ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ

Curd Rice : ಕದಂಬರ ಬನವಾಸಿಯಲ್ಲಿ 400 ವರ್ಷಗಳಿಂದಲೂ ನೆಲೆಸಿರುವ ಕೊಂಕಣಿ ಮನೆತನಗಳಲ್ಲಿ ಇದು ಸಾಮಾನ್ಯ. ಆ ಮನೆಗಳ ಪ್ರತಿ ಮಗುವೂ ತನ್ನದೇ ಕಲ್ಲಿನಿಂದ ಕಲ್ಬುತ್ತಿ ಮಾಡಿಕೊಡಬೇಕೆಂಬ ಬೇಡಿಕೆ ಇಡುತ್ತದೆ.

ಊಟ ಬೆಂಗಳೂರು; ಕದಂಬರ ಊರಿನ ಕಲ್ಬುತ್ತಿ ತಿಂದಿದ್ದೀರಾ? ಈ ವಿಡಿಯೋ ನೋಡಿ
ಊಟ ಬೆಂಗಳೂರು ರೆಸ್ಟೋರೆಂಟ್​ನಲ್ಲಿ ತಯಾರಾದ ಕಲ್ಬುತ್ತಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 15, 2023 | 4:18 PM

Viral Video : ನಮ್ಮಲ್ಲಿ ಮೊಸರನ್ನ ತಿನ್ನದಿರುವವರು ಯಾರು? ಮನೆಯಲ್ಲಾಗಲಿ ಮದುವೆ ಮೊದಲಾದ ಸಮಾರಂಭಗಳಲ್ಲಿ ಊಟದ ಕೊನೆಯಲ್ಲೇ ಆಗಲಿ ಜಠರಾಗ್ನಿಯನ್ನು ತಣಿಸಲು ಮೊಸರನ್ನ ಬೇಕೇಬೇಕು. ಊರಿಂದೂರಿಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದಾಗಲೂ ಬಹುತೇಕ ಜನರು ಊಟದ ಬುತ್ತಿ ಬಿಚ್ಚಿದಾಗ ಮೊಸರನ್ನದ ಹದುಳಾದ ತುಸುವೇ ಹುಳಿಯೇರಿದ ಕಂಪು ಎಲ್ಲೆಡೆ ಆವರಿಸುತ್ತದೆ. ಆದರೆ ಕಲ್ಬುತ್ತಿಯನ್ನು ನೀವು ಸವಿದಿದ್ದೀರಾ? ಈ ವಿಡಿಯೋ ನೋಡಿದರೆ ನೀವು ನಿಮ್ಮ ಬಾಲ್ಯದ ದಿನಗಳಿಗೆ ಜಾರಬಹುದೇನೋ.

ಇದನ್ನೂ ಓದಿ
Image
ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ
Image
Mother’s Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?
Image
ಓರಿಯೋ ಬಿಸ್ಕಿಟ್​ ಭಜ್ಜಿ; ಈ ಭೂಮಿಯನ್ನೇ ತೊರೆಯುತ್ತೇವೆ ಎನ್ನುತ್ತಿರುವ ನೆಟ್ಟಿಗರು
Image
‘ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು’ ಹೌದೆ?
View this post on Instagram

A post shared by Oota Bangalore (@oota_bangalore)

ಬುತ್ತಿ ಎನ್ನುವುದು ಮೊಸರನ್ನಕ್ಕೆ ಅನ್ವರ್ಥ. ಜೊತೆಗೆ ಮಿಡಿ ಮಾವಿನಕಾಯಿ ಅಥವಾ ನಿಂಬೆಯ ಉಪ್ಪಿನಕಾಯಿಯೋ, ಉತ್ತರ ಕರ್ನಾಟಕದ ಝುಣಕವೋ ಇದ್ದರಂತೂ ಸ್ವರ್ಗಕ್ಕೇ ಕಿಚ್ಚು! ಅದಕ್ಕೆ ಕರಿಬೇವು ಜೀರಿಗೆ ಇಂಗಿನ ಒಗ್ಗರಣೆ, ಒಂದಿಷ್ಟು ದ್ರಾಕ್ಶಿ, ದಾಳಿಂಬೆ, ಗೋಡಂಬಿ ಹಾಕಿ ಇನ್ನಷ್ಟು ರುಚಿಕಟ್ಟಾಗಿಯೂ ಮಾಡುತ್ತಾರೆ. ದೇಹಕ್ಕೆ ತಂಪಾದ ಮೊಸರನ್ನ ದಕ್ಷಿಣ ಭಾರತದೆಲ್ಲೆಡೆ comfort food ಎಂದೇ ಹೆಸರುವಾಸಿ.

ಇದನ್ನೂ ಓದಿ : Mothers Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?

ಆದರೆ ಇಲ್ಲೊಂದು ಹೊಸ ರೀತಿಯ ಮೊಸರನ್ನ ನಮಗೆ ಕಾಣಸಿಗುತ್ತದೆ. ‘ಕಲ್ಬುತ್ತಿ’ ಎಂಬ ಮೊಸರನ್ನ. ಸುಡುಸುಡು ಕಾದ ಕಲ್ಲೊಂದನ್ನು ಮೊಸರನ್ನದ ಮಧ್ಯೆ ಇರಿಸಿ, ಅದರ ಮೇಲೆ ತುಪ್ಪದಲ್ಲಿ ಒಗ್ಗರಣೆ ಹಾಕಿದ ಇಂಗು, ಕರಿಬೇವು, ಸಾಸಿವೆ, ಜೀರಿಗೆ ಹುಯ್ದು ಬಾಳೆಲೆಯಲ್ಲಿ ಮುಚ್ಚಿ ಸ್ವಲ್ಪ ಹೊತ್ತು ಇಡುತ್ತಾರೆ. ಇದೇ ಕಲ್ಬುತ್ತಿ ಎಂದು ಕರೆಯುವ ಮೊಸರನ್ನದ sizzler! ಇದು ನಮ್ಮಲ್ಲಿ ಹಲವರಿಗೆ ಹೊಸದೆಂದು ತೋರಿದರೂ ಇದಕ್ಕೆ ದೊಡ್ಡ ಇತಿಹಾಸವೇ ಇದೆ.

ಇದನ್ನೂ ಓದಿ : ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ

ಕದಂಬರ ಬನವಾಸಿಯಲ್ಲಿ 400 ವರ್ಷಗಳಿಂದಲೂ ನೆಲೆಸಿರುವ ಕೊಂಕಣಿ ಮನೆತನಗಳಲ್ಲಿ ಇದು ಸಾಮಾನ್ಯ. ಆ ಮನೆಗಳ ಪ್ರತಿ ಮಗುವೂ ತನ್ನದೇ ಕಲ್ಲಿನಿಂದ ಕಲ್ಬುತ್ತಿ ಮಾಡಿಕೊಡಬೇಕೆಂಬ ಬೇಡಿಕೆ ಇಡುತ್ತದೆ.

ಕಲ್ಬುತ್ತಿ ಎಂಬ ಈ ವಿಶೇಷ ಮೊಸರನ್ನವನ್ನು ನೀವು ತಿಂದಿದ್ದೀರಾ? ಇಲ್ಲವಾದರೆ ಈ ವಿಡಿಯೋ ನೋಡಿ ಮಾಡಿಕೊಂಡು ತಿನ್ನಿ. ಹೇಗಿತ್ತು ಎಂದು ತಿಳಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:18 pm, Mon, 15 May 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ