Mother’s Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?

Indigo : 'ಕಳೆದ ಆರು ವರ್ಷಗಳಿಂದ ನನ್ನ ತಾಯಿ ಕ್ಯಾಬಿನ್​ ಸಿಬ್ಬಂದಿಯಾಗಿ ಮಾಡುವ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದೆ. ಆದರೆ ಈವತ್ತು ಒಂದೇ ವಿಮಾನದಲ್ಲಿ ಸಮವಸ್ತ್ರದಲ್ಲಿ ಒಟ್ಟಿಗೇ ಇಬ್ಬರೂ...' ಭಾವಪೂರ್ಣ ವಿಡಿಯೋ ನೋಡಿ.

Mother's Day: ಒಂದೇ ವಿಮಾನದಲ್ಲಿ ತಾಯಿಮಗಳು, ಗಗನಸಖಿ ಮಗಳು ಅಮ್ಮನ ಬಗ್ಗೆ ಹೇಳಿದ್ದೇನು?
ಅಮ್ಮ ಮಗಳು ಒಂದೇ ವಿಮಾನದಲ್ಲಿ ತಾಯಂದಿರ ದಿನದಂದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 15, 2023 | 11:13 AM

Viral Video : ನಿನ್ನೆಯಷ್ಟೇ ತಾಯಂದಿರ ದಿನವನ್ನು ಆಚರಿಸಿದ್ದೀರಿ. ಸಾಮಾಜಿಕ ಜಾಲತಾಣಗಳಲ್ಲಿ ಅಮ್ಮನ ಬಗ್ಗೆ ಥರಹೇವಾರಿ ಬರಹಗಳು, ನೆನಪುಗಳು, ಫೋಟೋ, ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದೀರಿ, ಮಿಡಿದಿದ್ದೀರಿ, ಸ್ಪಂದಿಸಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಗಗನಸಖಿ ವೃತ್ತಿಯಲ್ಲಿರುವ ಮಗಳು ಮತ್ತು ಕ್ಯಾಬಿನ್​ ಸಿಬ್ಬಂದಿಯಾಗಿರುವ ತಾಯಿ, ವಿಮಾನದಲ್ಲಿ ಸಮವಸ್ತ್ರಸಮೇತ ಎದುರುಗೊಂಡಿದ್ದಾರೆ. ಈ ಅಪರೂಪದ ಕ್ಷಣಗಳು ಇಬ್ಬರನ್ನೂ ಭಾವುಕಗೊಳಿಸಿವೆ.

ಇಂಡಿಗೋ ಏರ್​ಲೈನ್ಸ್​ನ ಗಗನಸಖಿ ನಬಿರಾ ಸಶ್ಮಿ ವಿಮಾನದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತ ತನ್ನ ತಾಯಿಯನ್ನುದ್ದೇಶಿಸಿ ಮಾತನಾಡುತ್ತಾಳೆ. ಕಳೆದ ಆರು ವರ್ಷಗಳಿಂದ ನನ್ನ ತಾಯಿ ಕ್ಯಾಬಿನ್​ ಸಿಬ್ಬಂದಿಯಾಗಿ ಮಾಡುವ ಎಲ್ಲಾ ಕೆಲಸಗಳನ್ನು ನೋಡುತ್ತಿದ್ದೆ. ಆದರೆ ಈವತ್ತು ಒಂದೇ ವಿಮಾನದಲ್ಲಿ ಸಮವಸ್ತ್ರದಲ್ಲಿ ಒಟ್ಟಿಗೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ಅವಕಾಶಕ್ಕೆ ಇಂಡಿಗೋಗೆ ಧನ್ಯವಾದ ಎಂದಿದ್ದಾಳೆ. ಪ್ರಯಾಣಿಕರು ಈ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ : ಸ್ಪೈಸ್​ಜೆಟ್​ನ​ ಬ್ಯಾಂಕಾಕ್​ ವಿಮಾನದಲ್ಲಿ ಪೈಲಟ್​ನ​ ತಮಾಷೆ ವಿಡಿಯೋ ವೈರಲ್

ನೆಟ್ಟಿಗರನೇಕರು ಇವರಿಗೆ ಶುಭ ಹಾರೈಸಿದ್ದಾರೆ. ನಿಮ್ಮಿಬ್ಬರಿಗೂ ಇಂಥ ಅವಕಾಶಗಳು ಮತ್ತಷ್ಟು ಸಿಗಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಹೀಗೆ ತಾಯಿ ಮಗಳಿಗೆ ಈ ಅವಕಾಶ ಕಲ್ಪಿಸಿದ ವಿಮಾನ ಸಂಸ್ಥೆಗೆ ವಂದನೆ ಎಂದು ಕೆಲವರು ಹೇಳಿದ್ದಾರೆ. ಇಂಥ ಆಪ್ತಘಳಿಗೆಗಳು ಆಗಾಗ ಸಂಭವಿಸುತ್ತಿರಲಿ ಎಂದು ಕೆಲವರು ಆಶಯ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:10 am, Mon, 15 May 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ