Viral Video: ಪಾರ್ಕಿಂಗ್ನಲ್ಲಿದ್ದ ಬೈಕ್ಗಳ ಮೇಲೆ ಕಾರು ಹತ್ತಿಸಿದ ಯುವತಿ, ಅಯ್ಯೋ ಅಕ್ಕಾ ನಿಧಾನ ಎಂದ ನೆಟ್ಟಿಗರು
ಹೆಣ್ಣುಮಕ್ಕಳು ಕಾರು, ಬೈಕ್ ಚಲಾಯಿಸುತ್ತಿದ್ದಾರೆ ಎಂದರೆ ಹುಡುಗರು ಕನಿಷ್ಠ 2 ಅಡಿಯಷ್ಟು ದೂರದಲ್ಲಿ ತಮ್ಮ ವಾಹನ ಓಡಿಸುತ್ತಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಡ್ರೈವಿಂಗ್ ಬರುವುದಿಲ್ಲ ಎಂದಲ್ಲ ಆದರೆ ಇಂತಹ ಕೆಲವು ಘಟನೆಗಳು ಅವರ ಮನಸ್ಸಿನಲ್ಲಿ ಉಳಿದುಬಿಟ್ಇಟಿರುತ್ತ್ತೀತವೆ.
ಹೆಣ್ಣುಮಕ್ಕಳು ಕಾರು, ಬೈಕ್ ಚಲಾಯಿಸುತ್ತಿದ್ದಾರೆ ಎಂದರೆ ಹುಡುಗರು ಕನಿಷ್ಠ 2 ಅಡಿಯಷ್ಟು ದೂರದಲ್ಲಿ ತಮ್ಮ ವಾಹನ ಓಡಿಸುತ್ತಾರೆ. ಎಲ್ಲಾ ಹೆಣ್ಣುಮಕ್ಕಳಿಗೆ ಡ್ರೈವಿಂಗ್ ಬರುವುದಿಲ್ಲ ಎಂದಲ್ಲ ಆದರೆ ಇಂತಹ ಕೆಲವು ಘಟನೆಗಳು ಅವರ ಮನಸ್ಸಿನಲ್ಲಿ ಉಳಿದುಬಿಟ್ಟಿರುತ್ತವೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಯುವತಿ ಇಂತಹದೊಂದು ಸಾಹಸ ಮಾಡಿದ್ದು, ಇದನ್ನು ನೋಡಿ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಅದೇ ಸಮಯದಲ್ಲಿ, ಅನೇಕ ಜನರು ಯುವತಿ ಮೇಲೆ ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ.
ಯುಪಿಯ ಕಾನ್ಪುರದಲ್ಲಿ ನಡೆದ ಘಟನೆ ಇದಾಗಿದ್ದು, ಯುವತಿಯೊಬ್ಬಳು ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ಗಳ ಮೇಲೆ ಕಾರುಹತ್ತಿಸಿದ್ದಾಳೆ. ಈ ವೀಡಿಯೊವನ್ನು @ItsRDil ಹೆಸರಿನ ಖಾತೆಯೊಂದಿಗೆ Twitter ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಅದೇ ಸಮಯದಲ್ಲಿ, ವೀಡಿಯೊ ವೈರಲ್ ಆದ ನಂತರ, ಜನರು ಅದರ ಬಗ್ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಮತ್ತಷ್ಟು ಓದಿ: 10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕ್ಅಪ್ ಮಾಡಿಕೊಂಡ ಮಹಿಳೆ; ವಿಡಿಯೋ ವೈರಲ್
ಈ ಘಟನೆ ಸಂಭವಿಸಿದಾಗ ಕಾರಿನ ವೇಗ ಹೆಚ್ಚಿತ್ತು, ಏನಾಗುತ್ತಿದೆ ಎಂದು ಯಾರಿಗೂ ಅರಿವಾಗಿಲ್ಲ ಎಂದು ಒಬ್ಬರು ಹೇಳಿದ್ದಾರೆ, ಯುವತಿ ಇತ್ತೀಚೆಗಷ್ಟೇ ಕಾರು ಕಲಿತಿದ್ದಳು ಎನ್ನಲಾಗುತ್ತಿದೆ. ತಡರಾತ್ರಿ ಯಾವುದೋ ಕೆಲಸದ ನಿಮಿತ್ತ ಯುವತಿ ಮಾರುಕಟ್ಟೆಗೆ ಹೋಗಿದ್ದಳು, ಕಾರನ್ನು ಹಿಂಬಾಲಿಸುತ್ತಿದ್ದಳು, ಆ ಕಾರನ್ನು ಓವರ್ ಟೇಕ್ ಮಾಡಲು ಹೋಗಿ ವೇಗವದಲ್ಲಿ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಬೈಕ್ಗಳ ಮೇಲೆ ಹತ್ತಿಸಿದ್ದಾಳೆ ಎನ್ನಲಾಗಿದೆ.
Sirf google map route follow nahi karna hota aage pichhe gaadiyaan bhi dekhni hoti hai #Kanpur pic.twitter.com/Lx4L2OUhdM
— Dilip Rangwani (@ItsRDil) May 10, 2023
ನಿಮಗೆ ಚಾಲನೆ ಗೊತ್ತಿಲ್ಲದಿದ್ದಾಗ ವಾಹನವನ್ನು ಓಡಿಸಲೇಬಾರದು ಇಲ್ಲದಿದ್ದರೆ ಪಕ್ಕದಲ್ಲಿ ಡ್ರೈವಿಂಗ್ ಚೆನ್ನಾಗಿ ಬರುವ ವ್ಯಕ್ತಿಯನ್ನು ಕೂರಿಸಿಕೊಳ್ಳಬೇಕು.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ