Viral Video: ನೀರಿನಲ್ಲಿ ಈಜುತ್ತಿದ್ದ ಬಾಲಕರತ್ತ ಬಂದ ನೀರಾನೆ, ಮುಂದೇನಾಯ್ತು ನೋಡಿ
ಪುಟ್ಟ ಪೋರರು ಈಜುತ್ತಿರುವಾಗ ದೈತ್ಯ ಆಕಾರದ ನೀರಾನೆ ಪತ್ತೆಯಾಗಿದೆ. ಈ ವೀಡಿಯೊದಲ್ಲಿ ಕೊಳದಿಂದ ನೀರಾನೆ ಹೊರಗೆ ಬರುವುದನ್ನು ಕಾಣಬಹುದು.
ಈಜಲು ಹೋಗುವ ಜನರು ಈ ವೀಡಿಯೋ ನೋಡಲೇಬೇಕು, ಒಂದು ಬಾರಿ ಈ ವೀಡಿಯೊ ನೋಡಿದ್ರೆ ಖಂಡಿತ ನೀವು ಶಾಕ್ ಆಗುವುದು ಖಂಡಿತ. ನೀರಿನಲ್ಲಿ ಜಲಚರಗಳು ಇರುವುದು ಸಹಜ, ಆದರೆ ಅದರಲ್ಲಿ ಅಪಾಯವನ್ನುಂಟು ಮಾಡುವ ಪ್ರಾಣಿಗಳು ಇರುತ್ತದೆ. ಅದಕ್ಕಾಗಿಯೇ ಎಚ್ಚರಿಕೆಯಿಂದ ಈಜಲು ಹೋಗಬೇಕು. ಅದರಲ್ಲೂ ನೀರಾನೆ ದೊಡ್ಡ ಅಪಾಯವನ್ನುಂಟು ಮಾಡುವ ಪ್ರಾಣಿ, ಟ್ವಿಟರ್ನಲ್ಲೊಂದು ವೀಡಿಯೊ ಭಾರೀ ವೈರಲ್ ಆಗುತ್ತಿದೆ. ಈ ವೀಡಿಯೊ ಈಜಲು ಹೋಗುವವರಿಗೆ ದೊಡ್ಡ ಎಚ್ಚರಿಕೆಯಾಗಿದೆ. ಈ ವೀಡಿಯೊದಲ್ಲಿ ಪುಟ್ಟ ಹುಡುಗರು ಕೊಳದಲ್ಲಿ ಈಜುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ನೀರಾನೆ ಕಾಣಿಸಿಕೊಂಡಿದೆ.
ಈ ವೀಡಿಯೊ ಆಫ್ರಿಕಾದ್ದು ಎಂದು ಹೇಳಲಾಗಿದೆ. ಪುಟ್ಟ ಪೋರರು ಈಜುತ್ತಿರುವಾಗ ದೈತ್ಯ ಆಕಾರದ ನೀರಾನೆ ಪತ್ತೆಯಾಗಿದೆ. ಈ ವೀಡಿಯೊದಲ್ಲಿ ಕೊಳದಿಂದ ನೀರಾನೆ ಹೊರಗೆ ಬರುವುದನ್ನು ಕಾಣಬಹುದು. ನೀರಾನೆ ಕೂಗು ಶಬ್ದ ಕೇಳಿದ ತಕ್ಷಣ ಅಲ್ಲಿದ್ದ ಹುಡುಗರು ಕಿರುಚುತ್ತಾ ಓಡಿದ್ದಾರೆ. ಈ ವೀಡಿಯೊ ಮಾಡುತ್ತಿದ್ದ ವ್ಯಕ್ತಿ ಕೂಡ ಅಲ್ಲಿಂದ ಪರಾರಿಯಾಗಿದ್ದಾರೆ.
No one expects the Hippo. pic.twitter.com/DExoVI8ZQG
— Terrifying Nature (@TerrifyingNatur) May 14, 2023
ಇದನ್ನೂ ಓದಿ:Viral Photos: ಛೀ.. ಇದೇನಿದು ಟೊಮೆಟೊ ಗಿಡದಲ್ಲಿ ಕಾಂಡೋಮ್, ಅಸಲಿ ಕಥೆ ಇಲ್ಲಿದೆ ನೋಡಿ
ಈ ವೀಡಿಯೊ 2021ರಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೆ ವೈರಲ್ ಆಗಿದೆ. ಸ್ಯಾನ್‌ವೈಲ್ಡ್ ಅಭಯಾರಣ್ಯದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಹುಡುಗರು ಅಲ್ಲಿಂದ ತಕ್ಷಣ ಓಡಿ ಹೋಗಿದ್ದಾರೆ. ಈ ನೀರಾನೆ ಇದು ಆಫ್ರಿಕಾದಲ್ಲಿ ಭಾರೀ ಬಲಶಾಲಿಯುತವಾದ ಪ್ರಾಣಿಯು ಹೌದು.
ದಿ ಟೆಲಿಗ್ರಾಫ್ ಪ್ರಕಾರ, ಈ ಹಿಂದೆ ಉಗಾಂಡಾದಲ್ಲಿ ಈ ನೀರಾನೆ ಪುಟ್ಟ ಮಗುವನ್ನು ನುಂಗಿದೆ ಎಂದು ಹೇಳಲಾಗಿದೆ. ಎರಡು ವರ್ಷದ ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ನೀರಾನೆ ಮಗುವನ್ನು ತನ್ನ ದವಡೆಯಲ್ಲಿ ಹಿಡಿದು ನುಂಗಿದೆ, ಇದನ್ನು ನೋಡಿದ ವ್ಯಕ್ತಿಯೊಬ್ಬರು ನೀರಾನೆಯ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ