Viral Video: ಮೊದಲ ಬಾರಿಗೆ ಮಗನ ಜತೆಗೆ ವಿಮಾನಯಾನ, ಪಾಪ ಅಪ್ಪನ ಖುಷಿ ನೋಡಿ

ವ್ಯಕ್ತಿಯೊಬ್ಬರು ಮೊದಲ ಬಾರಿಗೆ ತಮ್ಮ ತಂದೆಯನ್ನು ವಿಮಾನಯಾನದ ಮೂಲಕ ತಮ್ಮ ಊರಿನಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆ ತಂದೆಯು ಅನುಭವಿಸಿದ ಖುಷಿ ಎಂತಹ ಕಲ್ಲು ಮನಸ್ಸನ್ನು ಕೂಡಾ ಭಾವನಾತ್ಮಕವಾಗಿಸುವಂತಿದೆ.

Viral Video: ಮೊದಲ ಬಾರಿಗೆ ಮಗನ ಜತೆಗೆ ವಿಮಾನಯಾನ, ಪಾಪ ಅಪ್ಪನ ಖುಷಿ ನೋಡಿ
ವೈರಲ್​​ ವೀಡಿಯೋ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 12, 2023 | 2:09 PM

ತಂದೆ ತಾಯಿ ನಮಗಾಗಿ ಅದೆಷ್ಟೋ ತ್ಯಾಗಗಳನ್ನು ಮಾಡಿರುತ್ತಾರೆ. ನಾವು ಬೆಳೆದು ದೊಡ್ಡವರಾದ ನಂತರ ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು, ಅವರು ಹೆಮ್ಮೆ ಪಡುವಂತೆ ಬದುಕಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕರಿಗೆ ನಮ್ಮ ಪೋಷಕರು ನೋಡಿರದ ಹೊಸ ಪ್ರಪಂಚವನ್ನು ಅವರಿಗೆ ತೋರಿಸಿ ಅವರನ್ನು ಸಂತೋಷಪಡಿಸಬೇಕು, ಜೀವನದಲ್ಲಿ ಒಂದು ಬಾರಿಯಾದರೂ ನಮ್ಮ ಹೆತ್ತವರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ದೇಶ ವಿದೇಶ ಸುತ್ತಾಡಿಸಬೇಕೆಂಬ ಬಯಕೆ ಇರುತ್ತದೆ. ಇದೇ ರೀತಿ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಶಿ ವೀಡಿಯೋ ವೈರಲ್ ಆಗಿದ್ದು, ಎಲ್ಲರನ್ನು ಭಾವನಾತ್ಮಕವನ್ನಾಗಿಸಿದೆ. ವ್ಯಕ್ತಿಯೊಬ್ಬರು ತನ್ನ ತಂದೆಯನ್ನು ಮೊದಲಬಾರಿಗೆ ವಿಮಾನಯಾನದ ಮೂಲಕ ಮುಂಬೈಗೆ ಕರೆದುಕೊಂಡು ಹೋಗಿದ್ದು, ಆ ತಂದೆಯ ಮುಖದಲ್ಲಿನ ಖುಷಿ ನಮ್ಮ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ಜತಿನ್ ಲಂಬ ಎನ್ನುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಭಾವನಾತ್ಮಕ ವೀಡಿಯೋವನ್ನು ಹಂಚಿಕೊಂಡಿದ್ದು, ಅವರು ತಮ್ಮ ತಂದೆಯನ್ನು ದೆಹಲಿಯಿಂದ ಮುಂಬೈಗೆ ಮೊದಲ ಬಾರಿಗೆ ವಿಮಾನಯಾನದ ಮೂಲಕ ಕರೆದುಕೊಂಡು ಹೋಗಿದ್ದಾರೆ. ವೀಡಿಯೋ ಕ್ಲಿಪ್ ನಲ್ಲಿ ಅವರ ತಂದೆ ವಿಮಾನಕ್ಕೆ ಹೋಗುತ್ತಿದ್ದಂತೆ, ಹೊಸ ಪ್ರಪಂಚವನ್ನು ಕಂಡು ಮಗು ಮನಸ್ಸಿನಿಂದ ಆನಂದಿಸಿದರು, ಹಾಗೂ ವಿಮಾನದಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಸಂತೋಷದಿಂದ ಸೆಲ್ಫಿ ತೆಗೆದುಕೊಳ್ಳುತ್ತಾರೆ, ನಂತರ ಮುಂಬೈಗೆ ಬಂದಿಳಿದು ಮಗನ ರೂಮ್​​​ಗೆ ಬರುತ್ತಾರೆ, ಅಲ್ಲಿನ ಹೊರಗಿನ ನೋಟವನ್ನು ಅವರು ವೀಕ್ಷಿಸುವುದನ್ನು ಕಾಣಬಹುದು. ಒಬ್ಬ ತಂದೆಯು ಮೊದಲ ಬಾರಿಗೆ ಹೊರಗಿನ ಪ್ರಪಂಚಕ್ಕೆ ಬಂದು ಸಂತೋಷ ಪಡುವ ಭಾವನಾತ್ಮಕ ಸನ್ನಿವೇಶವನ್ನು ಇಲ್ಲಿ ಸೆರೆಹಿಡಿಯಲಾಗಿದೆ.

ಇದನ್ನೂ ಓದಿ:Viral Video: ಪಾರ್ಕಿಂಗ್​ನಲ್ಲಿದ್ದ ಬೈಕ್​ಗಳ ಮೇಲೆ ಕಾರು ಹತ್ತಿಸಿದ ಯುವತಿ, ಅಯ್ಯೋ ಅಕ್ಕಾ ನಿಧಾನ ಎಂದ ನೆಟ್ಟಿಗರು

ಇನ್ಸ್ಟಾಗ್ರಾಮ್​​​​ನಲ್ಲಿ ವೈರಲ್ ಆಗಿರುವ ಈ ವೀಡಿಯೋ 129 ಸಾವಿರ ವೀಕ್ಷಣೆಗಳನ್ನು ಹಾಗೂ 21.1 ಸಾವಿರ ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಮತ್ತು ಅನೇಕರು ಈ ಹೃದಯಸ್ಪರ್ಶಿ ವೀಡಿಯೋವನ್ನು ಮೆಚ್ಚಿ, ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ನೀವು ಜೀವನದಲ್ಲಿ ಗೆದ್ದಿದ್ದೀರಿ ಸ್ನೇಹಿತ. ನನ್ನ ತಾಯಿ ಮತ್ತು ತಂದೆಗಾಗಿ ನಾನು ಇದೇ ರೀತಿ ಮಾಡಲು ಬಯಸುತ್ತೇನೆ’ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರು ‘ಏಕೆ ಎಂದು ನನಗೆ ತಿಳಿದಿಲ್ಲ ಆದರೆ ಈ ವೀಡಿಯೋ ನನ್ನನ್ನು ಭಾವನಾತ್ಮಕವನ್ನಾಗಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ದೇವರೇ ಎಲ್ಲಾ ತಂದೆ ತಾಯಿಗೂ ಈ ಸಂತೋಷದ ಕ್ಷಣವನ್ನು ಆಶೀರ್ವದಿಸಿ’ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್