ಪ್ರಾಣದ ಹಂಗು ತೊರೆದು ಬೆಕ್ಕಿಗೆ ಸಹಾಯ ಮಾಡಿದ ಮೊಲ; ಆಮೇಲೆ? ನೆಟ್ಟಿಗರಲ್ಲಿ ಕುತೂಹಲ
Helping : ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ನೆಲಗೆಬರಿ ಬೆಕ್ಕಿಗೆ ಹೊರಬರಲು ದಾರಿ ತೋರಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಾಗಿಲ್ಲ. ಮುಂದೆ?
Viral Video : ನಮ್ಮ ನಮ್ಮ ದಾರಿಯನ್ನು ಹೇಗೆ ಸುಗಮಗೊಳಿಸಿಕೊಳ್ಳುವುದು ಎನ್ನುವತ್ತಲೇ ನಾವು ಯಾವಾಗಲೂ ಯೋಚಿಸುತ್ತಿರುತ್ತೇವೆ. ಇನ್ನು ಯಾರಾದರೂ ಕಷ್ಟದಲ್ಲಿದ್ದರೆ ಸಹಾಯ ಮಾಡಬೇಕೇ ಬೇಡವೇ, ಪ್ರತಿಫಲವೇನು ಎಂದು ಯೋಚಿಸಿ ನಿರ್ಧರಿಸುತ್ತೇವೆ ವಿನಾ ತಕ್ಷಣವೇ ಮುನ್ನುಗ್ಗಲಾರೆವು. ಏಕೆಂದರೆ ನಮ್ಮದು ಸ್ವಕೇಂದ್ರಿತ ಬದುಕು. ಹಾಗಾಗಿ ನಮ್ಮವರು ಯಾರು ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ಗುರುತಿಟ್ಟುಕೊಳ್ಳುತ್ತೇವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋ ಮಾತ್ರ ಬಹಳ ಆಸಕ್ತಿಕರವಾಗಿದೆ.
This rabbit saving a cat who couldn’t find its way out pic.twitter.com/JYEjHdNlJE
ಇದನ್ನೂ ಓದಿ— Animals Being Bros (@AnimalBeingBro5) May 13, 2023
ಮೇಲಿನ ವಿಡಿಯೋದಲ್ಲಿ ತಾನು ಬೆಕ್ಕಿನ ಆಹಾರ ಎಂದು ಗೊತ್ತಿದ್ದರೂ ಈ ಮೊಲ ಮಾತ್ರ ಬೆಕ್ಕಿಗೆ ಹೊರಬರಲು ದಾರಿ ತೋರಲು ಪ್ರಯತ್ನಿಸಿದೆ. ಮೊಲಕ್ಕೆ ಕಷ್ಟದಲ್ಲಿರುವ ಬೆಕ್ಕನ್ನು ಪಾರುಮಾಡುವುದಷ್ಟೇ ಉದ್ದೇಶ, ಉಳಿದ ಪರಿಣಾಮ ಅದಕ್ಕೆ ಮುಖ್ಯವಲ್ಲ ಎಂಬಂಥ ವರ್ತನೆಯನ್ನು ಇಲ್ಲಿ ಕಾಣಬಹುದು. ಆದರೆ ಬೆಕ್ಕು ಮಾತ್ರ ಮೊಲದ ಮುಖಕ್ಕೆ, ಕಣ್ಣಿಗೆ ತನ್ನ ಪಂಜದಿಂದ ಹೊಡೆಯುವುದನ್ನು ಮಾತ್ರ ಬಿಟ್ಟಿಲ್ಲ! ಬಹುಶಃ ಬೆಕ್ಕು ಗಾಬರಿಯಿಂದ ಹಾಗೆ ಮಾಡಿರುತ್ತದೆ. ಆದರೂ ಮೊಲ ನೆಲಗೆಬರಿ ಅದಕ್ಕೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ ; ಬೆಕ್ಕನ್ನು ಹುಡುಕಲು ಹೋಗಿ ತಲೆತಿರುಗಿತು, ಅಷ್ಟರಲ್ಲಿ ಬೆಕ್ಕು ಓಡಿಹೋಯಿತು; ಹೌದೆ?
ಮೇ 13 ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈಗಾಗಲೇ 3.3 ಮಿಲಿಯನ್ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 66,000 ಜನರು ಇಷ್ಟಪಟ್ಟಿದ್ದಾರೆ. ಸುಮಾರು 9,000 ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಬೆಕ್ಕು ಮತ್ತು ಮಹಿಳೆಯ ನಡುವಿನ ಈ ಬಾಂಧವ್ಯಕ್ಕೆ ಸರಿಸಾಟಿ ಯಾವುದು ಇಲ್ಲ
ಮುಂದೆ ಏನಾಯಿತು, ಆ ಬೆಕ್ಕು ಮೊಲವನ್ನು ತಿಂದಿತೇ? ಎಂದು ಕೇಳಿದ್ದಾರೆ. ಇದನ್ನು ವಿಡಿಯೋ ಮಾಡುತ್ತಿರುವ ವ್ಯಕ್ತಿ ಬೆಕ್ಕನ್ನು ರಕ್ಷಿಸಬಹುದಾಗಿತ್ತಲ್ಲವೆ? ಎಂದು ಕೇಳಿದ್ದಾರೆ. ಮೊಲ ಬೆಕ್ಕಿನಿಂದ ಮುಖ ಗಾಯ ಮಾಡಿಕೊಂಡರೂ ಸುಮ್ಮನೇ ಹೊರಟುಹೋಗಿದೆ. ಬಹುಶಃ ಬೆಕ್ಕಿಗೆ ತನ್ನ ತಪ್ಪಿನ ಅರಿವಾಗಿ ಸುಮ್ಮನುಳಿದಿರುವ ಸಾಧ್ಯತೆ ಇದೆ ಎಂದು ಕೆಲವರು ಹೇಳಿದ್ದಾರೆ. ಸಹಾಯ ಮಾಡುವ ಮತ್ತು ತೆಗೆದುಕೊಳ್ಳುವ ವಿಷಯವಾಗಿ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:52 pm, Mon, 15 May 23