ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

Kannada : ಯಾರ್ರೀ ಬೀದರ್, ಧಾರವಾಡ, ಬೆಳಗಾವಿ, ಹಾಸನ್.. ಬರ್ರಿ ಇಲ್ಲಿ ನಿಮ್ ನಿಮ್ ಊರಿನ ಹುಡಗ್ಯಾರು ಒಂದು ಮಜಾ ರೀಲ್ಸ್ ಮಾಡ್ಯಾರ. ಒಂದ್​ ಕಂಡೀಷನ್​, ಇದನ್ನ ಒಂದ ಸಲಾ ನೋಡಬೇಕಾ ಮತ್ತ?

ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!
ಬೆಳಗಾವಿ, ಹಾಸನ, ಬೀದರ, ಧಾರವಾಡದ ಹುಡುಗಿಯರು
Follow us
|

Updated on:May 12, 2023 | 1:03 PM

Viral Video : ಭಾಷೆ ಎನ್ನುವುದೊಂದು ಸೋಜಿಗ. ಭಾಷೆಗಳ ಬಗ್ಗೆ ಸಣ್ಣಮಟ್ಟದ ಆಸಕ್ತಿ ಇದ್ದವರಿಗೂ ಅವುಗಳ ಶ್ರೀಮಂತಿಕೆ, ವೈವಿಧ್ಯಗಳು ದಂಗುಬಡಿಸುತ್ತವೆ. ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಆಡಳಿತ ಭಾಷೆ ಕನ್ನಡ. ಆದರೆ ಈ ಕನ್ನಡ ಎನ್ನುವುದರ ನಿರ್ದಿಷ್ಟ ಸ್ವರೂಪವೇನು? ಜಗತ್ತಿನ ಯಾವುದೇ ದೇಶದಲ್ಲೂ ಆಡುಮಾತು ಊರಿಂದೂರಿಗೆ, ಪ್ರಾಂತದಿಂದ ಪ್ರಾಂತಕ್ಕೆ ಬದಲಾಗುತ್ತಲೇ ಇರುತ್ತದೆ. ಕರ್ನಾಟಕ ಮತ್ತು ಕನ್ನಡವೂ ಅದಕ್ಕೆ ಹೊರತಲ್ಲ.

ಆದರೆ ನಮ್ಮಲ್ಲಿ ಇನ್ನೂ ಕೆಲವು ವಿಶೇಷಗಳಿವೆ. ಭಾಷಾವಾರು ಪ್ರಾಂತಗಳ ರಚನೆಯಾಗಿ ಕರ್ನಾಟಕದ ಏಕೀಕರಣಕ್ಕೆ ಮೊದಲು ಕನ್ನಡ ಮಾತನ್ನಾಡುವ ಬಹುತೇಕ ಜನರು ಬೇರೆ ಬೇರೆ ರಾಜ್ಯಗಳಲ್ಲಿ ಹಂಚಿಹೋಗಿದ್ದರು. ಅಲ್ಲದೇ ಕರ್ನಾಟಕ ನೆಲ ಸುತ್ತುವರಿದ (landlocked) ಪ್ರದೇಶವಲ್ಲ. ಉದ್ದನೆಯ ಕರಾವಳಿ ಹಾಗೂ ಅನೇಕ ಗಡಿನಾಡುಗಳಿರುವ ನಮ್ಮಲ್ಲಿ ಹೊರಗಿನ ಪ್ರಭಾವನೂ ಸಾಕಷ್ಟು ಇದೆ.

ಭಾಷಾವೈವಿಧ್ಯಕ್ಕೆ ಸಂಬಂಧಿಸಿದ ಇನ್​ಸ್ಟಾಗ್ರಾಂ  ರೀಲ್​  ನೋಡಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೀಗಾಗಿ ಆ ಪರಿಸರಗಳ ನುಡಿಗಳೊಟ್ಟಿಗಿನ ಸುದೀರ್ಘ ಕೊಡುಕೊಳುವಿಕೆಯ ಸಂಬಂಧದಿಂದ ಕರ್ನಾಟಕದ ಬೇರೆಬೇರೆ ಭಾಗಗಳ ಒಳನುಡಿಗಳ ಪದನೆರಕೆ (vocabulary) ಹಾಗೂ ಧ್ವನಿಗಳಲ್ಲಿ (phonetics) ಎದ್ದುಕಾಣುವ ವ್ಯತ್ಯಾಸಗಳಿವೆ. ಎಷ್ಟರ ಮಟ್ಟಿಗೆ ಎಂದರೆ ಬೀದರ್‌ನ ಕನ್ನಡ ಹಾಗೂ ಚಾಮರಾಜನಗರದ ಕನ್ನಡ ಎರಡು ಬೇರೆ ಬೇರೆ ಭಾಷೆಗಳೇನೋ ಎನ್ನಿಸಬೇಕು.

ಇದನ್ನೂ ಓದಿ : Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ

ಇದರ ಒಂದು ಕಿರುನೋಟವನ್ನು ಮೇಲಿನ ಇನ್​ಸ್ಟಾಗ್ರಾಂ ರೀಲ್‌ನಲ್ಲಿ ನೀವು ಗಮನಿಸಿದಿರಿ. ಬೀದರ್, ಬೆಳಗಾವಿ, ಹಾಸನ, ಹೀಗೆ ಬೇರೆಬೇರೆ ಕಡೆಯ ಹುಡುಗಿಯರು ತೆಳುಹಾಸ್ಯದ ಸಹಾಯದಿಂದ ಈ ವ್ಯತ್ಯಾಸಗಳನ್ನು ಪ್ರಸ್ತುತಪಡಿಸಿದ್ದಾರೆ. ತೀರ ಸಾಮಾನ್ಯ ನುಡಿಗಟ್ಟುಗಳನ್ನು ಒಬ್ಬರು ತಮ್ಮೂರ ಒಳನುಡಿಯಲ್ಲಿ ಹೇಳಿದಾಗ ಅದು ಉಳಿದವರಿಗೆ ತಮಾಷೆಯಾಗಿ ಕೇಳಿಸುತ್ತದೆ. ಈ ಹುಡುಗಿಯರು ಹುರುಪಿನಿಂದ ಸಹಜವಾಗಿ ನಗುನಗುತ್ತ ಇದನ್ನು ಚೆಂದವಾಗಿ ಇಲ್ಲಿ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ : 5 ಅಡಿ ಮೊಸಳೆಯನ್ನು ನುಂಗಿದ್ದ ಹೆಬ್ಬಾವಿನ ವಿಡಿಯೋ ವೈರಲ್

ನಿಮ್ಮೂರಿನ ಯಾವ ಪದ ಬೇರೆ ಕಡೆ ಹೀಗೆ ನಗೆಯನ್ನು ಚಿಮ್ಮಿಸುತ್ತದೆ? ಬೇರೆ ಭಾಗದ ಯಾವ ನುಡಿಗಟ್ಟಿನ ಬಳಕೆ ನಿಮಗೆ ಮೋಜೆನ್ನಿಸುತ್ತದೆ? ಕೆಳಗೆ ಕಾಮೆಂಟುಗಳಲ್ಲಿ ಬರೆಯಿರಿ. ಈ ಪೋಸ್ಟನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ವಾರಾಂತ್ಯಕ್ಕೆ ಮುನ್ನ ಅವರೂ ಸ್ವಲ್ಪ ನಗಲಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:46 pm, Fri, 12 May 23