ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?
AI : ಸಲ್ಮಾನ್, ಪ್ರಭಾಸ್, ಅಕ್ಷಯ್ ಅವರುಗಳನ್ನು ಗುರುತಿಸಬಹುದು, ಉಳಿದವರನ್ನು ಥಟ್ಟನೆ ಗುರುತಿಸಲಾಗದು. ಶಾರುಖ್ ಖಾನ್ ಇಮ್ರಾನ್ ಖಾನ್ನಂತೆ ಕಾಣುತ್ತಿದ್ದಾರೆ... ಹೀಗೆಲ್ಲ ಪ್ರತಿಕ್ರಿಯೆಗಳಿವೆ ಇಲ್ಲಿ. ನಿಮಗೇನೆನ್ನಿಸುತ್ತದೆ?
Viral News : ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಈವತ್ತು ಊಹಿಸಲಾಗದ ಮಟ್ಟಿಗೆ ವ್ಯಾಪಿಸಿಕೊಂಡಿದೆ. ಕಲಾಜಗತ್ತಿನಲ್ಲಿಯೂ ಇದು ದಾಪುಗಾಲಿಡುತ್ತಲೇ ಇದೆ. ಕ್ಷಣಾರ್ಧದಲ್ಲಿ ನಂಬಲಸಾಧ್ಯವಾದಂಥ ಫಲಿತಾಂಶವನ್ನು ಇದು ನಿಮ್ಮೆದುರು ತೆರೆದಿಡುತ್ತದೆ. ಇದೀಗ ವೈರಲ್ ಆಗಿರುವ ಈ ಫೋಟೋಗಳನ್ನು ನೋಡಿ. ಎಐ (AI) ಕಲಾವಿದರೊಬ್ಬರು ಸಿನೆಮಾ ನಾಯಕರುಗಳನ್ನು ಹೇಗೆ ಹಿಡಿದಿಟ್ಟಿದ್ದಾರೆ. ತೆರೆಯ ಮೇಲೆ ಚಿರಯೌವ್ವನಿಗರಾಗಿಯೇ ಕಾಣುವ ನಟನಟಿಯರು ನಿಜವಾಗಲೂ ವಯಸ್ಸಾದ ಮೇಲೆ ಹೇಗೆ ಕಾಣಬಹುದು ಎಂಬ ಕುತೂಹಲವನ್ನು ಇದು ತಣಿಸುವಂತಿದೆ.
ಇದನ್ನೂ ಓದಿView this post on Instagram
ಎಐ ಕಲಾವಿದರಾದ ಎಸ್ ಕೆ ಎಂ ಡಿ ಅಬು ಸಾಹಿದ್ ಇವರು ಇದೀಗ 10 ನಾಯಕ ನಟರ ಚಿತ್ರಗಳನ್ನು ಎಐನಲ್ಲಿ ಚಿತ್ರಿಸಿ ಅಂತರ್ಜಾಲದಲ್ಲಿ ಪ್ರಕಟಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್, ಪ್ರಭಾಸ್, ಶಾಹೀದ್ ಕಪೂರ್, ಅಲ್ಲು ಅರ್ಜುನ್, ಅಕ್ಷಯ್ ಕುಮಾರ್ ರಣಬೀರ್, ಕಪೂರ್, ಹೃತಿಕ್ ರೋಷನ್ ಮತ್ತು ಮಹೇಶ ಬಾಬು ಅವರುಗಳೆಲ್ಲ ವಯಸ್ಸಾದ ಮೇಲೆ ಹೇಗೆ ಕಾಣುತ್ತಾರೆ ಎಂದು ನೀವಿಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ : ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
ಎರಡು ದಿನಗಳ ಹಿಂದೆ ಸಾಹಿದ್ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಈಗಾಗಲೇ 46,000 ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 500 ಜನರು ಪ್ರತಿಕ್ರಿಯಿಸಿದ್ದಾರೆ. ಅನಿಲ್ ಕಪೂರ್ ಎಂದು ಅನ್ನಿಸುವುದೇ ಇಲ್ಲ ಎಂದು ಒಬ್ಬರು ಹೇಳಿದ್ದಾರೆ. ಸಲ್ಮಾನ್, ಪ್ರಭಾಸ್, ಅಕ್ಷಯ್ ಅವರುಗಳನ್ನು ಗುರುತಿಸಬಹುದು. ಉಳಿದವರು ಥಟ್ಟನೆ ಗುರುತಿಸಲಾಗದು ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ಗಗನಯಾನಿ ವಧು; ಕಲಾವಿದರ ಕಲ್ಪನೆಗೆ ಒತ್ತಾಸೆ ನೀಡಿದ ಎಐ ತಂತ್ರಜ್ಞಾನ
ಶಾರುಖ್ ಇಮ್ರಾನ್ ಖಾನ್ನಂತೆ ಕಾಣುತ್ತಾನೆ ಎಂದು ಮಗದೊಬ್ಬರು ಹೇಳಿದ್ದಾರೆ. ಧೂಮ್ 2ನಲ್ಲಿರುವಂತೆಯೇ ಇದ್ದಾರೆ ಹೃತಿಕ್ ರೋಷನ್ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ರಣಬೀರ್ ಸಂಜಯ್ ದತ್ರಂತೆ ಕಾಣುತ್ತಿಲ್ಲವೆ ಎಂದು ಇನ್ನ್ಯಾರೋ ಕೇಳಿದ್ದಾರೆ.
ಈ ಚಿತ್ರಗಳನ್ನು ನೋಡಿದ ನಿಮಗೆ ಏನನ್ನಿಸುತ್ತದೆ? ಸಾಮ್ಯತೆ ಹೇಗಿದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:14 am, Fri, 12 May 23