Viral Video: ಯಶಸ್ಸಿನ ಗುಟ್ಟು ತಿಳಿಯಬೇಕೆಂದರೆ ವಿವೇಕ್ ರಾಮಸ್ವಾಮಿಯವರ ಈ ಮಾತುಗಳನ್ನು ಕೇಳಿ
ಭಾರತೀಯ ಮೂಲದ ಅಮೇರಿಕಾ ಉದ್ಯಮಿ ವಿವೇಕ್ ರಾಮಸ್ವಾಮಿಯವರ ಬಳಿ ಒಬ್ಬ ಹುಡುಗ ಯಶಸ್ಸು ಸಾಧಿಸುವುದು ಹೇಗೆ ಎಂಬುದನ್ನು ಕೇಳಿದ್ದಾನೆ. ಅದಕ್ಕೆ ಬಹಳ ಸುಂದರವಾಗಿ ಯಶಸ್ಸಿನ ಗುಟ್ಟಿನ ಬಗ್ಗೆ ಹೇಳಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ಧಾರೆ.
ಜೀವನದಲ್ಲಿ ಯಶಸ್ಸು ಸಾಧಿಸಬೇಕು, ನಾನು ಕೂಡಾ ಉನ್ನತ ಸ್ಥಾನವನ್ನು ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬರ ಕನಸು. ಆ ಕನಸು ನನಸಾಗಬೇಕೆಂದರೆ ಸರಿಯಾದ ಮಾರ್ಗದರ್ಶನದೊಂದಿಗೆ ಛಲವು ಇರಬೇಕು. ಅದರಲ್ಲೂ ಯಶಸ್ಸಿನ ಗುಟ್ಟಿನ ಸಲಹೆಯನ್ನು ಯಶಸ್ಸು ಸಾಧಿಸಿದವರ ಬಳಿ ಕೇಳಿದರೆ ಉತ್ತಮವಾಗಿರುತ್ತದೆ ಅಲ್ಲವೆ?, ಯಶಸ್ವಿ ಸಾಧಿಸುವುದು ಹೇಗೆ ಎಂಬುದನ್ನು ಉದ್ಯಮಿ ವಿವೇಕ್ ರಾಮಸ್ವಾಮಿಯವರು ಹುಡುಗನೊಬ್ಬನಿಗೆ ಸುಂದರವಾಗಿ ವಿವರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೇರಿಕಾದಲ್ಲಿನ 2024ರ ಅಧ್ಯಕ್ಷೀಯ ಚುನಾವಣೆಗೆ ಸಾಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಅವರು 16 ವರ್ಷದ ಹುಡುಗನ ಜೊತೆಗಿನ ಸಂಭಾಷನೆಯ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 16 ವರ್ಷದ ಹುಡುಗನೊಬ್ಬ ವಿವೇಕ್ ರಾಮಸ್ವಾಮಿಯವರ ಬಳಿ ಬಂದು ಯಶಸ್ವಿ ಸಾಧಿಸುವುದು ಹೇಗೆ, ನಾನು ನಿಮ್ಮಿಂದ ಸಲಹೆ ಪಡೆಯಬಹುದೇ ಎಂದು ಕೇಳಿದ್ದಾನೆ. ಅದಕ್ಕೆ ರಾಮಸ್ವಾಮಿಯವರ ಉತ್ತರ ಹೀಗಿತ್ತು, ನಾನು ಯಶಸ್ಸನ್ನು ಸಾಧಿಸಿದ ವಿಧಾನವು ಸರಳ ಸೂತ್ರವನ್ನು ಅನುಸರಿಸುತ್ತದೆ, ಪ್ಯಾಕ್ ಎಲ್ಲಿಗೆ ಹೋಗುತ್ತಿದೆ ಎಂಬುವುದನ್ನು ಕಂಡುಹಿಡಿಯಿರಿ ಮತ್ತು ಅದರಲ್ಲಾದ ತಪ್ಪುಗಳನ್ನು ಲೆಕ್ಕಾಚಾರ ಮಾಡಿ. ಆದ್ದರಿಂದ ಯಶಸ್ವಿಯಾಗಲು ಒಮ್ಮತವನ್ನು ಅನುಸರಿಸಿ, ಸಾಧಿಸುವುದಕ್ಕೆ ಯಾವುದೇ ಮಿತಿಗಳಿಲ್ಲ ಎಂದು ಆ ಹುಡುಗನಿಗೆ ಯಶಸ್ಸಿನ ಸೂತ್ರವನ್ನು ವಿವರವಾಗಿ ಹೇಳಿ ಕೊಡುವುದನ್ನು ವೀಡಿಯೋದಲ್ಲಿ ಕಾಣಬಹುದು.
View this post on Instagram
ಇದನ್ನೂ ಓದಿ: Viral Video: ಮೊದಲ ಬಾರಿಗೆ ಮಗನ ಜತೆಗೆ ವಿಮಾನಯಾನ, ಪಾಪ ಅಪ್ಪನ ಖುಷಿ ನೋಡಿ
ಏಪ್ರಿಲ್ 29 ರಂದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಈವರೆಗೆ 567 ಸಾವಿರ ವೀಕ್ಷಣೆಗಳನ್ನು ಹಾಗೂ 24.8 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಲವರು ‘ಒಳ್ಳೆಯ ಸಲಹೆ ನೀಡಿದ್ದೀರಿ’ ಎಂದು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ