ಮೇಕ್​ಅಪ್​ ಹಾಕಿಯೇ ಮಲಗ್ತೀರಾ, ನಿಮ್ಮ ಚರ್ಮಕ್ಕೆ ಯಾವ ರೀತಿ ಹಾನಿ ಮಾಡುತ್ತೆ ಗೊತ್ತೇ?

TV9 Digital Desk

| Edited By: ನಯನಾ ರಾಜೀವ್

Updated on: Aug 01, 2022 | 8:30 AM

ನೀವು ಸುಂದರವಾಗಿ ಕಾಣಿಸಲು ಮೇಕ್​ಅಪ್ ​ಮಾಡುವುದು ಸಾಮಾನ್ಯ ಆದರೆ, ಮೇಕ್​ಅಪ್ ಅನ್ನು ತೆಗೆಯದೇ ಹಾಗೆ ಮಲಗಿದರೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ.

ಮೇಕ್​ಅಪ್​ ಹಾಕಿಯೇ ಮಲಗ್ತೀರಾ, ನಿಮ್ಮ ಚರ್ಮಕ್ಕೆ ಯಾವ ರೀತಿ ಹಾನಿ ಮಾಡುತ್ತೆ ಗೊತ್ತೇ?
Makeup
Image Credit source: Timesnow

ನೀವು ಸುಂದರವಾಗಿ ಕಾಣಿಸಲು ಮೇಕ್​ಅಪ್ ​ಮಾಡುವುದು ಸಾಮಾನ್ಯ ಆದರೆ, ಮೇಕ್​ಅಪ್ ಅನ್ನು ತೆಗೆಯದೇ ಹಾಗೆ ಮಲಗಿದರೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ನೀವು ಯಾವತ್ತೋ ಸುಸ್ತಾಗಿ ಮನೆಗೆ ಬಂದಿರುತ್ತೀರಿ, ಮೇಕ್​ಅಪ್ ಯಾರು ತೆಗೀತಾರೆ ಮಲಗಿಬಿಡೋಣ ಎಂದು ಮಲಗಿಬಿಡಬೇಡಿ, ಇದರಿಂದ ಹಲವು ರೀತಿಯ ಸಮಸ್ಯೆಗಳು ನಿಮ್ಮ ಚರ್ಮವನ್ನು ಕಾಡಬಹುದು.

ನೀವು ಮಲಗುವ ಮೊದಲು ನಿಮ್ಮ ಮೇಕ್ಅಪ್ ಅನ್ನು ತೆಗೆದುಹಾಕದಿದ್ದರೆ, ಅದು ನಿಮ್ಮ ಚರ್ಮದ ರಂಧ್ರಗಳ ಮೇಲೆ ಕುಳಿತುಕೊಳ್ಳುತ್ತದೆ ಮತ್ತು ಅದು ರಂಧ್ರಗಳನ್ನು ಮುಚ್ಚುತ್ತದೆ. ರಂಧ್ರಗಳು ಮುಚ್ಚಿಹೋದಾಗ, ಇದು ಮೊಡವೆಗಳನ್ನು ಉಂಟುಮಾಡುತ್ತದೆ ಮತ್ತು ಚರ್ಮವನ್ನು ಹಾನಿಗೊಳಿಸುತ್ತದೆ. ಅಲ್ಲದೆ, ದೀರ್ಘಕಾಲದವರೆಗೆ ಮೇಕ್ಅಪ್ ಮಾಡುವುದು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೇಕ್​ಅಪ್ ತೆಗೆಯದೇ ಮಲಗುವುದರಿಂದ ಏನೇನು ಸಮಸ್ಯೆಗಳು ಕಾಡಬಹುದು.

ಮೊಡವೆ: ಮೇಕ್​ಅಪ್ ನಿಮ್ಮ ಮುಖದಲ್ಲಿರುವ ಮುಚ್ಚಿಹಾಕುತ್ತದೆ ಮತ್ತು ಮುಖದ ರಂಧ್ರಗಳು ಮುಚ್ಚಿಹೋದಾಗ, ಅದು ಮೊಡವೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ನೀವು ಮಲಗುವ ಮೊದಲು ನಿಮ್ಮ ಮೇಕ್ಅಪ್ ತೆಗೆದುಹಾಕಿ ಮತ್ತು ನಿಮ್ಮ ಚರ್ಮವನ್ನು ತೇವವಾಗಿಡಿ.

ತುರಿಕೆ: ನೀವು ದೀರ್ಘಕಾಲದವರೆಗೆ ಮೇಕ್ಅಪ್ ಹಚ್ಚಿಕೊಂಡಿದ್ದಾಗ ನಿಮ್ಮ ಚರ್ಮವು ಒಣಗುತ್ತದೆ. ಇದು ತುರಿಕೆಗೆ ಕಾರಣವಾಗಬಹುದು. ಇದಲ್ಲದೆ, ನಿಮ್ಮ ಮೇಕ್ಅಪ್ ಅನ್ನು ನೀವು ತೆಗೆದುಹಾಕದಿದ್ದರೆ, ರಾಷಸ್​ಗಳು ಉಂಟಾಗಲಿವೆ.

ಕಣ್ಣುಗಳಲ್ಲಿ ಕಿರಿಕಿರಿ: ಮೇಕ್​ಅಪ್ ಹಾಕಿಕೊಂಡೇ ಮಲಗಿದಾಗ ಕಣ್ಣುಗಳ ಸೂಕ್ಷ್ಮ ಪ್ರದೇಶದಲ್ಲಿ ಕಿರಿಕಿರಿಯುಂಟಾಗುತ್ತದೆ.

ಒಣತುಟಿ: ಮಲಗುವ ಮುನ್ನ ಮೇಕ್​ಅಪ್ ತೆಗೆದುಹಾಕದಿದ್ದರೆ ನಿಮ್ಮ ತುಟಿಗಳ ಒಣಗುವಿಕೆಗೆ ಕಾರಣವಾಗುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada