ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು

Cancer : ಕ್ಯಾನ್ಸರ್​ಗೆ ಒಳಗಾದ ತಂಗಿಗಾಗಿ ಅಣ್ಣ ತಲೆ ಬೋಳಿಸಿಕೊಂಡಿದ್ದು, ಕ್ಯಾನ್ಸರ್​ನಿಂದ ತೀರಿಹೋದ ತಾಯಿಗಾಗಿ ಮಗಳು ತನ್ನ ಮದುವೆಯಲ್ಲಿ ತಲೆ ಬೋಳಿಸಿಕೊಂಡಿದ್ದನ್ನು ನೋಡಿದ್ದೀರಿ. ಆದರೆ ಇಲ್ಲಿ ಏನಾಗಿದೆ ನೋಡಿ!

ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತನ್ನ ತಲೆಯನ್ನೂ ಬೋಳಿಸಿಕೊಳ್ಳುತ್ತಿರುವ ಮಗ
Follow us
TV9 Web
| Updated By: ಶ್ರೀದೇವಿ ಕಳಸದ

Updated on: May 12, 2023 | 10:24 AM

Viral Video : ಕ್ಯಾನ್ಸರ್​ ಎಂದಾಕ್ಷಣ ಒಂದು ಕ್ಷಣ ತಲ್ಲಣ ಉಂಟಾಗದೇ ಇರದು. ಇನ್ನು ರೋಗಿಗಳು ಜೀವನಪೂರ್ತಿ ಅದರೊಂದಿಗೆ ಹೋರಾಡಬೇಕೆಂದರೆ? ಅವರಿಗೆ ಚಿಕಿತ್ಸೆಯೊಂದಿಗೆ ಮನೋಸ್ಥೈರ್ಯ ಬಹಳ ಮುಖ್ಯ. ಅದು ತನ್ನಿಂತಾನೇ ಒದಗದು, ಜೊತೆಗಿರುವವರು ಅವರಿಗೆ ಭಾವನಾತ್ಮಕ ಆಸರೆ ಕೊಟ್ಟರೆ ಮಾತ್ರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಸಲೂನಿನಲ್ಲಿ ಕೆಲಸ ಮಾಡುವ ಈ ಮಗನ ತಾಯಿಗೆ ಕ್ಯಾನ್ಸರ್ ಆಗಿದೆ. ಕಿಮೋಥೆರಪಿಗೆ ಮೊದಲು ಮಗನೇ ಅಮ್ಮನ ತಲೆಯನ್ನು ಬೋಳಿಸಿದ್ದಾನೆ. ಮುಂದೇನಾಗುತ್ತದೆ ನೋಡಿ ವಿಡಿಯೋ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Guilherme Magalhães (@guido.magalhaes)

ಸಲೂನಿನ ಸಿಬ್ಬಂದಿಯೂ ಈ ತಾಯಿಗೆ ಸಾಥ್​ ಕೊಡುತ್ತದೆ. ಇದೆಲ್ಲವನ್ನು ನೋಡಿದ ಆಕೆಯ ಕಣ್ಣುಗಳು ಉಕ್ಕಲಾರಂಭಿಸುತ್ತದೆ. ಈತನಕ ಈ ವಿಡಿಯೋ ಅನ್ನು ಸುಮಾರು 50 ಮಿಲಿಯನ್​ ಜನರು ನೋಡಿದ್ದಾರೆ. 38 ಲಕ್ಷಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಲಕ್ಷಾಂತರ ಜನರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ನಾನಂತೂ ಈ ವಿಡಿಯೋ ನೋಡಿ ಅಳುತ್ತಿದ್ದೇನೆ ಎಂದು ಹಲವಾರು ಜನರು ಹೇಳಿದ್ದಾರೆ. ನನ್ನ ತಾಯಿಗೂ ಕ್ಯಾನ್ಸರ್ ಆಗಿತ್ತು. ಆಗ ಅವಳಿಗೆ ಹೀಗೆ ನಾನೂ ಕೂಡ ಭಾವನಾತ್ಮಕ ಬೆಂಬಲ ಕೊಡಬಹುದಿತ್ತು. ಆಗಿದು ಹೊಳೆಯಲೇ ಇಲ್ಲ. ಬದಲಾಗಿ ಬಗೆಬಗೆಯ ವಿಗ್​ಗಳನ್ನು ತಂದುಕೊಟ್ಟೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಮೊಬೈಲ್​ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್

ಇದು ಅತ್ಯಂತ ಸುಂದರವಾದ ವಿಡಿಯೋ. ಎಲ್ಲರಿಗೂ ಇಂಥ ದಯಾಮನೋಭಾವ ಇರಬೇಕು ಎಂದಿದ್ಧಾರೆ ಮತ್ತೊಬ್ಬರು. ಜಗತ್ತು ಇನ್ನೂ ಕೆಟ್ಟು ಹೋಗಿಲ್ಲ. ಒಳ್ಳೆಯವರು ಈ ಭೂಮಿಯ ಮೇಲೆ ಇನ್ನೂ ಇದ್ದಾರೆ ಎಂದು ಮಗದೊಬ್ಬರು ಹೇಳಿದ್ದಾರೆ.

ನಾವು ನಿಮ್ಮ ಜೊತೆಗಿದ್ದೇವೆ ಎನ್ನುವ ಅಭಯ ಇದೆಯಲ್ಲ. ಅದೇ ಜೀವದಾಯಿನಿ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ