Viral Post: ಟ್ಯಾಟೂ ಹಾಕಿಸಿಕೊಂಡ ಮಗಳು, ‘ನಾನು ನಿನ್ನನ್ನು ಕೊಲ್ಲುತ್ತೇನೆ’ ತಂದೆ

ಯುವತಿಯೊಬ್ಬಳು ತಾನು ಕೈಗೆ ಟ್ಯಾಟೂ ಹಾಕಿಸಿಕೊಂಡು, ನಂತರ ಆ ವೀಡಿಯೋವನ್ನು ತಂದೆಗೆ ಕಳುಹಿಸಿದ್ದಾಳೆ. ಇದನ್ನು ನೋಡಿದ ಆಕೆಯ ತಂದೆ ಕೋಪಗೊಂಡಿದ್ದಾರೆ. ಜೊತೆಗೆ ತಂದೆ ಮಗಳ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ ಶಾಟ್ ಫೋಟೊ ಟ್ವಿಟರ್​​​ನಲ್ಲಿ ವೈರಲ್ ಆಗಿದೆ.

Viral Post: ಟ್ಯಾಟೂ ಹಾಕಿಸಿಕೊಂಡ ಮಗಳು, ‘ನಾನು ನಿನ್ನನ್ನು ಕೊಲ್ಲುತ್ತೇನೆ’ ತಂದೆ
ವೈರಲ್​​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2023 | 4:06 PM

ಟ್ಯಾಟೂಗಳು, ಕೂದಲಿಗೆ ಬಣ್ಣ ಹಾಕಿಸಿಕೊಳ್ಳುವಂತಹದ್ದು, ಇವೆಲ್ಲಾ ದೇಸಿ ಪೋಷಕರಿಗೆ ಕೋಪ ತರಿಸುತ್ತದೆ. ಈ ರೀತಿಯ ಹುಚ್ಚು ಫ್ಯಾಶನ್​​​ಗಳು ನಮಗೆ ಶೋಭೆ ತರುವುದಿಲ್ಲ ಎಂದೆಲ್ಲಾ ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳುತ್ತಿರುತ್ತಾರೆ. ಅದರಲ್ಲೂ ಮಕ್ಕಳು ಹಚ್ಚೆ ಹಾಕಿಸಿಕೊಳ್ಳುತ್ತೇನೆ ಎಂದರೆ ಹೆಚ್ಚಿನ ಪೋಷಕರು ಅದಕ್ಕೆ ಒಲ್ಲೆ ಎನ್ನುತ್ತಾರೆ. ಪೋಷಕರು ಯಾವತ್ತು ತಮ್ಮ ಮಕ್ಕಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರಲು ಬಯಸುತ್ತಾರೆ, ಈ ರೀತಿಯ ಹುಚ್ಚು ಫ್ಯಾಶನ್​​​ಗಳು ಅವರಿಗೆ ಎಂದಿಗೂ ಇಷ್ಟವಾಗುವಿದಿಲ್ಲ. ಮತ್ತು ಅನುಮತಿಯಿಲ್ಲದೆ ಹಚ್ಚೆ ಹಾಕಿಸಿಕೊಂಡರಂತೂ ಬೈಗುಳದ ಸುರಿಮಳೆಯೇ ಇರುತ್ತದೆ. ಇದೇ ರೀತಿ ಯುವತಿಯೊಬ್ಬಳು ಕೈಗೆ ಹಚ್ಚೆ ಹಾಕಿಸಿಕೊಂಡು ತಂದೆಯ ಕೋಪಕ್ಕೆ ಗುರಿಯಾಗಿದ್ದಾಳೆ.

ಶರಣ್ಯ ಎಂಬ ಯುವತಿ ತನ್ನ ತಂದೆಯ ಜನ್ಮ ದಿನಾಂಕವನ್ನು ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳೆ. ಮತ್ತು ಹಚ್ಚೆ ಹಾಕಿಸಿಕೊಂಡ ವೀಡಿಯೋವನ್ನು ತಂದೆ ವಾಟ್ಸಾಪ್ ಮಾಡಿದ್ದಾಳೆ. ಇದನ್ನು ನೋಡಿದ ಆಕೆಯ ತಂದೆ ‘ನಾನು ನಿನ್ನನ್ನು ಕೊಲ್ಲುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಅವರಿಬ್ಬರ ವಾಟ್ಸಾಪ್ ಸಂಭಾಷಣೆಯ ಸ್ಕಿನ್​​ ಶಾಟ್​​​ನ್ನು ಶರಣ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮತ್ತು ನನ್ನ ತಂದೆ ಟ್ಯಾಟೂವನ್ನು ಸ್ಪಷ್ಟವಾಗಿ ಅನುಮೋದಿಸುತ್ತಾರೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Post : ನಾನು ಈಗ ವಿಚ್ಛೇದನ ಪಡೆದಿದ್ದೇನೆ, ನನ್ನ ಹಣ ವಾಪಸ್ ಮಾಡಿ, ಮದುವೆ ಫೋಟೋ ತೆಗೆದ ಫೋಟೋಗ್ರಾಫರ್​ಗೆ ಮಹಿಳೆ ಮೆಸೇಜ್

ಟ್ವಿಟರ್​​​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಈವರೆಗೆ 130.9 ಸಾವಿರ ವೀಕ್ಷಣೆಗಳನ್ನು ಹಾಗೂ 1.3 ಸಾವಿರ ಲೈಕ್ಸ್​​​ಗಳನ್ನು ಪಡೆದುಕೊಂಡಿದೆ. ಮತ್ತು ಹಲವು ಜನರು ಕಮೆಂಟ್ಸ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ನಾನು ಹಚ್ಚೆ ಹಾಕಿಸಿಕೊಳ್ಳುತ್ತಿರುವಾಗ ನನ್ನ ತಾಯಿ ಮತ್ತು ತಂದೆ ಪಕ್ಕದಲ್ಲಿ ಕುಳಿತಿದ್ದರು. ಅವರು ಟ್ಯಾಟೂ ಹಾಕಿಸಿಕೊಳ್ಳಲು ಅನುಮತಿ ನೀಡಿದ್ದು, ನನಗೆ ಆಶ್ಚರ್ಯಕರವೆನಿಸಿತು’ ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನನ್ನ ಕುಟುಂಬದವರು ನಾನು ಹಚ್ಚೆ ಹಾಕಿಸಿಕೊಂಡದ್ದನ್ನು ನೋಡಿದಾಗ ನಾನು ಕೂಡಾ ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಅನುಮತಿ ಕೇಳುವುದಕ್ಕಿಂತ ಕ್ಷಮೆ ಕೇಳುವುದು ಉತ್ತಮ ಎಂದು ಇದು ಸಾಬೀತು ಪಡಿಸುತ್ತದೆ’ ಎಂದು ಈ ಪೋಸ್ಟ್ ನೋಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ