AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sherlyn Chopra: ಹಾಟ್​ ನಟಿಯನ್ನು ಹೊತ್ತುಕೊಂಡು ಹೋದ ಯುವಕ; ವೈರಲ್​ ಆಗಿದೆ ಶೆರ್ಲಿನ್​ ಚೋಪ್ರಾ ವಿಡಿಯೋ

ಶೆರ್ಲಿನ್​ ಚೋಪ್ರಾಗೂ ವಿವಾದಕ್ಕೂ ಯಾಕೆ ಇಷ್ಟು ನಂಟು? ಈ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ. ‘ಸತ್ಯ ಯಾವಾಗಲೂ ವಿವಾದಾತ್ಮಕ ಆಗಿರುತ್ತದೆ’ ಎಂದು ಅವರು ಹೇಳಿದ್ದಾರೆ.

Sherlyn Chopra: ಹಾಟ್​ ನಟಿಯನ್ನು ಹೊತ್ತುಕೊಂಡು ಹೋದ ಯುವಕ; ವೈರಲ್​ ಆಗಿದೆ ಶೆರ್ಲಿನ್​ ಚೋಪ್ರಾ ವಿಡಿಯೋ
ಶೆರ್ಲಿನ್ ಚೋಪ್ರಾ
ಮದನ್​ ಕುಮಾರ್​
|

Updated on: May 12, 2023 | 12:29 PM

Share

ನಟಿ ಶೆರ್ಲಿನ್​ ಚೋಪ್ರಾ (Sherlyn Chopra) ಅವರು ಹಲವು ಕಾರಣಗಳಿಂದ ಸುದ್ದಿ ಆಗುತ್ತಾರೆ. ಅಶ್ಲೀಲ ಸಿನಿಮಾಗಳ ಪ್ರಕರಣದಲ್ಲಿ ಅವರ ಹೆಸರು ಕೂಡ ಕೇಳಿಬಂದಿತ್ತು. ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಬಗ್ಗೆ ಅವರು ಅನೇಕ ಆರೋಪಗಳನ್ನು ಹೊರಿಸಿದ್ದರು. ವೃತ್ತಿ ಜೀವನದಲ್ಲಿ ಶೆರ್ಲಿನ್​ ಚೋಪ್ರಾ ಮಾಡಿಕೊಂಡ ವಿವಾದಗಳು (Controversy) ಒಂದೆರಡಲ್ಲ. ಅದೆಲ್ಲವನ್ನೂ ಇಟ್ಟುಕೊಂಡು ಅವರೀಗ ಒಂದು ವಿಡಿಯೋ ಸಾಂಗ್​ ಮಾಡಿದ್ದಾರೆ. ಶೀಘ್ರದಲ್ಲೇ ಅದು ರಿಲೀಸ್​ ಆಗಲಿದೆ. ಅದಕ್ಕೂ ಮುನ್ನ ಶೆರ್ಲಿನ್​ ಚೋಪ್ರಾ ಅವರ ಒಂದು ವಿಡಿಯೋ ವೈರಲ್ ಆಗಿದೆ. ಮುಂಬೈನಲ್ಲಿ ಯುವಕನೋರ್ವ ಶೆರ್ಲಿನ್​ ಚೋಪ್ರಾ ಅವರನ್ನು ಬೆನ್ನಿನಮೇಲೆ ಹೊತ್ತುಕೊಂಡು ಹೋಗಿದ್ದಾನೆ. ಪಾಪರಾಜಿಗಳ ಕ್ಯಾಮೆರಾದಲ್ಲಿ ಈ ವಿಡಿಯೋ (Viral Video) ಸೆರೆಯಾಗಿದೆ. ಇದನ್ನು ನೋಡಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರಂತೂ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.

ಶೆರ್ಲಿನ್​ ಚೋಪ್ರಾ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಲ್ಲಿದ್ದ ಪಾಪರಾಜಿಗಳನ್ನು ನೋಡಿ ಅವರು ತುಂಬಾ ಉತ್ಸಾಹದಿಂದ ಪೋಸ್​ ನೀಡಿದರು. ತುಸು ದೂರು ರ‍್ಯಾಂಪ್​ ವಾಕ್​ ಕೂಡ ಮಾಡಿದರು. ಅಷ್ಟಕ್ಕೇ ನಿಲ್ಲಲಿಲ್ಲ ಅವರ ಭಿನ್ನಾಣ. ಅಲ್ಲೇ ಇದ್ದ ಯುವಕನೋರ್ವ ಶೆರ್ಲಿನ್​ ಶೇಪ್ರಾ ಅವರನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಸಾಗಿದ್ದಾನೆ. ಆಗ ಶೆರ್ಲಿನ್​ ಚೋಪ್ರಾ ಅವರು ನಗುನಗುತ್ತಾ ಪೋಸ್​ ನೀಡಿದ್ದಾರೆ.

ಶೆರ್ಲಿನ್​ ಚೋಪ್ರಾ ಅವರಿಗೆ ಈಗ 39 ವರ್ಷ ವಯಸ್ಸು. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಸಿನಿಮಾಗಳಿಗಿಂತಲೂ ಅವರು ವಿವಾದದ ಮೂಲಕವೇ ಹೆಚ್ಚು ಸುದ್ದಿ ಆಗುತ್ತಾರೆ. ತಮ್ಮ ಜೀವನದಲ್ಲಿ ಆದ ಕಿರಿಕ್​ಗಳನ್ನೇ ಇಟ್ಟುಕೊಂಡು ಅವರು ಈಗ ವಿಡಿಯೋ ಸಾಂಗ್​ ಮಾಡುತ್ತಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮತ್ತೆ ಸುದ್ದಿಯಾದ ಬೋಲ್ಡ್​ ನಟಿ ಶೆರ್ಲಿನ್​ ಚೋಪ್ರಾ

ಶೆರ್ಲಿನ್​ ಚೋಪ್ರಾಗೂ ವಿವಾದಕ್ಕೂ ಯಾಕೆ ಇಷ್ಟು ನಂಟು? ಈ ಪ್ರಶ್ನೆ ಅವರೇ ಉತ್ತರ ನೀಡಿದ್ದಾರೆ. ‘ಸತ್ಯ ಯಾವಾಗಲೂ ವಿವಾದಾತ್ಮಕ ಆಗಿರುತ್ತದೆ. ನಾನು ಸತ್ಯ ಮಾತನಾಡಿದಾಗೆಲ್ಲ ನನ್ನನ್ನು ವಿವಾದಿತ ನಟಿ ಎಂದು ಲೇಬಲ್​ ಮಾಡಲಾಗುತ್ತದೆ. ಬಣ್ಣದ ಲೋಕದಲ್ಲಿನ ನನ್ನ ಏಳು-ಬೀಳಿನ ಪಯಣದ ಬಗ್ಗೆ ಸಾಕಷ್ಟು ಮಾಹಿತಿ ಈ ಹಾಡಿನಲ್ಲಿ ಇರಲಿದೆ’ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದಾರೆ.

ಇದನ್ನೂ ಓದಿ: ‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ

‘ನನ್ನ ಬೇರೆ ಎಲ್ಲ ಪ್ರಾಜೆಕ್ಟ್​ಗಳಿಗಿಂತಲೂ ಈ ಸಾಂಗ್​ ನನಗೆ ಹೆಚ್ಚು ಆಪ್ತವಾಗಿರಲಿದೆ. ಮುಂಬೈನ ಹೊರವಲಯದಲ್ಲಿ ಇದರ ಶೂಟಿಂಗ್​ ಮಾಡಲಾಗಿದೆ. ಈ ಹಾಡಿನಲ್ಲಿ ತುಂಬ ಜೋಶ್​ ಇರಲಿದೆ. ಯುವಕರಿಗೆ ಈ ಹಾಡು ತುಂಬ ಇಷ್ಟ ಆಗಲಿದೆ ಎಂಬ ನಂಬಿಕೆ ನನಗೆ ಇದೆ. ಈ ಗೀತೆಯಲ್ಲಿ ತುಂಬ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕೆ ನಾನು ಕಠಿಣವಾದ ಡಯೆಟ್​ ಪಾಲಿಸಿದ್ದೇನೆ’ ಎಂದಿದ್ದಾರೆ ಶೆರ್ಲಿನ್​ ಚೋಪ್ರಾ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ