ಮೊದಲ ಬಾರಿಗೆ ಕೋಕಾ ಕೋಲಾ ಕುಡಿದು ಗಾಬರಿಯಾದ ಮಗು; ವೀಡಿಯೋ ವೈರಲ್
ಮಗು ಮೊದಲ ಬಾರಿಗೆ ಕೊಕಾ ಕೋಲಾವನ್ನು ಕುಡಿದು ಮುಖ ಗಿವುಚೊಕೊಂಡ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಮಕ್ಕಳ ಮುಗ್ಧ ನಗು, ಅವುಗಳ ಪ್ರತಿಕ್ರಿಯೆ ನೋಡುವುದೇ ಒಂದು ಖುಷಿ. ಅವುಗಳ ಹೊಸ ಅನುಭವಕ್ಕೆ ನೀಡುವ ಪ್ರತಿಕ್ರಿಯೆ ನೋಡುಗರಿಗೆ ಹೊಸ ಉತ್ಸಾಹವನ್ನು ನೀಡುತ್ತದೆ. ಇಲ್ಲೊಂದು ಮಗು ಮೊದಲ ಬಾರಿಗೆ ಕೊಕಾ ಕೋಲಾವನ್ನು ಕುಡಿದು ಮುಖ ಗಿವುಚೊಕೊಂಡ ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದ್ದು 4 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚಿಕೊಂಡಿದ್ದಾರೆ. ಕೊಕಾಕೋಲಾ ಮೊದಲ ಬಾಗೆ ಕುಡಿದಾಗ ಬಾಯಿಯಲ್ಲಿ ಆಗುವ ಜುಮ್ ಎನ್ನುವ ಅನುಭವ ಮಗುವನ್ನು ಇನ್ನಷ್ಟು ಪ್ರತಿಕ್ರಿಯಿಸುವಂತೆ ಮಾಡಿದೆ. ನೆಟ್ಟಿಗರು ಇದನ್ನು ನೋಡಿ ತಾವು ಮೊದಲ ಬಾರಿಗೆ ಕೊಕಾ ಕೋಲಾ ಕುಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ವೀಡಿಯೋದಲ್ಲಿ ಪುಟ್ಟ ಹುಡುಗಿಯು ಮೆಕ್ ಡಾನಲ್ಡ್ ಅಂಗಡಿಗೆ ಹೋಗುತ್ತಾಳೆ. ಅಲ್ಲಿ ಮೊದಲ ಬಾರಿಗೆ ಆಕೆಗೆ ಗಾಜಿನ ಲೋಟದಲ್ಲಿ ಸ್ಟ್ರಾ ಹಾಕಿ ನೀಡುತ್ತಾರೆ. ಪುಟ್ಟ ಹುಡುಗಿ ಮೊದಲ ಸಿಪ್ ಕುಡಿದಾಗ ಗಾಬರಿಯಿಂದ ಮುಖ ಗಿವುಚಿಕೊಳ್ಳುತ್ತಾಳೆ. ಬಳಿಕ ಸುದಾರಿಸಿಕೊಂಡು ಮತ್ತೆ ಸ್ಟ್ರಾ ಮೂಲಕ ಕೊಕಾ ಕೋಲಾವನ್ನು ಕುಡಿಯುತ್ತಾಳೆ. ಆಕೆ ಅದನ್ನು ಇಷ್ಟಪಡುತ್ತಾಳೆ. ಸ್ವಲ್ಪ ಸಮಯದ ಬಳಿಕ ಇಷ್ಟಪಟ್ಟು ಕೋಕಾ ಕೋಲಾವನ್ನು ಕುಡಿಯುತ್ತಾಳೆ.
Little girl tries Coke for the first time.. pic.twitter.com/FFbB6m16O4
— Buitengebieden (@buitengebieden_) December 19, 2021
ಪುಟ್ಟ ಹುಡುಗಿಯ ಮುಖದ ರಿಯಾಕ್ಷನ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹಲವರು ಚಿಕ್ಕ ಹುಡುಗಿಗೆ ಕೋಕಾ ಕೋಲಾವನ್ನು ನೀಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ.