ಕುಡಿದ ಮತ್ತಿನಲ್ಲಿ ಸಲಗದ ತಂಟೆಗೆ ಹೋಗಿಯೂ ಪಾರಾದವನ ಕತೆ

Elephant : 'ಇಂಥಾ ಮೂರ್ಖರನ್ನು ಸಹಿಸಿಕೊಳ್ಳುತ್ತವಲ್ಲ, ಅದಕ್ಕೆ ಆನೆ ಶಾಂತ ದೈತ್ಯ, ಆರಾಧನೀಯ’ ಎಂದು ಕೆಲವರು. 'ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಇವನನ್ನು ಬಂಧಿಸಬೇಕು’ ಎಂದೂ ಕೆಲವರು ಹೂಂಕರಿಸಿದ್ಧಾರೆ. ನೀವೇನು ಹೇಳುತ್ತೀರಿ?

ಕುಡಿದ ಮತ್ತಿನಲ್ಲಿ ಸಲಗದ ತಂಟೆಗೆ ಹೋಗಿಯೂ ಪಾರಾದವನ ಕತೆ
ಕಾಡಿನಿಂದ ಹೈವೇಗೆ ಬಂದ ಆನೆಗೆ ನಮಸ್ಕರಿಸಿ ವಾಪಾಸು ಕಳಿಸಿದ ತಮಿಳುನಾಡಿಗ.
Follow us
ಶ್ರೀದೇವಿ ಕಳಸದ
|

Updated on:May 12, 2023 | 4:39 PM

Viral Video : ಆನೆ ಪ್ರಾಣಿಲೋಕದ ವಿಸ್ಮಯ. ಅದು ಜಗತ್ತಿನ ಅತ್ಯಂತ ಬುದ್ಧಿಶಾಲಿ ಪ್ರಾಣಿಗಳಲ್ಲೊಂದು. ಆನೆಗಳ ನೆನಪಿನ ಶಕ್ತಿಯೂ ಅದ್ಭುತ. ಅವು ಎಲೆಕ್ತ್ರಿಕ್ ಬೇಲಿಯನ್ನು ದಿಮ್ಮಿಗಳಿಂದ ಭೇದಿಸುವ, ಅಗಲವಾದ ಕಂದಕಗಳ ಮೇಲೆ ದಿಮ್ಮಿಗಳನ್ನಿರಿಸಿ ಅವುಗಳನ್ನು ದಾಟುವ ಕತೆಗಳನ್ನು ನೀವು ಕೇಳಿರಬಹುದು, ನೋಡಿರಬಹುದು. ಆನೆಗಳ ನಡಿಗೆ, ನಡವಳಿಕೆ ಮತ್ತು ಜೀವನಶೈಲಿ ಗಂಭೀರ, ಉದಾತ್ತ, ಅನುಕರಣೀಯ. ದೊಡ್ಡ ಹಿಂಡುಗಳಲ್ಲಿ ಸಾಗುವ ಅವು ಗರ್ಭಿಣಿ ಹೆಣ್ಣುಗಳು, ಪುಟ್ಟ ಮರಿಗಳು, ವಯಸ್ಸಾದವು ಅಥವಾ ಗಾಯಗೊಂಡ ತಮ್ಮ ಕುಟುಂಬದ ಯಾವ ಸದಸ್ಯನನ್ನೂ ಹಿಂದೆ ಬಿಡದೆ ತಮ್ಮ ಪಾಡಿಗೆ ತಾವು ಇರುವಂಥವು. ಅವು ಸ್ವಭಾವತಃ ಶಾಂತ ಹಾಗೂ ಅಪಾರ ತಾಳ್ಮೆಯುಳ್ಳವು.

ಇಂತಿಪ್ಪ ಆನೆಗಳ ತಂಟೆಗೆ ವಿನಾಕಾರಣ ಹೋದರೆ ಅವುಗಳ ಸಹನೆಯ ಕಟ್ಟೆಯೂ ಒಡೆಯದೇ ಇರುತ್ತದೆಯೇ? ತಮಗೆ ಕಿರಿಕಿತಿ ಎನ್ನಿಸಿದಾಗ ಮೊದಲಿಗೆ ಅವು ಘೀಳಿಟ್ಟು, ಕಾಲಿಂದ ಧೂಳೆಬ್ಬಿಸಿ ಎಚ್ಚರಿಕೆ ಕೊಡುತ್ತವೆ. ಅದನ್ನು ನೋಡಿ ಹಿಮ್ಮೆಟ್ಟಿದರೆ ಸೈ, ಇಲ್ಲೆಂದಲ್ಲಿ ಮುನ್ನುಗ್ಗಿ ಅಟ್ಟಿಸಿಕೊಂಡು ಬರುತ್ತವೆ. ಹಾಗಾದಾಗ ನಿಮ್ಮ ಗತಿ ದೇವರಿಗೇ ಪ್ರೀತಿ!

ಇದನ್ನೂ ಓದಿ
Image
ಖೂನ ಅಂದರ ಗುರುತೋ ಯಾರದೋ ರಗತೋ? ಯಾಂಬಲ್ಲ!
Image
ಈ ಹೀರೋಗಳು ಮುದುಕರಾದಾಗ!; ಇವರನ್ನು ಗುರುತಿಸಬಲ್ಲಿರಾ?
Image
ಕ್ಯಾನ್ಸರ್ ಪೀಡಿತ ತಾಯಿಯೊಂದಿಗೆ ತಲೆ ಬೋಳಿಸಿಕೊಂಡ ಮಗ, ಸಾಥ್ ಕೊಟ್ಟ ಸಲೂನಿಗರು
Image
ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಈ ಮನುಷ್ಯನ ಅದೃಷ್ಟ ನೋಡಿ. ಕುಡಿದ ಮತ್ತಿನಲ್ಲಿ ಕಾರಿನಿಂದಿಳಿದು ಕಾಡಿನಂಚಲ್ಲಿ ಸುಮ್ಮನೆ ಮೇಯುತ್ತ ನಿಂತಿದ್ದ ಸಲಗವೊಂದರ ತೀರ ಹತ್ತಿರ ಹೋಗಿದ್ದಾನೆ. ಅದಕ್ಕೆ ನಮಸ್ಕರಿಸಿ ಕಾಲಿಗೆ ಬಿದ್ದಂತೆ ಮಾಡುವಾಗ ಅದು ತೊಲಗು ಇಲ್ಲಿಂದ ಎಂದು ಎಚ್ಚರಿಕೆ ಕೊಟ್ಟಿದೆ. ಆಯಿತು, ಅಲ್ಲಿಂದ ವಾಪಸ್ ಹೊರಟನೇನೋ ಸರಿ, ಮತ್ತೇನೆನ್ನಿಸಿತೋ ಮರಳಿ ಆನೆಯ ಬಳಿ ಹೋಗಿ ತನ್ನ ಭಕ್ತಿಯ ಮೆರವಣಿಗೆ ಮುಂದುವರಿಸಿದ್ದಾನೆ.

ಇದನ್ನು ಓದಿ : ನಾಯಿ ಗುಂಡಿ ತೋಡುವುದ ಕಂಡೆ; ಕಾಣಿರೇ ದಾಸರೇ ಈ ‘ಕಲಿ’ಯುಗವ

‘ಇಂಥಾ ಮೂರ್ಖರನ್ನು ಸಹಿಸಿಕೊಳ್ಳುತ್ತವಲ್ಲ, ಅದಕ್ಕೆ ಆನೆ ಶಾಂತ ದೈತ್ಯ, ಆರಾಧನೀಯ,’ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ‘ವನ್ಯಜೀವಿ ಕಾಯ್ದೆಯ ಅಡಿಯಲ್ಲಿ ಇವನನ್ನು ಬಂಧಿಸಬೇಕು’ ಎಂದೂ ಕೆಲವರು ಹೂಂಕರಿಸಿದ್ಧಾರೆ.

ಇದನ್ನೂ ಓದಿ : ವೈರಲ್ ಚಿಲ್ಲಿ ಲಿಪ್​ ಗ್ಲಾಸ್​; ಇದನ್ನು ಟ್ರೆಂಡ್​ ಆಗಲು ಬಿಡಬೇಡಿ ಎನ್ನುತ್ತಿರುವ ನೆಟ್ಟಿಗರು

ಆನೆಗಳಂತೂ ಬುದ್ಧಿಶಾಲಿಗಳು. ಜೀವವಿಕಸನದ ಮೇರು ಸಾಧನೆ ಎಂದುಕೊಂಡು ಮೆರೆಯುತ್ತಿರುವ ನಾವು ಮನುಷ್ಯರು ನಿಜವಾಗಿಯೂ ಬುದ್ಧಿಶಾಲಿ ಜೀವಿಗಳೇ? ಈ ಘಟನೆಯ ಬಗ್ಗೆ ಹಾಗೂ ಈ ಪ್ರಶ್ನೆಯ ಬಗ್ಗೆ ನಿಮಗೇನೆನ್ನಿಸುತ್ತೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:39 pm, Fri, 12 May 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್