Smriti Irani: ನಿಮ್ಮ ಅಮ್ಮನೂ ಹೀಗೇ ಮಾಡ್ತಿದ್ರ?; ತಾಯಿ ಕಳಿಸಿದ ಪೋಸ್ಟ್ ಶೇರ್ ಮಾಡಿದ ಸಚಿವೆ ಸ್ಮೃತಿ ಇರಾನಿ

ನನ್ನ ತಾಯಿ ಈ ಪೋಸ್ಟ್ ಅನ್ನು ನನ್ನೊಂದಿಗೆ ಸಂತೋಷದಿಂದ ಹಂಚಿಕೊಂಡಿದ್ದಾರೆ. ನಿಮ್ಮ ತಾಯಿಯೂ ಈ ರೀತಿ ನಿಮ್ಮ ಹಠವನ್ನು ಕಂಟ್ರೋಲ್ ಮಾಡಿದ್ದರೆ ದಯವಿಟ್ಟು ನಿಮ್ಮ ಕೈಯನ್ನು ಮೇಲಕ್ಕೆತ್ತಿ ಎಂದು ಸ್ಮೃತಿ ಇರಾನಿ ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ನೀಡಿದ್ದಾರೆ.

Smriti Irani: ನಿಮ್ಮ ಅಮ್ಮನೂ ಹೀಗೇ ಮಾಡ್ತಿದ್ರ?; ತಾಯಿ ಕಳಿಸಿದ ಪೋಸ್ಟ್ ಶೇರ್ ಮಾಡಿದ ಸಚಿವೆ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Dec 21, 2021 | 3:38 PM

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಒಬ್ಬರು. ಆಕೆಯ ಇನ್‌ಸ್ಟಾಗ್ರಾಂನಲ್ಲಿ (Instagram) ಆಗಾಗ ಹಾಸ್ಯದ ಮತ್ತು ಸ್ಪೂರ್ತಿದಾಯಕ ಪೋಸ್ಟ್‌ಗಳನ್ನು ಹಾಕುತ್ತಾ ಇರುತ್ತಾರೆ. ನಿನ್ನೆ ಇನ್​ಸ್ಟಾಗ್ರಾಂನಲ್ಲಿ ಹೊಸ ಪೋಸ್ಟ್ ಮಾಡಿರುವ ಸ್ಮೃತಿ ಇರಾನಿ ತನ್ನ ತಾಯಿ ಶಿಬಾನಿ ಬಾಗ್ಚಿ ಕಳುಹಿಸಿದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್​ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಸ್ಮೃತಿ ಇರಾನಿ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಮಾಷೆಯ ಮೇಮ್ ಅನ್ನು ಹಂಚಿಕೊಂಡಿದ್ದಾರೆ. ನಾನು ಮಗುವಾಗಿದ್ದಾಗ ನನ್ನ ತಂದೆ-ತಾಯಿ ನನ್ನನ್ನು ಎಂದೂ ಮನಶ್ಯಾಸ್ತ್ರಜ್ಞರ ಬಳಿಗೆ ಕರೆದೊಯ್ಯಲಿಲ್ಲ. ನನ್ನ ತಾಯಿ ನನ್ನ ತಲೆಯನ್ನು ಸರಿ ಮಾಡಲು, ನನ್ನ ಕರ್ಮವನ್ನು ಸ್ಥಿರಗೊಳಿಸಲು ಕಪಾಳಕ್ಕೆ ಒಂದು ಏಟು ಹೊಡೆಯುತ್ತಿದ್ದರು! ಎಂದು ತಮಾಷೆಯ ಪೋಸ್ಟ್​ ಒಂದನ್ನು ಹಾಕಿದ್ದಾರೆ.

“ನನ್ನ ತಾಯಿ ಈ ಪೋಸ್ಟ್ ಅನ್ನು ನನ್ನೊಂದಿಗೆ ಸಂತೋಷದಿಂದ ಹಂಚಿಕೊಂಡಿದ್ದಾರೆ. ನಿಮ್ಮ ತಾಯಿಯೂ ಈ ರೀತಿ ನಿಮ್ಮ ಹಠವನ್ನು ಕಂಟ್ರೋಲ್ ಮಾಡಿದ್ದರೆ ದಯವಿಟ್ಟು ನಿಮ್ಮ ಕೈಯನ್ನು ಮೇಲಕ್ಕೆತ್ತಿ” ಎಂದು ಸ್ಮೃತಿ ಇರಾನಿ ತಮ್ಮ ಪೋಸ್ಟ್​ಗೆ ಕ್ಯಾಪ್ಷನ್ ನೀಡಿದ್ದಾರೆ. ಹಾಗೇ, ” ಅಮ್ಮ ಐ ಲವ್ ಯು” ಎಂದು ಕೂಡ ಬರೆದುಕೊಂಡಿದ್ದಾರೆ.

ಈ ಪೋಸ್ಟ್​ ಅನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ, ಪೋಸ್ಟ್​ಗೆ 33 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿವೆ. ಪ್ರತಿ ಮನೆಯದ್ದೂ ಇದೇ ಕತೆ ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು ಇದು ಉಚಿತವಾದ ಅತ್ಯುತ್ತಮ ಚಿಕಿತ್ಸೆ ಎಂದು ತಮಾಷೆ ಮಾಡಿದ್ದಾರೆ. ಸ್ಮೃತಿ ಇರಾನಿ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಂನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್​ಗಳಿದ್ದಾರೆ.

ಇದನ್ನೂ ಓದಿ: ರಮೇಶ್​ ಕುಮಾರ್​ ರೇಪ್​ ಕುರಿತಾದ ಹೇಳಿಕೆ: ಕಾಂಗ್ರೆಸ್​ ಪಕ್ಷದಿಂದ ಕೂಡಲೇ ಅವರನ್ನು ವಜಾ ಮಾಡಿ, ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸ್ಮೃತಿ ಇರಾನಿ

ಕಪಿಲ್​ ಶರ್ಮಾ ಶೋಗೆ ಸ್ಮೃತಿ ಇರಾನಿಗೆ ಸಿಗಲಿಲ್ಲ ಎಂಟ್ರಿ? ಸಿಟ್ಟಾದ ಕೇಂದ್ರ ಸಚಿವೆ ಮಾಡಿದ್ದೇನು?