ವಿಯೆಟ್ನಾಂ ಮಹಿಳೆಯ ಕೈ ಚರ್ಮದಿಂದ ಕಾಣುತ್ತಿತ್ತು ಭಯಾನಕ ಪ್ಯಾರಾಸೈಟ್; ಇದಕ್ಕೆ ಕಾರಣ ಆಕೆ ತಿಂದ ಪುಡ್ಡಿಂಗ್!

ವಿಯೆಟ್ನಾಂನ 58 ವರ್ಷದ ಮಹಿಳೆ ಮನೆಯಲ್ಲಿ ತನಗಾಗಿ ಹಸಿ ರಕ್ತದ ಪುಡ್ಡಿಂಗ್ ಅನ್ನು ತಯಾರಿಸಿದರು. ಅದನ್ನು ಸೇವಿಸಿದ ನಂತರ ಅವರು ತಲೆನೋವಿನಿಂದ ಬಳಲುತ್ತಿದ್ದು ಮನೆಯಲ್ಲಿ ಅನೇಕ ಬಾರಿ ಸಮತೋಲನವನ್ನು ಕಳೆದುಕೊಂಡರು.

ವಿಯೆಟ್ನಾಂ ಮಹಿಳೆಯ ಕೈ ಚರ್ಮದಿಂದ ಕಾಣುತ್ತಿತ್ತು  ಭಯಾನಕ ಪ್ಯಾರಾಸೈಟ್; ಇದಕ್ಕೆ ಕಾರಣ ಆಕೆ ತಿಂದ ಪುಡ್ಡಿಂಗ್!
ಪುಡಿಂಗ್ ತಿಂದ ನಂತರ ವಿಯೆಟ್ನಾಂ ಮಹಿಳೆಯ ಚರ್ಮದ ಕೆಳಗೆ ಕಂಡ ಹುಳುಗಳು
Follow us
ನಯನಾ ಎಸ್​ಪಿ
|

Updated on: Apr 14, 2023 | 10:57 AM

ಸೇವಿಸಿದ ಆಹಾರದಿಂದ ಮೆದುಳಿಗೆ ಪ್ಯಾರಾಸೈಟ್ (Parasite) ಹೊಕ್ಕ ಭಯಾನಕ ಘಟನೆ ವಿಯೆಟ್ನಾಮ್ನಲ್ಲಿ (Vietnam) ನಡೆದಿದೆ. ಡೆಡ್ಲಿ ಪ್ಯಾರಾಸೈಟ್ ಮೆದುಳಿಗೆ ಪ್ರವೇಶಿಸಿದ ನಂತರವೂ ಈ ಮಹಿಳೆ (Women) ಬದುಕುಳಿದಿದ್ದಾರೆ. 58 ವರ್ಷದ ವಿಯೆಟ್ನಾಂ ಮಹಿಳೆ ತಾನೇ ತಯಾರಿಸಿದ ಹಸಿ ರಕ್ತ ಮತ್ತು ಬೇಯಿಸಿದ ಮಾಂಸವನ್ನು ಒಳಗೊಂಡಿರುವ ‘ಟೈಟ್ ಕ್ಯಾನ್’ ಎಂಬ ಸ್ಥಳೀಯ ಖಾದ್ಯವನ್ನು ಸೇವಿಸಿದ ನಂತರ ತೀವ್ರ ಅಸ್ವಸ್ಥರಾಗಿದ್ದರು. ಮಹಿಳೆ ಹನೋಯಿ (Hanoi) ಹೊರವಲಯದಲ್ಲಿರುವ ಅನ್ ಬಿನ್ಹ್ (An Binh) ಪ್ರದೇಶದಿಂದ ಬಂದವರು.

ಮಹಿಳೆ ಸ್ವತಃ ತಾವೇ ತಯಾರಿಸಿದ ಹಸಿ ರಕ್ತ ಪುಡ್ಡಿಂಗ್ ಅನ್ನು ಸೇವಿಸಿದ ನಂತರ ತೀವ್ರ ತಲೆನೋವು ಮತ್ತು ಸಮತೋಲನದ ನಷ್ಟದಿಂದ ಬಳಲುತ್ತಿದ್ದರೆ. ಈ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಸಿಬ್ಬಂದಿ ಆರಂಭದಲ್ಲಿ ಆಕೆಗೆ ಪಾರ್ಶ್ವವಾಯು ಸಂಭವಿಸಿದೆ ಎಂದು ಭಾವಿಸಿದ್ದರು. ಆದಾಗ್ಯೂ, ಕೆಲವು ಸ್ಕ್ಯಾನ್‌ಗಳು ಪ್ಯಾರಾಸೈಟ್ ಹುಳುಗಳು ಅವರ ಚರ್ಮದ ಅಡಿಯಲ್ಲಿ ತೆವಳುತ್ತಿರುವುದು ಕಾಣಿಸಿತು ಮತ್ತು ಅವು ಆಕೆಯ ಮೆದುಳಿಗೂ ಹೋಗಿರುವುದು ಬಹಿರಂಗಪಡಿಸಿತು.

ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆಗೆ ಈ ರೀತಿಯ ತೊಂದರೆಯಾಗಿದೆ ಎಂದು ಆಸ್ಪತ್ರೆಯ ಉಪ ನಿರ್ದೇಶಕ ಡಾ.ಟ್ರಾನ್ ಹುಯ್ ಥೋ ಖಚಿತಪಡಿಸಿದ್ದಾರೆ. ಚಿಕಿತ್ಸೆ ನೀಡದಿದ್ದರೆ, ಆಕೆಯ ರೋಗಲಕ್ಷಣಗಳು ಉಲ್ಬಣಗೊಳ್ಳಬಹುದು ಮತ್ತು ಅವಳು ಪಾರ್ಶ್ವವಾಯುವಿಗೆ ಒಳಗಾಗಬಹುದು ಅಥವಾ ತನ್ನ ಪ್ರಾಣವನ್ನು ಕಳೆದುಕೊಳ್ಳಬಹುದು ಎಂದು ಅವರು ಹೇಳಿದರು.

ಇದಲ್ಲದೆ, ವಿಯೆಟ್ನಾಂನಲ್ಲಿ ಹಸಿ ರಕ್ತದ ಪುಡಿಂಗ್ ಅನ್ನು ಸೇವಿಸುವುದು ತುಂಬಾ ಸಾಮಾನ್ಯವಾಗಿದೆ ಮತ್ತು ಭಕ್ಷ್ಯವನ್ನು ಬಹಳ ಸುರಕ್ಷಿತವಾಗಿ ತಯಾರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಡಾಕ್ಟರ್ ಥೋ ಪ್ರಕಾರ ಸರಿಯಾದ ಮುನ್ನೆಚ್ಚರಿಕೆಗಳು ಸಾಕಷ್ಟು ಅವಶ್ಯಕವಾಗಿದೆ ಮತ್ತು ಅನೇಕ ಜನರು ತಮ್ಮ ರೋಗಲಕ್ಷಣಗಳನ್ನು ಪಾರ್ಶ್ವವಾಯು ಅಥವಾ ಇತರ ಮಾನಸಿಕ ಆರೋಗ್ಯದ ಸ್ಥಿತಿಗಳಿಗೆ ತಪ್ಪಾಗಿ ಗ್ರಹಿಸುತ್ತಾರೆ ಮತ್ತು ವರ್ಷಗಳಿಂದ ಮನೋವೈದ್ಯಕೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂದು ಅವರು ಹೇಳಿದ್ದಾರೆ.

ಚಿಕಿತ್ಸೆ ನೀಡದೆ ಬಿಟ್ಟರೆ, ಅವರ ಪರಿಸ್ಥಿತಿಗಳು ಹದಗೆಡಬಹುದು, ಮತ್ತು ಪ್ಯಾರಾಸೈಟ್​ಗಳು ತಮ್ಮ ಮಿದುಳಿಗೆ ಸರಿಪಡಿಸಲಾಗದ ಹಾನಿಯನ್ನು ಉಂಟುಮಾಡಬಹುದು, ಇದು ದೃಷ್ಟಿ ಕಡಿಮೆಯಾಗುವಂತಹ ದೀರ್ಘಕಾಲದ ರೋಗಗಳಿಗೂ ಕಾರಣವಾಗುತ್ತದೆ.

ಇದನ್ನೂ ಓದಿ: ಬಿಬಿಸಿ ವರದಿಗಾರನೊಂದಿಗೆ ಎಲಾನ್ ಮಸ್ಕ್ ಸಂದರ್ಶನ; ‘ನೀನು ಸುಳ್ಳು ಹೇಳುತ್ತಿದ್ದೀಯ’ ಎಂದು ವರದಿಗಾರನನ್ನು ದೂಷಿಸಿದ ಮಸ್ಕ್

ಅನಾಮಧೇಯರಾಗಿ ಉಳಿಯಲು ನಿರ್ಧರಿಸಿದ ಮಹಿಳೆ, ತಾನು ಅನುಭವಿಸಿದ ಈ ವಿಚಿತ್ರ ಘಟನೆಯ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ ಮತ್ತು ತಾನು ತಿಂಗಳಿಗೊಮ್ಮೆ ರಕ್ತದ ಪುಡಿಂಗ್ ಸೇವಿಸುತ್ತೇನೆ ಎಂದು ಬಹಿರಂಗಪಡಿಸಿದರು. ಸ್ವತಃ ಈ ಪುಡ್ಡಿಂಗ್ ತಯಾರಿಸುವುದು ಆರೋಗ್ಯಕರ ಆಯ್ಕೆಯಾಗಿದೆ ಮತ್ತು ಈ ಮೂಲಕ ಯಾವುದೇ ಕಾಯಿಲೆಯಿಂದ ಮುಕ್ತರಾಗಬಹುದು ಎಂದು ಇವರು ನಂಬಿದ್ದರು.

ಇದೀಗ ಅದೃಷ್ಟವಶಾತ್, ಈ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಔಷಧಿಗಳನ್ನು ಶಿಫಾರಸು ಮಾಡಲಾಗಿದೆ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ