ನಾಯಿ ಗುಂಡಿ ತೋಡುವುದ ಕಂಡೆ; ಕಾಣಿರೇ ದಾಸರೇ ಈ ‘ಕಲಿ’ಯುಗವ

Dog : ಬೆಕ್ಕು ಭಕ್ಕರಿ ಮಾಡೂದ ಕಂಡೆ, ಇಲಿಯ ಒಲಿಯ ಊದುದ ಕಂಡೆ, ಕಪ್ಪೆ ಪಾತರ ಕುಣಿವುದ ಕಂಡೆ, ಏಡಿ ಮದ್ದಳೆ ಬಡೆವುದ ಕಂಡೆ... ಎಂದ ಪುರಂದರರು ಒಮ್ಮೆ ಇಲ್ಲಿ ಬಂದು ನೋಡಬಾರದೆ?

ನಾಯಿ ಗುಂಡಿ ತೋಡುವುದ ಕಂಡೆ; ಕಾಣಿರೇ ದಾಸರೇ ಈ 'ಕಲಿ'ಯುಗವ
ಗಿಡ ನೆಡಲು ಗುಂಡಿ ತೋಡುತ್ತಿರುವ ನಾಯಿ
Follow us
ಶ್ರೀದೇವಿ ಕಳಸದ
|

Updated on: May 12, 2023 | 4:20 PM

Viral Video : ಪೇಟೆಗೆ ಹೋಗಿ ತರಕಾರಿ ತರುವ, ದಿನಸಿ ಸಾಮಾನುಗಳನ್ನು ತರುವ ನಾಯಿಗಳ ವಿಡಿಯೋ ನೋಡಿದ್ದೀರಿ. ಹಾಗೆಯೇ ಎಳೆಕೂಸುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ನಾಯಿಬೆಕ್ಕುಗಳ ವಿಡಿಯೋಗಳನ್ನೂ ನೋಡಿದ್ದೀರಿ. ಅಷ್ಟೇ ಯಾಕೆ ಪೋಷಕರ ಅನೇಕ ಕೆಲಸಗಳಲ್ಲಿ ಭಾಗಿಯಾಗುವ ನಿಷ್ಠಾವಂತ ನಾಯಿಗಳ ವಿಡಿಯೋ ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ನಾಯಿಯ ಪೋಷಕರು ಸಸಿ ನೆಡಲು ತೊಡಗಿದಾಗ ಏನ ಸಹಾಯ ಮಾಡಿದೆ ಎಂದು!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಪುಟ್ಟಮಕ್ಕಳಂತೆ ಎಲ್ಲಿ ಹೋದರೂ ಹಿಂಬಾಲಿಸುವ ಈ ನಾಯಿಬೆಕ್ಕುಗಳನ್ನು ಸುಮ್ಮನೆ ಕೂರಿಸುವುದು ಮಹಾನ್​ ಕೆಲಸವೇ! ಆದರೆ ಸ್ವಲ್ಪ ತಾಳ್ಮೆಯಿಂದ ಅವುಗಳ ಉತ್ಸಾಹ, ಕುತೂಹಲ, ಅಚ್ಚರಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳಿಗೆ ಸೂಕ್ತ ತರಬೇತಿ ಕೊಟ್ಟರೆ ಶಿಸ್ತಿನಿಂದ ನಿಮ್ಮ ಸಹಾಯಕರಂತೆ, ಆಪ್ತರಂತೆ ಇರಬಲ್ಲವು.

ಇದನ್ನೂ ಓದಿ : ಕುಣಿಯಲು ಬರುವವರಿಗೆ ಎಲ್ಲೂ ಅಂಕುಡೊಂಕಿಲ್ಲ!

ಈ ವಿಡಿಯೋ ಅನ್ನು ಈಗಾಗಲೇ 46,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ ನಿಜ. ಆದರೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವಿವಿಧ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಕೋತಿಗೆ ತರಕಾರಿ ಕಟ್ ಮಾಡಲು ಕಲಿಸಿ ಆಯಿತು. ಆನೆಗೆ ಪೇಂಟ್ ಮಾಡಲು ಕಲಿಸಿ ಆಯಿತು. ಈಗ ನಾಯಿಗೆ ಗಿಡ ನೆಡಲು ಕಲಿಸಿದ್ದಾಯಿತು. ಇನ್ನೂ ಏನೇನೆಲ್ಲ ಕಲಿಸಿ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೋ ಈ ಮನುಷ್ಯರು ಎಂದು ಒಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!

ಓಹ್​ ನನ್ನ ನಾಯಿಗೆ ಅಂತೂ ಒಂದು ಕೆಲಸ ಸಿಕ್ಕಿತು! ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. ಈ ನಾಯಿ ಹೀಗೆ ಮಾತು ಕೇಳಲು ಈ ಪೋಷಕ ಅದಕ್ಕೆ ಏನೆಲ್ಲ ಆಮಿಷ ತೋರಿಸಿರಬಹುದು? ಎಂದು ಮತ್ತೊಬ್ಬರು ಕೇಳಿದ್ದಾರೆ. ಓಹ್ ನಾಯಿಯೇ ನಿನಗೆ ಒಳ್ಳೆಯದಾಗಲಿ ಎಂದು ಸಾಕಷ್ಟು ಜನ ಹರಸಿದ್ದಾರೆ. ಇದು ಸಲ್ಲದು ಎಂದು ಅನೇಕರು ತಕರಾರು ತೆಗೆದಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್