Viral Video: ವಿಶ್ವದ ಅತ್ಯಂತ ಸುಂದರ ಪಾಸ್ ಪೋರ್ಟ್ ವಿನ್ಯಾಸಗೊಳಿಸಿದ ಕೆನಡಾ

ಕೆನಡಾ ಸರ್ಕಾರವು ಇತ್ತೀಚಿಗೆ ಅತ್ಯಾಧುನಿಕ ಮತ್ತು ವಿಶ್ವದ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾದ ಪಾಸ್ ಪೋರ್ಟ್ ನ್ನು ಬಿಡುಗಡೆಗೊಳಿಸಿದೆ.

Viral Video: ವಿಶ್ವದ ಅತ್ಯಂತ ಸುಂದರ ಪಾಸ್ ಪೋರ್ಟ್ ವಿನ್ಯಾಸಗೊಳಿಸಿದ ಕೆನಡಾ
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2023 | 5:47 PM

ಕೆನಡಾದ ಪಾಸ್ ಪೋರ್ಟ್ ಪೌರತ್ವದ ಮೂಲಭೂತ ದಾಖಲೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಹೆಚ್ಚು ಪ್ರಭಾವಶಾಲಿ ಮತ್ತು ಗೌರವಾನ್ವಿತ ಪ್ರಯಾಣ ದಾಖಲೆಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ. ಪಾಸ್ಪೋರ್ಟ್​​ಗಳು ನಾವು ವಿದೇಶಕ್ಕೆ ಪ್ರಯಾಣಿಸುವಾಗ ನಮ್ಮನ್ನು ಮತ್ತು ನಮ್ಮ ವೈಯಕ್ತಿಕ ದಾಖಲೆಯ ಮೂಲವಾಗಿದೆ. ವಲಸೆ ನಿರಾಶ್ರಿತರು ಮತ್ತು ಪೌರತ್ವ ಕೆನಡಾ (IRCC) ಕೆನಡಿಯನ್ ಬ್ಯಾಂಕ್ ನೋಟ್ ಕಂಪೆನಿಯು ರಚಿಸಿದ ಹೊಸ ಪಾಸ್ ಪೋರ್ಟ್ ನ್ನು ಇದೀಗ ಬಿಡುಗಡೆ ಮಾಡಲಾಗಿದ್ದು, ಮತ್ತು ಇದು ಎಲ್ಲಾ ಕಾಲದಲ್ಲೂ ಬಳಸಬಹುದ ಪಾಸ್ ಪೋರ್ಟ್ ಆಗಿದೆ. ಇದರ ಬಣ್ಣವು ಕೂಡ ಆರ್ಕಷಯುತವಾಗಿದೆ. ಕೆನಡಾದ ಹೊಸ ಪಾಸ್ ಪೋರ್ಟ್ ನಾಲ್ಕು ಋತುಗಳಲ್ಲಿ ಕೆನಡಾದ ನೈಸರ್ಗಿಕ ಸೌಂದರ್ಯದ ಸಾಂಪ್ರದಾಯಿಕ ಚಿತ್ರಗಳೊಂದಿಗೆ ಕೆನಡಾದ ಪರಂಪರೆ ಮತ್ತು ಗುರುತನ್ನು ತಿಳಿಸುತ್ತದೆ. ಇದರ ಕವರ್ ನಲ್ಲಿ ಮೇಪಲ್ ಎಲೆಗಳ ವಿನ್ಯಾಸವನ್ನು ಮಾಡಲಾಗಿದೆ. ಮುಂಭಾಗದಲ್ಲಿ ದೊಡ್ಡ ಹಳದಿ ಮೇಪಲ್ ಎಲೆ ಮತ್ತು ಹಿಂಭಾಗದಲ್ಲಿ ಕೆತ್ತಿದ ಬಾಹ್ಯ ರೇಖೆಯೊಳಗೆ ಸಣ್ಣ ಕೆಂಪು ಎಲೆಗಳ ಸಂಯೋಜನೆಯನ್ನು ಕಾಣಬಹುದು. ವೀಸಾ ಪುಟಗಳ ಒಳಗೆ, ನಾಲ್ಕು ಋತುಗಳನ್ನು ಪ್ರತಿನಿಧಿಸುವ ಚಿತ್ರಣಗಳಿವೆ.

ಇತ್ತೀಚಿಗೆ ಪರಿಚಯಿಸಲಾದ ಈ ಪಾಸ್ ಪೋರ್ಟ್ ಕೆನಡಿಯನ್ನರ ಗುರುತನ್ನು ಸುರಕ್ಷಿತವಾಗಿರಿಸಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಉದಾಹರಣೆಗೆ ಪಾಲಿಕಾರ್ಬೊನೇಟ್ ಡೇಟಾ ಪುಟ ಕೆನಡಾದ ಚಾಲಕರ ಪರವಾನಗಿಯಂತೆಯೇ ಇರುವ ತಂತ್ರಜ್ಞಾನವನ್ನು ಒಳಗೊಂಡಿದೆ. ಪಾಸ್ ಪೋರ್ಟ್ ಹೊಂದಿರುವವರ ವೈಯಕ್ತಿಕ ಮಾಹಿತಿಯನ್ನು ಈಗ ಶಾಯಿಯಿಂದ ಮುದ್ರಿಸುವ ಬದಲು ಲೇಸರ್ ಕೆತ್ತನೆ ಮಾಡಲಾಗುವುದು. ಇದು ಡೇಟಾ ಪುಟವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಟ್ಯಾಂಪರಿಂಗ್ ನಕಲಿ ನಿರೋಧಕವಾಗಿದೆ. ಹೆಚ್ಚುವರಿಯಾಗಿ, ಪಾಸ್ಪೋರ್ಟ್ ಹಲವಾರು ಇತರ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ:Viral Post: ಟ್ಯಾಟೂ ಹಾಕಿಸಿಕೊಂಡ ಮಗಳು, ‘ನಾನು ನಿನ್ನನ್ನು ಕೊಲ್ಲುತ್ತೇನೆ’ ತಂದೆ

‘ಪಾಸ್ ಪೋರ್ಟ್ ಕೆನಡಾ’ ಎಂಬ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪಾಸ್ಪೋರ್ಟ್ ಅನಾವರಣಗೊಳಿಸುವ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ‘ಇಂದು ಕೆನಡಾದ ಪಾಸ್ಪೋರ್ಟ್ ನ ಹೊಸ ವಿನ್ಯಾಸವನ್ನು ಅನಾವರಣಗೊಳಿಸಲು ನಾವು ಉತ್ಸುಕವಾಗಿದ್ದೇವೇ’ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವೀಡಿಯೋ ಸುಮಾರು 165 ಸಾವಿರ ವೀಕ್ಷಣೆ ಮತ್ತು 719 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ.

ಇನ್ನು ಕೆನಡಾದ ಅನೇಕ ನಾಗರಿಕರು ಕಮೆಂಟ್ಸ್ ಮಾಡುವ ಮೂಲಕ ಈ ಬಗ್ಗೆ ತಮಗೆ ಇರುವ ಪ್ರಶ್ನೆಗಳನ್ನು ಕೇಳಿದ್ದಾರೆ. ಒಬ್ಬ ಬಳಕೆದಾರರು ಮೇ 9 ರಂದು ಹೊಸ ಪಾಸ್ಪೋರ್ಟ್ ನ್ನು ಮುದ್ರಿಸಲಾಗಿದೆ. ಆದರೆ ಇದು ಇನ್ನೂ ಬಂದಿಲ್ಲ. ನಾನು ಹೊಸ ಪಾಸ್ಪೋರ್ಟ್ ಪಡೆಯುತ್ತೇನೆಯೇ ಅಥವಾ ಹಳೆಯದನ್ನು ಪಡೆಯುತ್ತೇನೆಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರು ‘ಕೆಟ್ಟ ಸೇವೆ- ಏಪ್ರಿಲ್ 15 ರಂದು ನನ್ನ ಅರ್ಜಿಯನ್ನು ಕಳುಹಿಸಿದೆ, ಅಂದಿನಿಂದ ಯಾವುದೇ ದಾಖಲೆಯನ್ನು ರಚಿಸಲಾಗಿಲ್ಲ. ಈ ನಡವಳಿಕೆಯ ಬಗ್ಗೆ ಎಲ್ಲಿ ದೂರು ನೀಡಬೇಕೆಂದು ನೀವು ಹೇಳಬಲ್ಲಿರಾ? ನಾನು ಪ್ರಯಾಣಿಸಬೇಕಾಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ನನ್ನ ಪಾಸ್ಪೋರ್ಟ್ 2029ರಲ್ಲಿ ಮುಕ್ತಾಯವಾಗುತ್ತದೆ. ಆದ್ದರಿಂದ ನಾನು ಅದನ್ನು ಬದಲಾಯಿಸಬೇಕೇ ಅಥವಾ ಅಲ್ಲಿಯವರೆಗೆ ಇದನ್ನೆ ಬಳಸುವುದು ಸರಿಯೇ ಎಂದು ಪ್ರಶ್ನೆ ಕೇಳಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ