ಬಾಂಗ್ಲಾ ದೇಶದಲ್ಲಿ ಬೊಬ್ಬಿರಿದ ‘ಪಠಾಣ್’ ಸಿನಿಮಾ; ವೀಕೆಂಡ್ನಲ್ಲಿ ಹುಡುಕಿದರೂ ಸಿಗುತ್ತಿಲ್ಲ ಟಿಕೆಟ್
ಬಾಂಗ್ಲಾದೇಶದಲ್ಲಿ ವರ್ಷಕ್ಕೆ 10 ವಿದೇಶಿ ಸಿನಿಮಾಗಳನ್ನು ಪ್ರದರ್ಶನ ಮಾಡಲು ಅವಕಾಶ ನೀಡಲಾಗಿದೆ. ಈ ಅವಕಾಶ ಸಿಕ್ಕ ಬೆನ್ನಲ್ಲೇ ‘ಪಠಾಣ್’ ರಿಲೀಸ್ ಮಾಡಲಾಗಿದೆ.
ಶಾರುಖ್ ಖಾನ್ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಯಾವ ದೇಶದಲ್ಲಿ ರಿಲೀಸ್ ಆದರೂ ಮೆಚ್ಚುಗೆ ಪಡೆಯುತ್ತವೆ. ಇತ್ತೀಚೆಗೆ ರಿಲೀಸ್ ಆದ ‘ಪಠಾಣ್’ ಸಿನಿಮಾ (Pathaan Movie)ವಿಶ್ವಾದ್ಯಂತ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿತು. ಈಗ ‘ಪಠಾಣ್’ ಚಿತ್ರ ಬಾಂಗ್ಲಾದೇಶದಲ್ಲಿ ರಿಲೀಸ್ ಆಗಿದೆ. ವೀಕೆಂಡ್ ಶೋನ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ. ಈ ಚಿತ್ರವನ್ನು ಅಲ್ಲಿನ ಪ್ರೇಕ್ಷಕರು ನೋಡಿ ಖುಷಿಪಡುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ವಿದೇಶಿ ಸಿನಿಮಾಗಳು ರಿಲೀಸ್ ಆಗುತ್ತಿರಲಿಲ್ಲ. ಸ್ಥಳೀಯ ಸಿನಿಮಾಗಳಿಗೆ ಒತ್ತು ನೀಡಬೇಕು ಎಂಬುದು ಅಲ್ಲಿಯವರ ಉದ್ದೇಶ. ಹೀಗಾಗಿ, ಈ ನಿಯಮ ತರಲಾಗಿದೆ. ಈಗ ನಿಯಮ ಬದಲಿಸಲಾಗಿದೆ. ವರ್ಷಕ್ಕೆ 10 ವಿದೇಶಿ ಸಿನಿಮಾಗಳನ್ನು ಪ್ರದರ್ಶನ ಮಾಡಲು ಅವಕಾಶ ನೀಡಲಾಗಿದೆ. ಈ ಅವಕಾಶ ಸಿಕ್ಕ ಬೆನ್ನಲ್ಲೇ ‘ಪಠಾಣ್’ ರಿಲೀಸ್ ಮಾಡಲಾಗಿದೆ.
‘ಪಠಾಣ್’ ಸಿನಿಮಾ ಬಾಂಗ್ಲಾದೇಶದ 48 ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ದಿನಕ್ಕೆ 200ಕ್ಕೂ ಅಧಿಕ ಶೋಗಳು ಲಭ್ಯವಾಗಿದೆ. ಮೊದಲ ಎರಡು ದಿನಗಳ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ. 1971ರ ಬಳಿಕ ಪೂರ್ಣಪ್ರಮಾಣದಲ್ಲಿ ರಿಲೀಸ್ ಆಗುತ್ತಿರುವ ಮೊದಲ ಹಿಂದಿ ಚಿತ್ರ ಇದು ಅನ್ನೋದು ವಿಶೇಷ.
2009ರಲ್ಲಿ ಸಲ್ಮಾನ್ ಖಾನ್ ನಟನೆಯ ‘ವಾಂಟೆಡ್’ ಚಿತ್ರ ಬಾಂಗ್ಲಾದೇಶದಲ್ಲಿ ರಿಲೀಸ್ ಮಾಡಲಾಯಿತು. ಆದರೆ, ಸ್ಥಳೀಯ ಸಿನಿಮಾ ನಿರ್ಮಾತೃರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಯಿತು. ಈಗ ‘ಪಠಾಣ್’ ಚಿತ್ರದ ಮೂಲಕ ಬಾಂಗ್ಲಾದೇಶದವರನ್ನು ರಂಜಿಸಲಾಗುತ್ತಿದೆ.
ಇದನ್ನೂ ಓದಿ: Shah Rukh Khan: ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಶಾರುಖ್ ಖಾನ್; ‘ಪಠಾಣ್’ ಗೆದ್ದ ಮೇಲೆ ಸೊಕ್ಕು ಬಂತಾ?
‘ಪಠಾಣ್’ ಚಿತ್ರದಲ್ಲಿ ಶಾರುಖ್ ಖಾನ್ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜಾನ್ ಅಬ್ರಾಹಂ ಅವರು ವಿಲನ್ ಪಾತ್ರ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಭರ್ಜರಿ ಲಾಭ ಕಂಡಿದೆ. ಬಂದ ಲಾಭದಲ್ಲಿ ಶಾರುಖ್ ಖಾನ್ಗೂ ಪಾಲಿದೆ. ಹೀಗಾಗಿ, ಅವರಿಗೂ ಒಳ್ಳೆಯ ಲಾಭ ಆಗಿದೆ. ಸಿದ್ದಾರ್ಥ್ ಆನಂದ್ ಅವರ ನಿರ್ದೇಶನ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ