ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!
Handicapped : ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ; ಇದು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ.
Viral Video : ನಾದ ಮತ್ತು ಲಯ ಪ್ರಕೃತಿಯಲ್ಲಿನ ಮೂಲ ಧಾತುಗಳು. ಆದಿಯಲ್ಲಿ ಮನುಷ್ಯ ಇವನ್ನು ಸ್ವಾಭಾವಿಕವಾಗಿ ಬಹುಬೇಗ ಗ್ರಹಿಸಿದ. ಜಗತ್ತಿನ ಯಾವುದೇ ಬುಡಕಟ್ಟಿನ ಜನರನ್ನು ನಾವು ಗಮನಿಸಿದರೂ ಅವರಲ್ಲಿ ಅವರದೇ ವಿಶಿಷ್ಟ ಹಾಡುಗಬ್ಬಗಳು, ಕುಣಿತದ ಬಗೆಗಳು ಇರುವುದು ಮತ್ತವರು ಅವನ್ನು ಸಹಜವಾಗಿ ದಿನನಿತ್ಯದಲ್ಲಿ ಅಳವಡಿಸಿಕೊಳ್ಳುವುದು ನಮಗೆ ಮನದಟ್ಟಾಗುತ್ತದೆ.
ಇದನ್ನೂ ಓದಿView this post on Instagram
“In the dark times Will there also be singing? Yes, there will also be singing. About the dark times.”
ಇದು ಬರ್ಟೋಲ್ಟ್ ಬ್ರೆಖ್ಟ್ ಎಂಬ ಜರ್ಮನ್ ನಾಟಕಕಾರ, ಕವಿಯ ಒಂದು ಕವನದ ಸಾಲುಗಳು. ಕಡುಗಾಲದಲ್ಲೂ ನಾವು ಹಾಡುತ್ತೇವೆಯೇ? ಹೌದು, ಆಗಲೂ ನಾವು ಹಾಡುತ್ತೇವೆ, ಕಡುಗಾಲದ ಬಗ್ಗೆಯೇ, ಎಂಬರ್ಥದ ಈ ಸಾಲುಗಳು ಸೋಲೊಪ್ಪಿಕೊಳ್ಳದ ನಂಬಿಕೆ ಇಟ್ಟುಕೊಳ್ಳುವ ಮನುಷ್ಯ ಚೈತನ್ಯಕ್ಕೆ ದ್ಯೋತಕ. ಎಂಥದೇ ಪರಿಸ್ಥಿತಿಯಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ. ನಮ್ಮಲ್ಲಿ ಹೊಸ ಉತ್ಸಾಹ ಮೂಡಿಸುತ್ತದೆ.
ಇದನ್ನು ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!
ಆ ಚೈತನ್ಯದ ಒಂದು ಮಾದರಿ ಮೇಲಿನ ಇನ್ಸ್ಟಾಗ್ರಾಮ್ ಕ್ಲಿಪ್ನಲ್ಲಿ ನಮಗೆ ಕಾಣಸಿಗುತ್ತದೆ. ತಮ್ಮ ಮೈಗಳ್ಳತನವನ್ನೋ ಕೆಲಸಗೇಡಿತನವನ್ನೋ ಸರಿಪಡಿಸಿಕೊಳ್ಳದೇ ಹೊರಗಿನ ವಾತಾವರಣ ಅಥವಾ ತಮ್ಮ ಪರಿಸ್ಥಿಯ ಬಗ್ಗೆ ನೆವ ಹೇಳುವವರಿಗೆ ನಮ್ಮಲ್ಲಿ, ಕುಣಿಯಲು ಬಾರದವರಿಗೆ ನೆಲ ಡೊಂಕು, ಎಂಬ ಗಾದೆ ಮಾತಿದೆ.
ಇದನ್ನೂ ಓದಿ : ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
ಮೇಲಿನ ವಿಡಿಯೋದಲ್ಲಿ ಆ ಯುವತಿ ತನ್ನ ಊರುಗೋಲುಗಳ ಸಹಾಯದಿಂದ ಸೊಗಸಾಗಿ ನರ್ತಿಸಿರುವುದಲ್ಲದೇ ಆ ಊರುಗೋಲುಗಳನ್ನು ತನ್ನ ನರ್ತನದ ಪರಿಕರ (props)ವನ್ನಾಗಿಸಿಕೊಂಡಿದ್ದಾಳೆ. ಅವಳ ಕುಣಿತದ ಭಂಗಿ, ಛಲ, ನಗುಮುಖ ನಮ್ಮೆಲ್ಲರ ಎದೆಯನ್ನು ತಟ್ಟಲೇಬೇಕು. ಇದನ್ನು ಲಕ್ಷಗಟ್ಟಲೇ ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ. ಇದನ್ನು ನೋಡಿ ನಿಮಗೇನೆನ್ನಿಸಿತು? ಪ್ರತಿಕ್ರಿಯಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:30 pm, Fri, 12 May 23