ಚಿಕ್ಕಮಗಳೂರು: ಕಾರು ಟಿಟಿ ವಾಹನ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
ಕಾರು, ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು ತಾಲೂಕಿನ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಮತಿಘಟ್ಟ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ ಗಿರಿಧರ್ (46) ಮಯಂಕ್(3) ಮೃತ ರ್ದುದೈವಿಗಳು.

ಚಿಕ್ಕಮಗಳೂರು: ಕಾರು, ಟಿಟಿ ವಾಹನ ಮುಖಾಮುಖಿ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡೂರು(Kadur) ತಾಲೂಕಿನ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಮತಿಘಟ್ಟ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ ಗಿರಿಧರ್ (46) ಮಯಂಕ್(3) ಮೃತ ರ್ದುದೈವಿಗಳು. ಇನ್ನು ಹೊನ್ನಾವರದಿಂದ ಸಂಬಂಧಿಕರ ಮದುವೆ ನಿಮಿತ್ತ ಗಿರಿಧರ್ ಕುಟುಂಬ ತೆರಳುವಾಗ, ಆ ಕಡೆ ಕೇರಳದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬರುತ್ತಿದ್ದ ಟಿ.ಟಿ ವಾಹನಕ್ಕೆ ಡಿಕ್ಕಿಯಾಗಿದ್ದು, ಅದರ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿ.ಟಿ ವಾಹನದಲ್ಲಿದ್ದ ಕೇರಳ ಮೂಲದ 7 ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನ ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ ಕಾರು ಅಪಘಾತ
ಬೀದರ್: ನಿನ್ನೆ(ಮೇ.10) ರಾಜ್ಯಾದ್ಯಂತ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಭರ್ಜರಿಯಾಗಿ ಮತದಾನ ಕೂಡ ನಡೆಯುತ್ತಿತ್ತು. ಈ ಮಧ್ಯೆ ಬೆಳಗಿನ ಜಾವ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಖೇಣಿ ಅವರ ಸಹೋದರ ಸಂಜಯ್ ಖೇಣಿ ಕಾರ್ ಅಪಘಾತಕ್ಕೊಳಗಾಗಿತ್ತು. ಜಿಲ್ಲೆಯ ಹಳ್ಳಿಖೇಡ್ ಬಳಿ ಕಾರ್ ಪಲ್ಟಿಯಾಗಿದ್ದು, ಕೂಡಲೇ ಗಾಯಾಳು ಸಂಜಯ್ ಖೇಣಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಇನ್ನು ಅಶೋಕ್ ಮಹಾರುದ್ರಪ್ಪ ಖೇಣಿ ಕರ್ನಾಟಕದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದು, ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಜೊತೆಗೆ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ ಖೇಣಿ ಅವರು ಕ್ರಿಕೆಟ್ ತಂಡ ಕರ್ನಾಟಕ ಬುಲ್ಡೋಜರ್ಸ್ನ್ನು ಮುನ್ನಡೆಸಿದ್ದಾರೆ.
ಕರ್ನಾಟಕದ ಈ ಹೆದ್ದಾರಿ ಈಗ ಸಾವಿನ ಹೆದ್ದಾರಿ; ಒಂದೇ ವರ್ಷದಲ್ಲಿ 30ಕ್ಕೂ ಹೆಚ್ಚು ಅಪಘಾತ, 23 ಸಾವು
ಗದಗ: ನಮ್ಮ ಜಮೀನುಗಳಿಗೆ ಹೋಗಬೇಕಾದ್ರೆ ನಿತ್ಯವೂ ಜೀವ ಭಯ. ಎಲ್ಲಿ ಏನಾಗುತ್ತೋ ಅನ್ನೋ ಆತಂಕ ಕಾಡುತ್ತಿದೆ ಎಂದು ರೈತರ ಗೋಳಾಟ. ಜಮೀನಿಗೆ ಹೋದವರು ಸುರಕ್ಷಿತವಾಗಿ ಮನೆಗೆ ವಾಪಸ್ ಆಗುತ್ತೇವೋ ಇಲ್ಲವೋ ಅನ್ನೋ ಭಯ ಕುಟುಂಬವನ್ನು ಕಾಡುತ್ತಿದ ಎಂದು ರೈತರ ಅಳಲು. ಹೌದು ಈ ಸಾವಿನ ಹೆದ್ದಾರಿ ಇರುವುದು ಗದಗ ಜಿಲ್ಲೆಯಲ್ಲಿ. ಈ ಹೆದ್ದಾರಿ ಅರಬಾವಿ ಹಾಗೂ ಚಳ್ಳಕೆರೆ ರಾಜ್ಯ ಹೆದ್ದಾರಿ ಮಾರ್ಗವಾಗಿ ನಿತ್ಯ ಸಾವಿರಾರು ವಾಹನಗಳ ಸಂಚಾರ ಮಾಡುತ್ತಿವೆ. ಅದರಲ್ಲೂ ಬೃಹತ್ ಲಾರಿಗಳು, ಕಾರು ಸೇರಿದಂತೆ ಅನೇಕ ವಾಹನಗಳು ಓಡಾಡುತ್ತಿವೆ. ಹೀಗಾಗಿ ಈ ಮಾರ್ಗವಾಗಿ ರೈತರು ಜಮೀನಿಗೆ ಹೋಗಿ ಬರಲು ಹಾಗೂ ಕೃಷಿ ಉತ್ಪನ್ನಗಳನ್ನು ತೆಗೆದುಕೊಂಡು ಬರಲು ಭಯ ಪಡುತ್ತಿದ್ದಾರೆ.
ಹೌದು ಗದಗ ಬೆಟಗೇರಿ ಬಾಗದಲ್ಲಿ ರೈತರ ಜಮೀನು ಹೆಚ್ಚಾಗಿವೆ. ಹೀಗಾಗಿ ನಿತ್ಯ ರೈತರು, ಕೂಲಿ ಕಾರ್ಮಿಕರು ಓಡಾಡುತ್ತಾರೆ. ಎತ್ತಿನ ಬಂಡಿ, ಹಾಗೂ ಟ್ರ್ತಾಕ್ಟರ್ ಮೂಲಕ ಉತ್ಪನ್ನ ತರುವಾಗ ಅಪಘಾತಗಳು ಹೆಚ್ಚಾಗಿ ಆಗುತ್ತಿವೆ. ಕಳೆದ ಒಂದು ವರ್ಷದಲ್ಲಿ ಇದೇ ಮಾರ್ಗದಲ್ಲಿ 30 ಕ್ಕೂ ಹೆಚ್ಚು ಅಪಘಾತವಾಗಿದ್ದು, 23 ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ರೈತರು ಆರೋಪಿಸಿದ್ದಾರೆ. ಅದರಲ್ಲೂ ಹೆಚ್ಚಾಗಿ ರೈತರೇ ಸಾವಿನ ಮನೆ ಸೇರಿದ್ದಾರೆ ಎನ್ನುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಅಪಘಾತವಾಗಿವೆ. ಹೀಗಾಗಿ ಈ ಹೆದ್ದಾರಿ ಚತುಷ್ಪಥ ಹೆದ್ದಾರಿ ಮಾಡಿ, ಇಲ್ಲವಾದರೆ ಸರ್ವಿಸ್ ರೋಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಿಗೆ ಮನವಿ ಮಾಡಿದ್ರು, ಸರ್ಕಾರ ಸರ್ವೀಸ್ ರೋಡ್ ಮಾಡುತ್ತಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




