ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ…

Kitten : ಯಾರದು ನೀರಲ್ಲಿ ಈ ಪುಟ್ಟ ಬೆಕ್ಕನ್ನು ಹೀಗೆ ಬಿಟ್ಟುಹೋಗಿರುವುದು? ಎಂದು ನೆಟ್ಟಿಗರು ಕೋಪಗೊಂಡಿದ್ದಾರೆ. ಈ ನಾಯಿಯೋ ಒಂದೇ ಸಮನೇ ಅದನ್ನು ನೀರಿನಿಂದೆತ್ತಲು ನೋಡುತ್ತಿದೆ. ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋ.

ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ...
ಬಾ ಬೆಕ್ಕುಕೂಸೆ ನನ್ನ ಬಳಿ...
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 13, 2023 | 3:23 PM

Viral Video : ನಾಯಿ ಬೆಕ್ಕು ಆಜನ್ಮ ವೈರಿಗಳು ಎನ್ನುವುದನ್ನು ಹೇಗೆ ನಂಬುವುದು ಈ ವಿಡಿಯೋ ನೋಡಿದ ಮೇಲೆ? ಈ ಪುಟ್ಟ ಬೆಕ್ಕು ಅದು ಹೇಗೆ ಇಲ್ಲಿ ನೀರಿನಲ್ಲಿ ಕುಳಿತಿದೆಯೋ ಗೊತ್ತಿಲ್ಲ. ಈ ಮನೆಯ ನಾಯಿ ಅದನ್ನು ಮೈದಡವುತ್ತ ಮಾತನಾಡಿಸುತ್ತಿದೆ. ಆ ಸಿಂಕ್​ನಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸುತ್ತಿದೆ. ಎಂಥ ಆಪ್ತವಾಗಿದೆಯಲ್ಲ ಈ ವಿಡಿಯೋ. ನೆಟ್ಟಿಗರಲ್ಲಿ ಕೆಲವರು ಮೂಕವಿಸ್ಮಿತರಾಗಿದ್ದಾರೆ ಇನ್ನೂ ಕೆಲವರು ಕುಪಿತಗೊಂಡಿದ್ದಾರೆ.

ಆಯಾ ಪ್ರಾಣಿಗಳ ನಡುವೆ ವೈರತ್ವ ಇದ್ದರೂ ಒಬ್ಬಂಟಿಯಾಗಿರುವ ಮರಿಗಳನ್ನು ನೋಡಿದಾಗ ಅದು ಹೇಗೋ ವಾತ್ಸಲ್ಯ ಉಕ್ಕಿ ಬಂದುಬಿಡುತ್ತದೆ. ಆಗ ತಮ್ಮದೇ ಮರಿ ಎಂಬಂತೆ ಪ್ರೀತಿಸುತ್ತ ಪೋಷಿಸಲು ಶುರು ಮಾಡುತ್ತವೆ. ಮೇಲಿನ ವಿಡಿಯೋ ಇದಕ್ಕೆ ಸಾಕ್ಷಿ. ಈ ವಿಡಿಯೋ ಅನ್ನು ಸುಮಾರು 30,000 ಜನರು ವೀಕ್ಷಿಸಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಮೇಆಂವೂ? ಲಗೇಜಿನೊಳಗೆ ಬೆಕ್ಕು; ನ್ಯೂಯಾರ್ಕ್​ ಏರ್​ಪೋರ್ಟ್​ನಲ್ಲಿ ನಡೆದ ಅಚ್ಚರಿಯ ಘಟನೆ

ಎಷ್ಟೊಂದು ಮೆಲ್ಲನೇ ಅದರ ನೆತ್ತಿಯನ್ನು ಮುಟ್ಟುತ್ತಿದೆ ನೋಡಿ ಆ ನಾಯಿ ಎಂದಿದ್ದಾರೆ ಒಬ್ಬರು. ಛೆ! ಈ ಪುಟಾಣಿಯನ್ನು ನೀರಿನಲ್ಲಿ ಹಾಕಿದ್ದು ಯಾರು? ಎಂದು ಕೇಳಿದ್ದಾರೆ ಇನ್ನೊಬ್ಬರು. ಎಂಥ ಕ್ರೂರಿಗಳು ಈ ಮನೆಯ ಜನರು, ಅದನ್ನು ಹೀಗೆ ನೀರಿನಲ್ಲಿ ಹಾಕಿದ್ದಾರಲ್ಲ ಎಂದು ಇನ್ನೂ ಒಬ್ಬರು ಕೋಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ರಾಶಿ ಪೆಂಗ್ವಿನ್​​ಗಳ ಮಧ್ಯೆ ಮೂರು ಬೆಕ್ಕುಗಳು ಅಡಗಿವೆ, ನೀವು ಹುಡುಕೇ ಹುಡುಕುತ್ತೀರಿ

ಹೊಸ ಮನೆಗೆ ಹೊಂದಿಕೊಳ್ಳುವಲ್ಲಿ ಮರಿ ಕಷ್ಟಪಡುತ್ತಿರಬಹುದು, ತನ್ನ ತಾಯಿಯನ್ನು ಹುಡುಕಿಕೊಂಡು ಹೋಗುವಾಗ ಹೀಗೆ ಸಿಂಕಿನೊಳಗೆ ಇಳಿದಿರಬಹುದು ಎಂದು ಸದ್ಯಕ್ಕೆ ಸಮಾಧಾನ ಮಾಡಿಕೊಳ್ಳೋಣವೇ. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:22 pm, Sat, 13 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ