ವೈರಲ್ ನ್ಯೂಸ್​: ಕಾಲೇಜಿನಿಂದ ಬರುವಾಗ ಯುವತಿಯ ಅಪಹರಣ, ಆ ಮೇಲೆ ಆಗಿದ್ದೇನು?

ಅಷ್ಟರಲ್ಲಿ ಪೊಲೀಸರಿಗೆ ಮಾಹಿತಿದಾರರಿಂದ ಆಘಾತಕಾರಿ ರೀತಿಯಲ್ಲಿ ಸುಳಿವು ಸಿಕ್ಕಿತು. ಸಂತ್ರಸ್ತೆ ಕ್ಲೋಯ್ ತನ್ನ ಸ್ನೇಹಿತನ ಮನೆಯಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ವರದಿಯಾಗಿದೆ. ಅಸಲಿಗೆ ಏನಾಯಿತು ಎಂದು ಆಕೆಯನ್ನು ಪ್ರಶ್ನಿಸಿದಾಗ..

ವೈರಲ್ ನ್ಯೂಸ್​: ಕಾಲೇಜಿನಿಂದ ಬರುವಾಗ ಯುವತಿಯ ಅಪಹರಣ, ಆ ಮೇಲೆ ಆಗಿದ್ದೇನು?
ಕಾಲೇಜಿನಿಂದ ಬರುವಾಗ ಯುವತಿಯ ಅಪಹರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 15, 2023 | 6:28 PM

23 ವರ್ಷದ ಯುವತಿಯೊಬ್ಬಳು ತನ್ನ ಮಾಸ್ಟರ್ ಪ್ಲಾನ್ ಮೂಲಕ ಇಡೀ ಪೊಲೀಸ್ ಪಡೆಗೆ ಬೆದರಿಕೆ ತಂದೊಡ್ಡಿದ್ದಾಳೆ. ತಾನು ಕಾಲೇಜಿಗೆ ( college woman) ಹೋಗಿಲ್ಲ, ಆಬ್ಸೆಂಮ್​​​ ಎಂಬ ಸತ್ಯವನ್ನು ಮರೆಮಾಚಲು ಆಕೆ ತೆಗೆದುಕೊಂಡ ನಿರ್ಧಾರ, ಆಕೆ ಇಟ್ಟ ಹೆಜ್ಜೆಗಳು.. ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಕೊನೆಗೆ ಆಕೆಯ ಊಸರವಳ್ಳಿ ಬಣ್ಣ ಬಯಲಾಯಿತು ಅನ್ನಿ. ಈ ಘಟನೆ ನಡೆದಿರುವುದು ಅಮೆರಿಕದಲ್ಲಿ. ಆ ಕಥೆ ಏನೆಂದು ತಿಳಿಯೋಣವಾ? (viral news)

ಪೆನ್ಸಿಲ್ವೇನಿಯಾದ (pennsylvania) 23 ವರ್ಷದ ಹುಡುಗಿ ಕ್ಲೋಯ್ ಸ್ಟೀನ್, ಕೆಲ ವರ್ಷಗಳಿಂದ ಕಾಲೇಜಿಗೆ ಹೋಗಿಲ್ಲ. ಈ ವಿಷಯ ತಂದೆ-ತಾಯಿಗೆ ಗೊತ್ತಾಗುತ್ತದೆ ಎಂದು ಹೆದರಿ ಮಾಸ್ಟರ್ ಪ್ಲಾನ್ ಹಾಕಿದ್ದಾಳೆ. ಅದರ ಭಾಗವಾಗಿ, ಮೇ 1 ರಂದು ರಾತ್ರಿ 10.30 ರ ಸುಮಾರಿಗೆ ಪೊಲೀಸ್ ಅಧಿಕಾರಿ ತನ್ನನ್ನು ಹಿಂಬಾಲಿಸುತ್ತಿದ್ದಾನೆಂದು ತನ್ನ ಗೆಳೆಯನಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಿದಳು. ಅದನ್ನು ನೋಡಿದ ಆಕೆಯ ಗೆಳೆಯ ಆಕೆಯನ್ನು ಸಂಪರ್ಕಿಸಲು ಹಲವು ಬಾರಿ ಫೋನ್ ಮಾಡಿದ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ, ಪೊಲೀಸರು ನಿರ್ಜನ ಪ್ರದೇಶದಲ್ಲಿ ಕ್ಲೋಯ್ ಕಾರನ್ನು ಪತ್ತೆ ಮಾಡಿದರು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆ ಬಳಿಕ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಕ್ಲೋಯ್ ಗಾಗಿ ಹೆಲಿಕಾಪ್ಟರ್ ಮೂಲಕ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್ ಇಲಾಖೆ ತಿಳಿಸಿದೆ.

ಮತ್ತಷ್ಟು ಓದಿ:ಕರ್ನಾಟಕದ ಪುಟ್ಟ ಬಾಲಕಿ ಪಿಯಾನೋ ನುಡಿಸುವ ಪರಿಗೆ ಮನಸೋತ ಪ್ರಧಾನಿ ಮೋದಿ

ಅಷ್ಟರಲ್ಲಿ ಪೊಲೀಸರಿಗೆ ಮಾಹಿತಿದಾರರಿಂದ ಆಘಾತಕಾರಿ ರೀತಿಯಲ್ಲಿ ಸುಳಿವು ಸಿಕ್ಕಿತು. ಸಂತ್ರಸ್ತೆ ಕ್ಲೋಯ್ ತನ್ನ ಸ್ನೇಹಿತನ ಮನೆಯಲ್ಲಿ ಸುರಕ್ಷಿತವಾಗಿದ್ದಾಳೆ ಎಂದು ವರದಿಯಾಗಿದೆ. ಅಸಲಿಗೆ ಏನಾಯಿತು ಎಂದು ಆಕೆಯನ್ನು ಪ್ರಶ್ನಿಸಿದಾಗ.. ‘ಪೊಲೀಸ್ ಡ್ರೆಸ್ ನಲ್ಲಿದ್ದ ಅಪರಿಚಿತ ವ್ಯಕ್ತಿ ತನ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಕಥೆ ಹೇಳತೊಡಗಿದಳು. ಆದರೆ ಇಲ್ಲಿಯವರೆಗೆ ಏನಾಯಿತು ಎಂಬುದನ್ನು ಪರಿಶೀಲಿಸಿದ ನಂತರ, ಪೊಲೀಸರು ಕ್ಲೋಯ್ ಸುಳ್ಳು ಕಥೆಯನ್ನು ಹೇಳುತ್ತಿದ್ದಾಳೆ ಎಂಬ ತೀರ್ಮಾನಕ್ಕೆ ಬಂದರು. ಪೊಲೀಸರು ಅವರದೇ ಶೈಲಿಯಲ್ಲಿ ತನಿಖೆ ನಡೆಸಿ, ಕೇಳಿದಾಗ.. ಎರಡು ವರ್ಷದಿಂದ ಕಾಲೇಜಿಗೆ ಹೋಗಿಲ್ಲ ಎಂದು ಕ್ಲೋಯ್ ಸತ್ಯ ನಿವೇದನೆ ಮಾಡಿದ್ದಾಳೆ. ಅದು ಮನೆಯಲ್ಲಿ ಪೋಷಕರಿಗೆ ಗೊತ್ತಾಗುತ್ತದೆ ಎಂಬ ಭಯದಲ್ಲಿ ತಾನು ಕಿಡ್ನಾಪ್​ ಆಗಿರುವುದಾಗಿ ಕತೆ ಕಟ್ಟಿದ್ದಳಂತೆ. ಆಕೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಇದೇ ಮೇ ತಿಂಗಳ 25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್