Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ​ ಡೋನಟ್​ ಪಡೆದ ರ್‍ಯಾಕೂನ್

Raccoon : 'ಡಂಕಿನ್ ಡೋನಟ್ಸ್‌ನ ಹೊಸ ಜಾಹೀರಾತು ತಯಾರಾಗುತ್ತಿದ್ದಂತಿದೆ' ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅದು ಹಣ ಕೊಡಲಿಲ್ಲ, ಉದ್ರಿ ಗಿರಾಕಿ ಇರಬೇಕು’ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ನೀವೇನಂತೀರಿ?

ಹಸಿವಾದೊಡೆ ಭಿಕ್ಷಾನ್ನಗಳುಂಟು; ಅಂಗಡಿಯಿಂದ​ ಡೋನಟ್​ ಪಡೆದ ರ್‍ಯಾಕೂನ್
ಅಂಗಡಿಯ ಮಹಿಳೆಯಿಂದ ಡೋನಟ್​ ಪಡೆಯುತ್ತಿರುವ ರ್ಯಾಕೂನ್​
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 13, 2023 | 12:25 PM

Viral Video : ಒಂದು ರ್‍ಯಾಕೂನ್ (Raccoon) ಡೋನಟ್ ಮಾರುವ ಅಂಗಡಿಯೊಂದರ ಕಿಟಕಿಯ ಹೊರಗೆ ಕಾದು ನಿಂತಿದೆ. ನಂತರ ರಸ್ತೆ ದಾಟಿ ಅಲ್ಲಿಯ ಸಿಬ್ಬಂದಿಯು ಕೈಗೊಡ್ಡಿದ ಡೋನಟ್ಅನ್ನು ನಿರಾತಂಕವಾಗಿ ಇಸಿದುಕೊಂಡು ಕಚ್ಚಿ ತಿನ್ನುತ್ತಾ ಮರಳುತ್ತದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು, ‘ಡಂಕಿನ್ ಡೋನಟ್ಸ್‌ನ ಹೊಸ ಜಾಹೀರಾತು ತಯಾರಾಗುತ್ತಿದ್ದಂತಿದೆ ಎಂದಿದ್ದಾರೆ ನೆಟ್ಟಿಗರೊಬ್ಬರು. ‘ಅದು ಹಣ ಕೊಡಲಿಲ್ಲ, ಉದ್ರಿ ಗಿರಾಕಿ ಇರಬೇಕು’ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ರ್‍ಯಾಕೂನ್ ಉತ್ತರ ಅಮೇರಿಕಾದ ಮಧ್ಯಮ ಗಾತ್ರದ ಸ್ತನಿಗಳಲ್ಲಿ ಒಂದು. ಇವು ನಿಶಾಚರಿ ಮಾಂಸಾಹಾರಿ ಪ್ರಾಣಿ. ಇವುಗಳ ಮೂಲ ಎಲೆಯುದುರುವ ಮರಗಳಿರುವ ಕಾಡು (deciduous forests). ಆದರೆ ವಿವಿಧ ಬಗೆಯ ವಾತಾವರಣಗಳಿಗೆ ಹೊಂದಿಕೊಳ್ಳಬಲ್ಲ ರ್‍ಯಾಕೂನ್‌ಗಳು ಗುಡ್ಡಗಾಡು, ಬಯಲು, ಅಷ್ಟೇ ಏಕೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ.

ಇದನ್ನೂ ಓದಿ : AGI;ಹತ್ತಿಪ್ಪತ್ತು ವರ್ಷಗಳಲ್ಲಿ ಸಾರ್ವತ್ರಿಕ ಕೃತಕ ಬುದ್ಧಿಮತ್ತೆಯ ಕನಸು ಸಾಕಾರವಾದೀತು

ಅಮೆರಿಕನ್ ಸಬ್‌ಅರ್ಬ್‌ಗಳಲ್ಲಿ ವಾಸವಿರುವ ಬಹುತೇಕ ಜನರು ಇವನ್ನು ಉಪದ್ರವಕಾರಿ ಜೀವಿಗಳು ಎಂದು ಗಣಿಸಿ ಅವನ್ನು ಓಡಿಸುವುದಷ್ಟೇ ಅಲ್ಲ ಕೊಲ್ಲಲೂ ಮುಂದಾಗುತ್ತಾರೆ. ಆದರೆ ದಪ್ಪ ಮೃದು ತುಪ್ಪಳ ಚೂಪು ಮುಖ ಮುಖದ ಮೇಲಿನ ಪಟ್ಟೆಗಳು, ಇಂಥ ಸೊಗಸಾದ ಲಕ್ಷಣಗಳುಳ್ಲ ರ್‍ಯಾಕೂನ್‌ಗಳು ಬಹಳ ಮಂದಿಗೆ ಮುದ್ದಾಗಿ ಡ ಕಾಣುತ್ತವೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಸಲಗದ ತಂಟೆಗೆ ಹೋಗಿಯೂ ಪಾರಾದವನ ಕತೆ

ಅದೇನೇ ಇರಲಿ, ಡೋನಟ್ ಭಿಕ್ಷೆ ಪಡೆದುಕೊಂಡು ಓಡಿ ಹೋದ ಈ ಪ್ರಾಣಿಯ ವರ್ತನೆಯನ್ನು ನೋಡಿದ ಎಲ್ಲರೂ ಬಾಯಿಯ ಮೇಲೆ ಕೈಇಟ್ಟುಕೊಂಡಿರುವುದಂತೂ ಸತ್ಯ. ಸರಿಯಾದ ಸಮಯಕ್ಕೆ ಕ್ಯಾಮೆರಾದಿಂದ ಶೂಟ್ ಮಾಡಿ ಇಂಥ ಹೃದಯಸ್ಪರ್ಶೀ ದೃಶ್ಯವನ್ನು ಹಂಚಿಕೊಂಡವರಿಗೆ ನಾವು ಥ್ಯಾಂಕ್ಸ್ ಹೇಳಲೇಬೇಕು. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:24 pm, Sat, 13 May 23

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
ಬೆಳಗ್ಗೆ 6 ಗಂಟೆಗೆ ದೆಹಲಿಯಿಂದ ಬೆಂಗಳೂರು ಆಗಮಿಸಿದ ಮಂಜುನಾಥ್ ದೇಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
PSL 2025: ಬೌಲಿಂಗ್ ವೇಳೆ ಕಳ್ಳಾಟ: ಆಟಗಾರರ ನಡುವೆ ವಾಕ್ಕಲಹ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಭರತ್ ಭೂಷಣ್ ಪತ್ನಿ ಮತ್ತು ಕುಟುಂಬಸ್ಥರಿಗೆ ಮುಖ್ಯಮಂತ್ರಿಯಿಂದ ಸಾಂತ್ವನ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಬ್ಯಾಟರ್ ಬಿದ್ದು ಒದ್ದಾಡಿದರೂ ತಿರುಗಿ ಕೂಡ ನೋಡದ ಜಸ್​ಪ್ರೀತ್ ಬುಮ್ರಾ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಇದೆಂತಹ ವರ್ತನೆ... ಮೌನಾಚರಣೆ ವೇಳೆಯೂ ಹಾರ್ದಿಕ್ ಪಾಂಡ್ಯ ಹುಚ್ಚಾಟ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ
ಬೆಂಗಳೂರು ತಲುಪಿದ ಕನ್ನಡಿಗರ ಪಾರ್ಥಿವ ಶರೀರ, ಅಂತಿಮ ನಮನ ಸಲ್ಲಿಕೆ