ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್

Delhi Metro : ದೆಹಲಿ ಮೆಟ್ರೋ ರೈಲಿನಲ್ಲಿ ಕೇಳಿಬರುವ ಖ್ಯಾತ ನಿರೂಪಕ ಶಮ್ಮಿ ನಾರಂಗ್​ ಅವರ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ್ದಾನೆ ಈ ಯುವಕ. ನೆಟ್ಟಿಗರು ಇವನ ಅನುಕರಣೆಗೆ ಮನಸೋತಿದ್ದಾರೆ. ನೋಡಿ ವಿಡಿಯೋ.

ದೆಹಲಿ ಮೆಟ್ರೋ ಉದ್ಘೋಷಣೆಯನ್ನು ಅನುಕರಿಸಿದ ಯುವಕನ ವಿಡಿಯೋ ವೈರಲ್
ಎಡಚಿತ್ರದಲ್ಲಿ ಕೃಷ್ಣನ್​ ಶರ್ಮಾ, ಬಲಚಿತ್ರದಲ್ಲಿ ಉದ್ಘೋಷಕ ಶಮ್ಮಿ ನಾರಂಗ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 16, 2023 | 10:28 AM

Viral Video : ಮೆಟ್ರೋದಲ್ಲಿ ಪ್ರಯಾಣಿಸುವಾಗ ನಿಲ್ದಾಣದ ವಿವರಗಳನ್ನು ಕೊಡುವ ಆ ಅದೃಶ್ಯ ವ್ಯಕ್ತಿಯ ಧ್ವನಿ ನೆನಪಿದೆಯಲ್ಲ? ರೈಲಿನಿಂದ ಕೆಳಗಿಳಿದರೂ ಆ ತರಂಗಗಳು ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತವೆ. ನಮ್ಮ ಮೆಟ್ರೋದಲ್ಲಾದರೆ ಸಾಮಾನ್ಯವಾಗಿ ಅಪರ್ಣಾ ಕಣ್ಣೆದುರಿಗೆ ಬರುತ್ತಾರೆ. ಹಾಗೆ ಆಯಾ ಊರುಗಳಲ್ಲಿ ಆಯಾ ನಿರೂಪಕರು, ಉದ್ಘೋಷಕರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ದೆಹಲಿಯ ಮೆಟ್ರೋದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Krishnansh Sharma (@whokrishnansh)

ಈತನಕ ಈ ವಿಡಿಯೋ 5 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ಕೃಷ್ಣಾಂಶ್ ಶರ್ಮಾ, ಉದ್ಘೋಷಕ ಶಮ್ಮಿ ನಾರಂಗ್ ಅವರ ದೆಹಲಿ ಮೆಟ್ರೋ ಘೋಷಣೆಯನ್ನು ಇಲ್ಲಿ ಅನುಕರಿಸಿದ್ದಾರೆ. ಅನೇಕರು ಇವರ ಈ ಅನುಕರಣೆಯನ್ನು ಮೆಚ್ಚಿದ್ದಾರೆ. ಓಹೋ ಸಹೋದರ ನೀವು ಇಷ್ಟರಲ್ಲೇ ಉದ್ಘೋಷಕರಾಗಲಿದ್ದೀರಿ, ಬಹಳ ಚೆನ್ನಾಗಿ ಅನುಕರಿಸಿದ್ದೀರಿ ಎಂದಿದ್ದಾರೆ. ನಮ್ಮ ಧ್ವನಿ ಅವರಂತೆಯೇ ಇದೆಯೋ ಅಥವಾ ನೀವು ಮಿಮಿಕ್ರಿ ಮಾಡುತ್ತಿದ್ದೀರೋ ಎಂದು ಕೇಳಿದ್ದಾರೆ ಒಬ್ಬರು.

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಶಮ್ಮಿ ಅವರ ಧ್ವನಿಯನ್ನು ಕರೆಕ್ಟ್​ ಆಗಿ ಅನುಕರಿಸಿದ್ದೀರಿ, ನಿಜಕ್ಕೂ ಸಂತೋಷವಾಯಿತು ಎಂದು ಮತ್ತೊಬ್ಬರು ಹೇಳಿದ್ದಾರೆ. ನಂಬಲಸಾಧ್ಯ! ಥೇಟ್​ ಅವರ ಧ್ವನಿಯಂತೆಯೇ ಕೇಳುತ್ತಿದೆ ಎಂದು ಇನ್ನೂ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನೀವು ಮೆಟ್ರೋದಲ್ಲಿ ಪ್ರಯಾಣಿಸುವತನಕ ಮೆಟ್ರೋದ ರೆಕಾರ್ಡೆಡ್​ ಅನೌನ್ಸ್​ಮೆಂಟ್​ನ ಅವಶ್ಯಕತೆಯೇ ಇಲ್ಲ! ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

ನೀವು ಹೀಗೆ ಇನ್ನೂ ಹಲವು ನಟರ ಧ್ವನಿಯನ್ನು ಅನುಕರಿಸಿ, ಕಂಠದಾನ ಕಲಾವಿದರು ಆಗಬಹುದು ಎಂದಿದ್ದಾರೆ ಇನ್ನೂ ಒಬ್ಬರು. ನೀವು ಪ್ರತಿಭಾನ್ವಿತರು. ಇಂಥ ಹವ್ಯಾಸವನ್ನು ಮುಂದುವರಿಸಿ ಎಂದು ಮಗದೊಬ್ಬರು ಪ್ರೋತ್ಸಾಹಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ