10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕ್ಅಪ್ ಮಾಡಿಕೊಂಡ ಮಹಿಳೆ; ವಿಡಿಯೋ ವೈರಲ್
ಮಹಿಳೆಯರು ಈಗ ಅಬಲೆಯರಲ್ಲ ಸಬಲೆಯರು ಎಂದು ತೋರಿಸಲು ಯುವತಿಯೊಬ್ಬಳು 10ಸಾವಿರ ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವಾಗ ಮೇಕ್ಅಪ್ ಮಾಡಿಕೊಂಡಿದ್ದಾಳೆ. ಈಕೆ ಆಕಾಶದಲ್ಲಿ ಗಾಳಿಯಲ್ಲಿ ತೇಲಾಡುತ್ತಾ ಮೇಕ್ಅಪ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಮಹಿಳೆಯರಿಗೆ ಹಾಗೂ ಮೇಕ್ಅಪ್ಗೆ ಹಿಂದಿನಿಂದಲೂ ಅವಿನಾಭಾವ ಸಂಬಂಧ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಪ್ರತಿಯೊಂದು ಹೆಣ್ಣು ಮೇಕ್ಅಪ್ ಇಷ್ಟ ಪಡುತ್ತಾಳೆ. ಆದ್ರೆ ಸಾಮಾನ್ಯವಾಗಿ ಕನ್ನಡಿಯ ಮುಂದೆ ಕುಳಿತು ಮೇಕ್ಅಪ್ ಮಾಡಿಕೊಳ್ಳುವುದನ್ನು ನೀವು ನೋಡಿರುತ್ತೀರಿ ಅಥವಾ ನೀವೇ ಮೇಕ್ ಅಪ್ ಮಾಡಿಕೊಂಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆಯರು ಈಗ ಅಬಲೆಯರಲ್ಲ ಸಬಲೆಯರು ಎಂದು ತೋರಿಸಿಕೊಳ್ಳುವುದಕ್ಕೆ 10,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡುವಾಗ ಮೇಕ್ಅಪ್ ಮಾಡಿಕೊಂಡಿದ್ದಾಳೆ. ಈಕೆ ಆಕಾಶದಲ್ಲಿ ಗಾಳಿಯಲ್ಲಿ ತೇಲಾಡುತ್ತಾ ಮೇಕ್ಅಪ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದೀಗಾ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಫ್ಲೋರಿಡಾದ ಮೆಕೆನ್ನಾ ನೈಪ್ 10,000 ಅಡಿ ಎತ್ತರದಿಂದ ಜಿಗಿಯುವಾಗ ಮೇಕ್ಅಪ್ ಮಾಡಿಕೊಂಡ ಮಹಿಳೆ. ಸ್ವತಃ ಈಕೆಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೀವನ್ನು ಹಂಚಿಕೊಳ್ಳಲಾಗಿದೆ. ಮೇಕ್ಅಪ್ ಮಾಡಿಕೊಳ್ಳುವ ವಿಡಿಯೋ ಇಲ್ಲಿದೆ ನೋಡಿ.
View this post on Instagram
ಇದನ್ನೂ ಓದಿ: ಶಿನ್-ಚಾನ್ ಕಾರ್ಟೂನ್ ಧ್ವನಿಯಲ್ಲಿ ‘ಓ ಬೇಡರ್ದೆಯಾ’ ಹಿಂದಿ ಹಾಡನ್ನು ಹಾಡಿದ ಯುವತಿ
ಈ ವಿಡಿಯೋವನ್ನು ಡಿಸೆಂಬರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಆಕೆಯ ಸಾಹಸಕ್ಕೆ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ಹಿಡಿದವರು ಯಾರಪ್ಪ ಎಂದು ಸಾಕಷ್ಟು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:26 pm, Thu, 11 May 23