Guinness Record: ಒಂದೇ ಸ್ಥಳದಲ್ಲಿ ಅತಿ ದೊಡ್ಡ ಬಿಹು ಪ್ರದರ್ಶನ; ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಪ್ರವೇಶಿಸಿದ ಅಸ್ಸಾಂ

ಅಸ್ಸಾಂನ ಸಾಂಪ್ರದಾಯಿಕ ಬಿಹು ನೃತ್ಯ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಸ್ಥಾನವನ್ನು ಗುರುತಿಸಿದೆ

Guinness Record: ಒಂದೇ ಸ್ಥಳದಲ್ಲಿ ಅತಿ ದೊಡ್ಡ ಬಿಹು ಪ್ರದರ್ಶನ; ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಪ್ರವೇಶಿಸಿದ ಅಸ್ಸಾಂ
ಅಸ್ಸಾಂನ ಬಿಹು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿದೆImage Credit source: @aboyobbhuyan
Follow us
|

Updated on: Apr 14, 2023 | 12:54 PM

ಗುವಾಹಟಿ (ಅಸ್ಸಾಂ): ಐತಿಹಾಸಿಕ ಘಟನೆಯೊಂದರಲ್ಲಿ ಭಾರತದ ಈಶಾನ್ಯ ರಾಜ್ಯ ಅಸ್ಸಾಂ (Assam) ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ (Guinness Book of Records) ಗುರುವಾರ (April 13) ಒಂದೇ ಸ್ಥಳದಲ್ಲಿ ಅತಿದೊಡ್ಡ ಬಿಹು (Bihu Dance) ಪ್ರದರ್ಶನವನ್ನು ಪ್ರದರ್ಶಿಸುವ ಮೂಲಕ ತನ್ನ ಸ್ಥಾನವನ್ನು ಪಡೆದಿದೆ. ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆದ ಈ ಕಾರ್ಯಕ್ರಮವು ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ಸಂಜೆ 4:45 ರ ಸುಮಾರಿಗೆ ನಡೆದಿದೆ. ಈ ಮೊದಲು ಏಪ್ರಿಲ್ 14 ರಂದು ನಡೆಯಬೇಕಿದ್ದ ಸಮಾರಂಭದಲ್ಲಿ ಪ್ರಧಾನಿ ಭಾಗವಹಿಸುವ ನಿರೀಕ್ಷೆಯಿತ್ತು ಆದರೆ ಅದನ್ನು ಮರು ನಿಗದಿಪಡಿಸಲಾಯಿತು ಮತ್ತು ಕೊನೆಯ ಕ್ಷಣದಲ್ಲಿ ಪೂರ್ವಭಾವಿಯಾಗಿ ನಿಗದಿಪಡಿಸಲಾಯಿತು.

ಮೆಗಾ ಬಿಹು ಪ್ರದರ್ಶನವು ಅಸ್ಸಾಂನ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವ ವೇದಿಕೆಯಲ್ಲಿ ಇರಿಸಲು ಲಂಡನ್‌ನಲ್ಲಿರುವ ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್ ಪ್ರಧಾನ ಕಚೇರಿಯ ಪ್ರತಿನಿಧಿಯೂ ಭಾಗವಹಿಸಿದ್ದರು. ಅಲ್ಲಿ ಒಟ್ಟು 11304 ನಾಚನಿ ಮತ್ತು ಧುಲಿಯಾ ನೃತ್ಯಗಾರರು ಬಿಹು ನೃತ್ಯವನ್ನು ಪ್ರದರ್ಶಿಸಿದರು.

ಅಸ್ಸಾಂ ರಾಜ್ಯದಾದ್ಯಂತ ಉತ್ತಮ ನೃತ್ಯಗಾರರನ್ನು ಆಯ್ಕೆ ಮಾಡಲು ಆಡಿಷನ್​ಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವು ಅಸ್ಸಾಂ ಮತ್ತು ಅದರ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವ ಭೂಪಟದಲ್ಲಿ ಇರಿಸಲಿದೆ ಎಂಬ ಭರವಸೆಯನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ವ್ಯಕ್ತಪಡಿಸಿದರು. ಅಸ್ಸಾಂನ ಇತಿಹಾಸದಲ್ಲಿ ಈ ರೀತಿಯ ಘಟನೆ ಹಿಂದೆಂದೂ ಸಂಭವಿಸಿಲ್ಲ ಎಂದು ಹೇಳಿದರು.

ಟ್ವಿಟರ್‌ನಲ್ಲಿ ಈ ಕುರಿಟಿ ಮಾಹಿತಿ ಹಂಚಿಕೊಂಡ ಸಿಎಂ, “ನಾವು ಇಂದು ಸರುಸಜೈನಲ್ಲಿ ಎರಡು ವಿಶ್ವ ದಾಖಲೆಗಳಿಗಾಗಿ ಸ್ಪರ್ಧಿಸಿದ್ದೇವೆ, 11304 ನರ್ತಕರು ಮತ್ತು ಡ್ರಮ್ಮರ್‌ಗಳು ಇಂದು ಹಿಂದೆಂದೂ ಪ್ರದರ್ಶಿಸದ ಬಿಹು ನೃತ್ಯವನ್ನು ಪ್ರದರ್ಶಿಸಿದರು, ಈ ಹಿಂದೆ ಇದ್ದ 1356 ಧೋಲ್‌ಗಳ ಧಾಖಲೆಯನ್ನು 2548 ಧುಲಿಯಾಗಳು ಮುರಿದರು” ಎಂದು ಹೇಳಿದ್ದಾರೆ. ಈ ಪ್ರದರ್ಶನದ ಫೋಟೋಗಳನ್ನು ಈ ಟ್ವೀಟ್‌ಗೆ ಲಗತ್ತಿಸಿರುವ ಸಿಎಂ ಶರ್ಮಾ ಈ ಕಾರ್ಯಕ್ರಮವನ್ನು ಜೀವಮಾನವಿಡೀ ನೆನಪಿಡುವ ಸಂಜೆ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂ ಮಹಿಳೆಯ ಕೈ ಚರ್ಮದಿಂದ ಕಾಣುತ್ತಿತ್ತು ಭಯಾನಕ ಪ್ಯಾರಾಸೈಟ್; ಇದಕ್ಕೆ ಕಾರಣ ಆಕೆ ತಿಂದ ಪುಡ್ಡಿಂಗ್!

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಸ್ಸಾಂಗೆ ಭೇಟಿ ನೀಡಲಿದ್ದಾರೆ. ಗುವಾಹಟಿಯ ಸರುಸಜೈ ಸ್ಟೇಡಿಯಂನಲ್ಲಿ ವರ್ಣರಂಜಿತ ಬಿಹು ನೃತ್ಯ ಪ್ರದರ್ಶನವನ್ನು ಅವರು ವೀಕ್ಷಿಸಲಿದ್ದಾರೆ. ಈಶಾನ್ಯ ರಾಜ್ಯಕ್ಕೆ ಮೋದಿ ಭೇಟಿಯ ಸಂದರ್ಭದಲ್ಲಿ AIIMS ಗುವಾಹಟಿ ಮತ್ತು 14300 ಕೋಟಿ ರೂಪಾಯಿಗಳ ಇತರ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು