Viral Video: ಜಡೆಜಗಳವನ್ನು ನಿಲ್ಲಿಸಲು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ ಪೊಲೀಸ್, ವಿಡಿಯೋ ಇಲ್ಲಿದೆ ನೋಡಿ

ಮಹಿಳೆಯರ ಗುಂಪೊಂದು ಬೀದಿ ಜಗಳದಲ್ಲಿ ತೊಡಗಿರುವಾಗ ಅವರ ರಂಪಾಟವನ್ನು ನಿಲ್ಲಿಸಲು ಪೋಲಿಸರೊಬ್ಬರು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮತ್ತು ಪೋಲಿಸರ ಕರ್ತವ್ಯ ಪ್ರಜ್ಞೆಗೆ ನೆಟ್ಟಿಗರು ಶಹಬಾಷ್ ಗಿರಿ ನೀಡಿದ್ದಾರೆ.

Viral Video: ಜಡೆಜಗಳವನ್ನು ನಿಲ್ಲಿಸಲು ಮಹಿಳೆಯರ ಮುಖಕ್ಕೆ ಪೆಪ್ಪರ್ ಸ್ಪ್ರೇ  ಸಿಂಪಡಿಸಿದ ಪೊಲೀಸ್, ವಿಡಿಯೋ ಇಲ್ಲಿದೆ ನೋಡಿ
ಜಡೆಜಗಳImage Credit source: Twitter
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:May 13, 2023 | 5:57 PM

ಸಾಮಾನ್ಯವಾಗಿ ಮಹಿಳೆಯರ ಬೀದಿಜಗಳಗಳನ್ನು ನೊಡಿರುತ್ತೇವೆ. ನೀರಿನ ವಿಷಯದಿಂದ ಹಿಡಿದು ಕ್ಷುಲ್ಲಕ ಕಾರಣಗಳಿಗೂ ಜಗಳವಾಡುತ್ತಾ, ಕೆಲವು ಹೆಂಗಸರು ಬೀದಿ ರಂಪ ಮಾಡುತ್ತಾರೆ. ಇನ್ನು ಈ ಮಹಿಳೆಯರ ಜಡಡೆಜಗಳವನ್ನು ನೋಡುವುದೆಂದರೆ ಕೆಲವರಿಗೆ ತಮಾಷೆಯಾಗಿಬಿಟ್ಟಿದೆ. ಇಂತಹ ಜಡೆ ಜಗಳಗಳ ಅದೆಷ್ಟೋ ಉದಾಹರಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವೀಡಿಯೋಗಳಲ್ಲಿಯೂ ನಾವು ನೋಡಿರುತ್ತೇವೆ ಅಂತಹದ್ದೇ ಜಡೆ ಜಗಳದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದನ್ನು ಮಾಡುತ್ತಿದೆ.

ಟ್ವಿಟರ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ವಿದೇಶದಲ್ಲಿ ಮಹಿಳೆಯರ ಗುಂಪೊಂದು ಕಿತ್ತಾಡಿಕೊಳ್ಳುತ್ತಾ ಬೀದಿ ಜಗಳದಲ್ಲಿ ತೊಡಗಿರುವ ದೃಶ್ಯವನ್ನು ಕಾಣಬಹುದು. ಮಹಿಳೆಯರು ರಸ್ತೆ ಬದಿಯ ಅಂಗಡಿಗಳ ಬಳಿ ತಮ್ಮ ಕೈಯಲ್ಲಿರುವ ವಸ್ತುಗಳನ್ನು ಕಿತ್ತು ಬಿಸಾಡುತ್ತಾ, ಜಡೆಗಳನ್ನು ಎಳೆದಾಡುತ್ತಾ ರಂಪಾಟವನ್ನು ಮಾಡುತ್ತಿರುತ್ತಾರೆ. ಅವರ ರಂಪಾಟವನ್ನು ಯಾರಿಂದಲೂ ತಡೆಯಲಾರದೆ ಜನರು ಮೂಕಪ್ರೇಕ್ಷಕರಂತೆ ಅವರ ಜಗಳವನ್ನು ನೋಡುತ್ತಾ ನಿಂತಿರುತ್ತಾರೆ. ಅಷ್ಟರಲ್ಲಿ ಪೋಲಿಸರೊಬ್ಬರು ಆ ಸ್ಥಳಕ್ಕೆ ಧಾವಿಸಿ, ಮಹಿಳೆಯರ ಜಗಳವನ್ನು ನಿಲ್ಲಿಸುವ ಸಲುವಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇಯನ್ನು ಸಿಂಪಡಿಸುತ್ತಾರೆ. ಅಷ್ಟರಲ್ಲಿ ಆ ಜಗಳಗಂಟಿಯರು ಮತ್ತು ಅಲ್ಲಿ ಅವರ ಜಗಳವನ್ನು ವೀಕ್ಷಿಸುತ್ತಿದ್ದ ಜನರು ಮೆಣಸಿನ ಸ್ಪ್ರೇಯ ಘಾಟನ್ನು ತಡೆಯಲಾರದೆ ಕೆಮ್ಮುತ್ತಾ, ಮುಖ ಮುಚ್ಚಿಕೊಂಡು ಓಡಿ ಹೋಗುತ್ತಾರೆ. ಇಷ್ಟಾದರೂ ಜಗಳವನ್ನು ನಿಲ್ಲಿಸದ ಮಹಿಳೆಯರ ಗುಂಪು ಒಂದಷ್ಟು ದೂರ ಹೋಗಿ ಮತ್ತೊಮ್ಮೆ ಜಡೆಗಳನ್ನು ಎಳೆದಾಡುತ್ತಾ ಜಗಳವಾಡುತ್ತಾರೆ. ತಕ್ಷಣ ಆ ಪೋಲಿಸ್ ಪೇದೆ ಅಲ್ಲಿಗೆ ಹೋಗಿ ಇನ್ನೊಮ್ಮೆ ಸರಿಯಾಗಿ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಸಿಂಪಡಿಸುತ್ತಾರೆ.

ಇದನ್ನೂ ಓದಿ: ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?

ಈ ವೀಡಿಯೋವನ್ನು ‘ಕ್ಯಾಚ್ ಅಪ್’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಪೋಲಿಸ್ ಅಲ್ಲಿಗೆ ಹೋಗಿ ಎಲ್ಲರಿಗೂ ಪೆಪ್ಪರ್ ಸ್ಪ್ರೇ ಮಾಡಿ ಕೆಲಸ ಮುಗಿದಿದೆ ಎಂಬಂತೆ ಹೊರನಡೆದರು’ ಎಂಬ ಶೀರ್ಷಿಕೆಯನ್ನು ವೀಡಿಯೋಗೆ ನೀಡಿದ್ದಾರೆ. ವೈರಲ್ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಹಾಗೂ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವರು ತರಹೇವಾರಿ ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಆ ಮಹಿಳೆಯರನ್ನು ಬಂಧಿಸಬೆಕಿತ್ತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ರಸ್ತೆಗಳ ಉದ್ದಕ್ಕೂ ಇರುವ ಪ್ರತಿಯೊಂದು ಅಂಗಡಿಗಳು ಪೆಪ್ಪರ್ ಸ್ಪ್ರೇಯನ್ನು ಹೊಂದಿರಬೇಕು. ಮತ್ತು ಈ ರೀತಿ ಜಗಳವಾದಾಗ ಅದನ್ನು ಅವರ ಮುಖಕ್ಕೆ ಸಿಂಪಡಿಸಬೇಕು’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಇದೊಂದು ಉತ್ತಮ ಉಪಾಯ’ ಎಂದು ಹೇಳುತ್ತಾ ಪೋಲಿಸರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:57 pm, Sat, 13 May 23

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ