Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪ್ಲೀಸ್ ಮೋದಿ ಜೀ: ಮುದ್ದು ಮುದ್ದಾಗಿ ಮಾತನಾಡುತ್ತಲೇ ಪ್ರಧಾನಿ ಮೋದಿಯವರ ಬಳಿ ಬೇಡಿಕೆ ಇಟ್ಟ ಜಮ್ಮುವಿನ ಪೋರಿ

ಸೀರತ್ ನಾಜಿ ಎಂಬುವ ಜಮ್ಮುವಿನ ಬಾಲಕಿಯೊಬ್ಬಳು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಒಂದು ಬೇಡಿಕೆ ಇಟ್ಟಿದ್ದಾಳೆ.

Viral Video: ಪ್ಲೀಸ್ ಮೋದಿ ಜೀ: ಮುದ್ದು ಮುದ್ದಾಗಿ ಮಾತನಾಡುತ್ತಲೇ ಪ್ರಧಾನಿ ಮೋದಿಯವರ ಬಳಿ ಬೇಡಿಕೆ ಇಟ್ಟ ಜಮ್ಮುವಿನ ಪೋರಿ
ಶಾಲಾ ಬಾಲಕಿ ವಿಡಿಯೋ
Follow us
ನಯನಾ ರಾಜೀವ್
|

Updated on: Apr 14, 2023 | 2:09 PM

ಸೀರತ್ ನಾಜಿ ಎಂಬುವ ಜಮ್ಮುವಿನ ಬಾಲಕಿಯೊಬ್ಬಳು ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಬಳಿ ಒಂದು ಬೇಡಿಕೆ ಇಟ್ಟಿದ್ದಾಳೆ. ಇಲ್ಲಿ ನೋಡಿ ಪ್ರಧಾನಿ ಮೋದಿಯವರೇ, ನಾನು ನನ್ನ ಸ್ನೇಹಿತರೆಲ್ಲರೂ ಶಾಲೆಯಲ್ಲಿ ನೆಲದ ಮೇಲೆಯೇ ಕುಳಿತು ಪಾಠ ಕೇಳುತ್ತೇವೆ, ಇಡೀ ಶಾಲೆ ಸಂಪೂರ್ಣ ಧೂಳುಮಯವಾಗಿದೆ ಎಂದು ಹೇಳಿದ್ದಾಳೆ.

ಸೀರತ್ ಜಮ್ಮು ಕಾಶ್ಮೀರದ ಕಥುವಾದ ಲೋಹಾಯ್ ಮಲ್ಹಾರ್ ಗ್ರಾಮದವಳಾಗಿದ್ದಾಳೆ. (ಪ್ಲೀಸ್​ ಮೋದಿ ಜೀ, ಏಕ ಅಚ್ಛೀಸಿ ಸ್ಕೂಲ್ ಬನ್ವಾದೋನಾ) ಒಂದು ಶಾಲೆಯನ್ನು ನಿರ್ಮಿಸಿಕೊಡಿ ಪ್ಲೀಸ್ ಮೋದಿಯವರೇ ಎಂದು ಮನವಿ ಮಾಡಿದ್ದಾಳೆ. ಮಾರ್ಮಿಕ್ ನ್ಯೂಸ್​ ಎನ್ನುವ ಫೇಸ್​ಬುಕ್ ಪೇಜ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದೀಗ ಆ ವಿಡಿಯೋ ಇಲ್ಲಿಯವರೆಗೆ 2 ಮಿಲಿಯನ್​ ವ್ಯೂಸ್​ ಹಾಗೂ 1,16,000 ಲೈಕ್ಸ್​ಗಳನ್ನು ಪಡೆದಿದೆ. ಕೇವಲ 5 ನಿಮಿಷದ ವಿಡಿಯೋ ಇದಾಗಿದೆ. ಆಕೆ ತನ್ನನ್ನು ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾಳೆ.

ವಿಡಿಯೋದಲ್ಲಿ ಶಾಲೆಯ ಕಾಂಪೌಂಡ್, ಶಾಲಾ ಕಟ್ಟಡವನ್ನು ತೋರಿಸಿದ್ದಾಳೆ, ಬಳಿಕ ಮೋದಿಯವರೇ ನಿಮ್ಮ ಬಳಿ ನಾನೇನೋ ಹೇಳಬೇಕಿದೆ ಎಂದಿದ್ದಾಳೆ. ಬಾಗಿಲು ಮುಚ್ಚಿರುವ ಎರಡು ರೂಂಗಳನ್ನು ತೋರಿಸಿ ಅದು ಪ್ರಿನ್ಸಿಪಲ್ ಕಚೇರಿ ಹಾಗೂ ಸ್ಟಾಫ್​ರೂಂ ಎಂದು ತಿಳಿಸಿದ್ದಾಳೆ. ನೋಡಿ ಶಾಲೆಯ ನೆಲವು ಎಷ್ಟು ಗಲೀಜಾಗಿದೆ ನಾವು ಇಲ್ಲಿಯೇ ಕುಳಿತು ಪಾಠ ಕೇಳಬೇಕು, ನಮ್ಮ ಸಮವಸ್ತ್ರಗಳು ಕೂಡ ಹಾಳಾಗುತ್ತಿವೆ, ನಮ್ಮಲ್ಲಿ ಬೆಂಚ್​ಗಳು ಕೂಡ ಇಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ.

ಮತ್ತಷ್ಟು ಓದಿ:    ದೇಶವೊಂದೇ, ಎಲ್ಲಾ ರಾಜ್ಯದ ಸಂಸ್ಕೃತಿಯ ಅಪ್ಪಿಕೊಳ್ಳಬೇಕು-ಒಪ್ಪಿಕೊಳ್ಳಬೇಕು ಎಂದು ಒಗ್ಗಟ್ಟಿನ ಮಂತ್ರ ಸಾರುತ್ತಿರುವ ಪ್ರಧಾನಿ ಮೋದಿ

ಮೋದಿಯವರೆ ನೀವು ಇಡೀ ದೇಶದ ಜನರ ಕಷ್ಟಗಳನ್ನು ಕೇಳುತ್ತೀರಿ ನನ್ನ ಮನವಿಯನ್ನು ಕೂಡ ಸ್ವೀಕರಿಸಿ, ನಮಗಾಗಿ ಒಂದು ಶಾಲೆ ಕಟ್ಟಿಸಿಕೊಡಿ ಎಂದು ಪರಿ ಪರಿಯಾಗಿ ಮನವಿ ಮಾಡಿದ್ದಾಳೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ