Viral Video: ಬಿಸಿಲಿನ ತಾಪಕ್ಕೆ ದೇಹವನ್ನು ತಂಪಾಗಿರಿಸಲು ನೀರಿಗಿಳಿದ ಗಜಪಡೆ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಈ ಬೇಸಿಗೆಗೆ ಆನೆಗಳ ಗುಂಪೊಂದು ನೀರಿನಲ್ಲಿ ಸ್ನಾನ ಮಾಡುವುದನ್ನು ಕಾಣಬಹುದು. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral Video: ಬಿಸಿಲಿನ ತಾಪಕ್ಕೆ ದೇಹವನ್ನು ತಂಪಾಗಿರಿಸಲು ನೀರಿಗಿಳಿದ ಗಜಪಡೆ
ವೈರಲ್​​ ವೀಡಿಯೊ
Follow us
ಅಕ್ಷಯ್​ ಪಲ್ಲಮಜಲು​​
|

Updated on:May 11, 2023 | 7:27 PM

ಇದು ಬೇಸಿಗೆಯ ಸಮಯ, ಈ ಬಿಸಿಲ ಬೇಗೆಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಸಾಮ್ರಾಜ್ಯವು ಕೂಡಾ ತತ್ತರಿಸಿ ಹೋಗಿದೆ. ಸ್ವಲ್ಪ ನೀರು ಸಿಕ್ಕರೆ ಸಾಕು ಆ ಪ್ರಾಣಿಗಳು ದೇಹವನ್ನು ತಂಪಾಗಿಸಲು ನೀರಿಗೆ ಮೈ ಒಡ್ಡುತ್ತವೆ. ಅದರಲ್ಲೂ ಆನೆಗಳಿಗೆ ನೀರಿನಲ್ಲಿ ಆಟವಾಡುವುದೆಂದರೆ ಇಷ್ಟ. ಎಲ್ಲೇ ನೀರು ಕಂಡರೂ ನೀರಿಗೆ ಇಳಿದು ಆಟವಾಡುತ್ತವೆ. ಇದೇ ರೀತಿ ತಮಿಳುನಾಡಿನ ಜಲಧಾರೆಯಲ್ಲಿ ಈ ಸುಡು ಬಿಸಿಲಿಗೆ ಆನೆಗಳ ಹಿಂಡೊಂದು ಸ್ನಾನ ಮಾಡುತ್ತಾ ನೀರಿನಲ್ಲಿ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈ ವೀಡಿಯೋಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ‘ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಆನೆಗಳು ಸ್ನಾನ ಮಾಡುತ್ತ ಆ ಕ್ಷಣವನ್ನು ಆನಂದಿಸುತ್ತದೆ.

ಇತ್ತೀಚಿಗೆ ಸುರಿದ ಮಳೆಗೆ ಧನ್ಯವಾದ’ ಎಂಬ ಶೀರ್ಷಿಕೆಯಡಿಯಲ್ಲಿ ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆನೆಗಳ ಗುಂಪೊಂದು ತೊರೆಯೊಂದರಲ್ಲಿ ಮುಳುಗಿ ಸ್ನಾನ ಮಾಡಿ, ಅತ್ತಿಂದಿತ್ತ ಓಡಾಡುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಅದರಲ್ಲೂ ಮರಿ ಆನೆಗಳು ನೀರಿನಲ್ಲಿ ಆಟವಾಡುವುದನ್ನು ಹೆಚ್ಚು ಸಂಭ್ರಮಿಸುತ್ತಿದ್ದವು.

ಇದನ್ನೂ ಓದಿ: Viral Video : ಎರಡನೇ ಕ್ಲಾಸಿನ ಮಕ್ಕಳ ‘ಭೇಲ್​ಪುರಿ’ಗೆ 10 ಮಿಲಿಯನ್​ ನೆಟ್ಟಿಗರು ಫಿದಾ

ಟ್ವಿಟರ್​​​ನಲ್ಲಿ ವೈರಲ್ ಆಗಿರುವ ಈ ವೀಡಿಯೋ 53.4 ಸಾವಿರ ವೀಕ್ಷಣೆಗಳನ್ನು ಹಾಗೂ 1.3 ಸಾವಿರ ಲೈಕ್ಸ್​​ಗಳನ್ನು ಪಡೆದುಕೊಂಡಿದೆ. ಮತ್ತು ಜಲರಾಶಿಯಲ್ಲಿ ಆನೆಗಳ ಹಿಂಡು ಆಟವಾಡುವುದನ್ನು ನೋಡಿ ಹಲವರು ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು ‘ಈ ಆನೆಗಳ ಗುಂಪನ್ನು ಮತ್ತೆ ಮತ್ತೆ ನೋಡುತ್ತಿರಬೇಕು ಎಂದು ಅನಿಸುತ್ತಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಿಜಕ್ಕೂ ಇದೊಂದು ದೊಡ್ಡ ಕುಟುಂಬ ಹಾಗೂ ಸುಂದರ ದೃಶ್ಯ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಆನೆಗಳು ಮತ್ತು ಪ್ರಕೃತಿಯ ಸಾಮರಸ್ಯ ನೊಡಲು ಸುಂದರವಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಅನೇಕರು ಈ ಮುದ್ದಾದ ವೀಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 6:19 pm, Thu, 11 May 23