Video Viral: ತವಾಘಾಟ್-ಲಿಪುಲೇಖ್ ಹೆದ್ದಾರಿಯ ಗರ್ಬಾಧರ್‌ ಪರ್ವತ ಕುಸಿತ, ತಪ್ಪಿದ ಭಾರೀ ಅನಾಹುತ

ಇಂದು ಕೆಲಕಾಲ ರಸ್ತೆ ತೆರೆದಾಗ ಆದಿ ಕೈಲಾಸದ ಮೂರು ಮತ್ತು ನಾಲ್ಕನೇ ತಂಡದ ಪ್ರಯಾಣಿಕರು ಹಾಗೂ ಇತರೆ ವಾಹನಗಳ ಸಂಚಾರ ಆರಂಭವಾಗುತ್ತಿದ್ದಂತೆ ದಿಢೀರ್ ಗುಡ್ಡ ಬಿರುಕು ಬಿಟ್ಟು, ಕುಸಿಯಲು ಶುರುವಾಗಿದೆ.

Follow us
|

Updated on: May 15, 2023 | 6:17 PM

ಡೆಹ್ರಡೂನ್: ಉತ್ತರಾಖಂಡದ  ಧಾರ್ಚುಲಾ-ತವಾಘಾಟ್-ಲಿಪುಲೇಖ್ ರಾಷ್ಟ್ರೀಯ ಹೆದ್ದಾರಿಯ ಗರ್ಬಧರ್‌ನಲ್ಲಿ ಗುಡ್ಡವೊಂದು ಇಂದು (ಮೇ15) ಹಠಾತ್ತನೆ ಬಿರುಕು ಬಿಟ್ಟಿದ್ದು. ಗುಡ್ಡದಿಂದ ಅಪಾರ ಪ್ರಮಾಣದ ಅವಶೇಷಗಳು ಮತ್ತು ಬಂಡೆಗಳು ಬಿದ್ದಿದೆ, ಇದನ್ನು ಕಂಡು ಅಲ್ಲಿದ್ದ ಜನರಲ್ಲಿ ಆತಂಕ ಮನೆಮಾಡಿದೆ. ಇದೇ ವೇಳೆ ಅಲ್ಲಿಂದ ಜನರು ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇದೀಗ ತವಾಘಾಟ್-ಲಿಪುಲೇಖ್ ಮೋಟಾರು ಮಾರ್ಗಕ್ಕೆ ಅವಶೇಷಗಳು ಬಿದ್ದು ದಾರಿ ಮುಚ್ಚ ಹೋಗಿದೆ.

ಕಳೆದ ನಾಲ್ಕು ದಿನಗಳಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿತ್ತು. ಆದರೆ ಇಂದು (ಮೇ15) ರಸ್ತೆ ತೆರೆಯುವಾಗ ಈ ಘಟನೆ ನಡೆದಿದೆ. ಆದಿ ಕೈಲಾಶ್‌ನ ಮೂರು ಮತ್ತು ನಾಲ್ಕನೇ ಗುಂಪಿನ ಪ್ರಯಾಣಿಕರು ಮತ್ತು ಇತರ ವಾಹನಗಳ ಸಂಚಾರ ಪ್ರಾರಂಭವಾಗಿದೆ. ಆದರೆ ಇದ್ದಕ್ಕಿದ್ದಂತೆ ಗುಡ್ಡ ಬಿರುಕು ಬಿಟ್ಟಿದ್ದು. ಈ ಸಮಯದಲ್ಲಿ ಯಾವುದೇ ಪ್ರಯಾಣಿಕರು ಆ ಸ್ಥಳದಲ್ಲಿ ಹಾದು ಹೋಗಿಲ್ಲ, ರಸ್ತೆಯನ್ನು ಮುಚ್ಚಿದ್ದರಿಂದ ಪ್ರಯಾಣಿಕರು ಧಾರ್ಚುಲಾಗೆ ಮರಳಿದ್ದಾರೆ.