ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಹುಚ್ಚು ಪ್ರಯೋಗ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ
expensive gold experiment: ಪ್ರಯೋಗದ ನಂತರ ಅವರಿಗೆ ಕಿತ್ತಳೆ ಬಣ್ಣದ ದ್ರವ ಮಾತ್ರ ಉಳಿದಿದೆ. ಕೊನೆಗೆ ಆ ದ್ರವವನ್ನು ಏನು ಮಾಡಬೇಕೆಂದು ತಿಳಿಯದೆ ಗಾಜಿನ ಗ್ಲಾಸನ್ನು ನೆಲಕ್ಕೆ ಹಾಕಿ ಕುಕ್ಕುತ್ತಾರೆ. ಟ್ವಿಟ್ಟರ್ ನಲ್ಲಿ ಈ ವಿಡಿಯೋ ಶೇರ್ ಆಗಿದೆ.
ಚಿನ್ನವು ವಿಶ್ವದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಚಿನ್ನವನ್ನು ಆಭರಣಗಳ ರೂಪದಲ್ಲಿ ಜೊತೆಗೆ ಆರೋಗ್ಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಐಷಾರಾಮಿ ವಸ್ತು ಎಂದೇ ಖ್ಯಾತಿ ಪಡೆದಿರುವ ಈ ಚಿನ್ನದ ಬೆಲೆ ಸದಾ ಗಗನಮುಖಿಯಾಗಿಯೇ ಇರುತ್ತದೆ. ಕೆಲವರು ಕೆಲವು ರಾಸಾಯನಿಕಗಳನ್ನು ಸೇರಿಸುವ ಮೂಲಕ ಚಿನ್ನದ ಸತ್ವವನ್ನು ಮತ್ತಷ್ಟು ಸುಧಾರಿಸುತ್ತಾರೆ. ಚಿನ್ನವನ್ನು ಕರಗಿಸುವುದೂ ಉಂಟು. ಅನೇಕ ಜನರು ಚಿನ್ನಕ್ಕೆ ಹೊಳಪು ನೀಡಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಳಸುತ್ತಾರೆ. ಅದನ್ನು ಅಸಲಿ ಚಿನ್ನವೆಂದೇ ನಂಬಿಸಿ ಜನರನ್ನು ವಂಚಿಸುತ್ತಾರೆ. ಈ ವೀಡಿಯೊ ಹೆಚ್ಚು ಕಡಿಮೆ ಹಾಗೆ ಇದೆ. ಶುದ್ಧ ಚಿನ್ನದ ಬಿಸ್ಕತ್ತನ್ನು ಆಸಿಡ್‌ನಲ್ಲಿ ಕರಗಿಸುವ ಪ್ರಯೋಗದ ವೆಚ್ಚವನ್ನು ನೀವು ನೋಡಿದರೆ ನೀವು ಹೌಹಾರುತ್ತೀರಿ.
ರಸಾಯನಶಾಸ್ತ್ರ ವಿಜ್ಞಾನವು ನಿಜವಾಗಿಯೂ ಅದ್ಭುತವಾಗಿದೆ. ಬಹಳಷ್ಟು ಸೈದ್ಧಾಂತಿಕ ಅಧ್ಯಯನಗಳು ನೀರಸವಾಗಿದ್ದರೂ, ಪ್ರಾಯೋಗಿಕ ಪ್ರಯೋಗಗಳು ಖಂಡಿತವಾಗಿಯೂ ಕುತೂಹಲಕಾರಿಯೂ, ವಿನೋದವೂ ಮತ್ತು ಆಸಕ್ತಿದಾಯಕವಾಗಿವೆ. ಕೆಲವು ಪಕ್ಕಾ ಸೈನ್ಸ್ ಅಭಿಮಾನಿಗಳು ಕೂಡ ಇದ್ದಾರೆ. ಅವರು ಯಾವಾಗಲೂ ಆಳವಾದ ಅನ್ವೇಷಣೆಯನ್ನು ನಡೆಸಲು ಇಷ್ಟಪಡುತ್ತಾರೆ.
ವಾಸ್ತವವಾಗಿ, ಪ್ರಯೋಗಾಲಯಗಳಲ್ಲಿ ನಡೆಸಿದ ಹೆಚ್ಚಿನ ಪ್ರಯೋಗಗಳು ಯಶಸ್ವಿಯಾಗುತ್ತವೆ, ಆದರೆ ಇತರವು ವಿಫಲಗೊಳ್ಳುತ್ತವೆ. ಈ ಇಂಟರ್ನೆಟ್ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಅನೇಕ ಸಣ್ಣಪುಟ್ಟ ಲ್ಯಾಬ್ ಪ್ರಯೋಗಗಳು ಬೆಳಕಿಗೆ ಬರುತ್ತವೆ. ಈ ಪ್ರಯೋಗವನ್ನೂ ಗಮನಿಸಿ.. ಶುದ್ಧ ಚಿನ್ನವನ್ನು ಆಸಿಡ್‌ನಲ್ಲಿ ಕರಗಿಸುವ ಈ ಹುಚ್ಚು ಪ್ರಯೋಗವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Dissolving a bar of pure gold in acid ?? pic.twitter.com/00tspl221i
— Interesting Channel (@ChannelInteres) April 26, 2023
ವೀಡಿಯೊದಲ್ಲಿ ವಿವರಿಸಿದಂತೆ, ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಉತ್ಸಾಹ ಹೊಂದಿರುವವರೊಬ್ಬರು ಕೈಯಲ್ಲಿ 100 ಗ್ರಾಂ ಶುದ್ಧ ಚಿನ್ನದ ಬಿಸ್ಕತ್ತು ಹಿಡಿದು ಪ್ರಯೋಗವನ್ನು ಪ್ರಾರಂಭಿಸಿದರು. ಇಲ್ಲಿ ಪ್ರಯೋಗಕ್ಕೆ ಬಳಸಿದ ಶುದ್ಧ ಚಿನ್ನದ ಬೆಲೆ 6.30 ಲಕ್ಷ ರೂಪಾಯಿ ಎಂದು ಗೊತ್ತಾಗಿದೆ. ಅವರು ಮೊದಲು ಚಿನ್ನದ ಬಿಸ್ಕತ್ತನ್ನು ಗಾಜಿನ ಲೋಟದಲ್ಲಿ ಹಾಕುತ್ತಾರೆ.
ನಂತರ ಚಿನ್ನದ ಬಿಸ್ಕತ್ತು ಮುಳುಗುವವರೆಗೆ ಸಾಂದ್ರೀಕೃತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸುರಿಯುತ್ತಾರೆ. ಆ ನಂತರ ನೈಟ್ರಿಕ್ ಆಸಿಡ್ ಹಾಕಿದರು.. ಗ್ಲಾಸಿಗೆ ನೈಟ್ರಿಕ್ ಆಸಿಡ್ ಸುರಿದ ತಕ್ಷಣ ಚಿನ್ನದ ಬಿಸ್ಕತ್ ಕರಗತೊಡಗಿತು. ಕೆಲವೇ ಗಂಟೆಗಳಲ್ಲಿ, ಚಿನ್ನದ ಗಟ್ಟಿ ಸಂಪೂರ್ಣವಾಗಿ ಕರಗುವುದನ್ನು ನಾವು ನೋಡಬಹುದು. ಗೋಲ್ಡನ್ ಬಿಸ್ಕತ್ತು ಸಂಪೂರ್ಣವಾಗಿ ಆಮ್ಲದಲ್ಲಿ ಕರಗುತ್ತದೆ. ಕರಗುತ್ತಾ ಕರಗುತ್ತಾ ಅಂತಿಮವಾಗಿ ಅದು ಸಂಪೂರ್ಣವಾಗಿ ಕಣ್ಮರೆಯಾಗುತ್ತದೆ!
ಪ್ರಯೋಗದ ನಂತರ ಅವರಿಗೆ ಕಿತ್ತಳೆ ಬಣ್ಣದ ದ್ರವ ಮಾತ್ರ ಉಳಿದಿದೆ. ಕೊನೆಗೆ ಆ ದ್ರವವನ್ನು ಏನು ಮಾಡಬೇಕೆಂದು ತಿಳಿಯದೆ ಗಾಜಿನ ಗ್ಲಾಸನ್ನು ನೆಲಕ್ಕೆ ಹಾಕಿ ಕುಕ್ಕುತ್ತಾರೆ. ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು ಬಳಕೆದಾರರು ಹೆಚ್ಚು ಶೇರ್ ಮಾಡಿದ್ದರಿಂದ ವೈರಲ್ ಆಗಿದೆ. ಇದಲ್ಲದೆ, ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
Published On - 2:42 pm, Mon, 15 May 23