಂಗ್ನಂತಹ ಸಾಹಸ ಕ್ರೀಡಗಳಲ್ಲಿ ಹೆಚ್ಚಿನ ಕ್ರಮಗಳನ್ನು ಅನುಸರಿಸಬೇಕು ಎನ್ನುವ ವಿಧೇಯಕ ಮಂಡನೆಗೆ ತಯಾರಿ ನಡೆಸಿದೆ. ಕಾಯಿದೆಯ ಉಲ್ಲಂಘನೆಯಾದರೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವುದಾಗಿಯೂ ಸರ್ಕಾರ ನಿಯಮ ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:
Smriti Irani: ನಿಮ್ಮ ಅಮ್ಮನೂ ಹೀಗೇ ಮಾಡ್ತಿದ್ರ?; ತಾಯಿ ಕಳಿಸಿದ ಪೋಸ್ಟ್ ಶೇರ್ ಮಾಡಿದ ಸಚಿವೆ ಸ್ಮೃತಿ ಇರಾನಿ