AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಲ್​ ತೋ ಪಾಗಲ್ ಹೈ; ಮಾಧುರಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಈ ಜೋಡಿ

Madhuri Dixit Birthday : ಸ್ಟ್ಯಾಂಡ್​ಅಪ್ ಕಾಮೆಡಿಯನ್​ ಅಂಜನಾ ಬಾಪಟ್​ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್​ ಗೀತಾ ರವಿಶಂಕರ್​ ಜೊತೆ  ಹೆಜ್ಜೆ ಹಾಕಿದ್ದಾರೆ. ಇವರಿಬ್ಬರ ಜೋಡಿನೃತ್ಯವನ್ನು ನೆಟ್ಟಿಗರು ಬಹುವಾಗಿ ಮೆಚ್ಚಿದ್ದಾರೆ.

ದಿಲ್​ ತೋ ಪಾಗಲ್ ಹೈ; ಮಾಧುರಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಈ ಜೋಡಿ
ಮಾಧುರಿ ದೀಕ್ಷಿತ ಹುಟ್ಟುಹಬ್ಬದ ಪ್ರಯುಕ್ತ ಈ ಯುವತಿಯರು ಮಾಧುರಿ-ಕರೀಷ್ಮಾ ಜೋಡಿ ನೃತ್ಯವನ್ನು ಮಾಡುತ್ತಿರುವುದು.
TV9 Web
| Edited By: |

Updated on:May 16, 2023 | 11:24 AM

Share

Viral Video : ಮಾಧುರಿಯ ಉಚ್ಛ್ರಾಯ ದಿನಗಳಲ್ಲಿ ‘ಕಾಷ್ಮೀರ್​ ಲೇಲೋ ಮಾಧುರಿ ದೇದೋ’ ಎಂಬ ಸ್ಲೋಗನ್​ ಜನಜನಿತವಾಗಿದ್ದು ನೆನಪಿರಬಹುದು. ಇಂಥ ಚಿರಯೌವ್ವನೆ, ಪ್ರತಿಭಾನ್ವಿತೆ ಮಾಧುರಿ ಜೂನ್​ 15ಕ್ಕೆ 56ನೇ ವರ್ಷಕ್ಕೆ ಕಾಲಿಟ್ಟರು! ಈ ವಾಕ್ಯವನ್ನು ನಿಮ್ಮ ಮನಸ್ಸು ಸುಲಭವಾಗಿ ಸ್ವೀಕರಿಸುವುದೆ? ಆದರೆ ವಾಸ್ತವದಲ್ಲಿ ಒಪ್ಪಿಕೊಳ್ಳಲೇಬೇಕು. ಅವರ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಇಬ್ಬರೂ ಹೆಣ್ಣುಮಕ್ಕಳು ನೃತ್ಯದ ಮೂಲಕ ಅವರಿಗೆ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ದಿಲ್​ ತೋ ಪಾಗಲ್​ ಹೈ ಸಿನೆಮಾದಲ್ಲಿ ಮಾಧುರಿ ಮತ್ತು ಕರೀಷ್ಮಾ ನರ್ತಿಸಿದ ಈ ಹಾಡಿಗೆ ಸ್ಟ್ಯಾಂಡ್​ಅಪ್ ಕಾಮೆಡಿಯನ್​ ಅಂಜನಾ ಬಾಪಟ್​ ಸೋಶಿಯಲ್ ಮೀಡಿಯಾ ಇನ್​ಫ್ಲ್ಯೂಯೆನ್ಸರ್​ ಗೀತಾ ರವಿಶಂಕರ್​ ಜೊತೆ  ಹೆಜ್ಜೆ ಹಾಕಿದ್ದಾರೆ. ದೀಪಿಕಾ ಪಡುಕೋಣೆ, ಶಾರುಖ್​ಖಾನ್ ಅಭಿನಯದ ಪಠಾಣ್​ ಚಿತ್ರದ ಬೇಷರಮ್​ ರಂಗ್​ ಹಾಡು ಸುಮಾರು ಆರು ತಿಂಗಳವರೆಗೆ ಚಾಲ್ತಿಯಲ್ಲಿತ್ತು. ಅನೇಕರು ರೀಲ್ ಮಾಡಿ ಧೂಳೆಬ್ಬಿಸಿದರು. ತದನಂತರ 90ರ ದಶಕದಲ್ಲಿ ಬಿಡುಗಡೆಯಾದ ಈ ಹಾಡು ಇದೀಗ ಈ ರೀತಿಯಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ

ದಿಲ್​ ತೋ ಪಾಗಲ್​ ಹೈ ಚಿತ್ರದಲ್ಲಿ ಮಾಧುರಿ ಮತ್ತು ಕರೀಷ್ಮಾ ಧರಿಸಿದ ಕಾಸ್ಟ್ಯೂಮ್​ ಅನ್ನೇ ಇವರಿಬ್ಬರೂ ಅನುಕರಿಸಿದ್ಧಾರೆ. ಮಾಧುರಿ ದೀಕ್ಷಿತ್​ ಅವರಿಗೆ ಟ್ಯಾಗ್​ ಮಾಡಿ ಇದು ಅವರಿಗೆ ತಲುಪಬೇಕು ಎಂದು ತಮ್ಮ ಫಾಲೋವರ್​ಗಳನ್ನು ಕೇಳಿಕೊಂಡಿದ್ಧಾರೆ. ಈ ಚಿತ್ರವನು 1997ರಲ್ಲಿ ಬಿಡುಗಡೆಯಾಯಿತು. ಶಾರುಖ್​, ಮಾಧುರಿ, ಕರೀಷ್ಮಾ, ಅಕ್ಷಯ್​ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ : ಬೇಷರಮ್ ರಂಗ್​; ಬಾಲಿವುಡ್​ಗೆ ಬರ್ತೀರಾ? ಜಪಾನಿ ಬೆಡಗಿಯನ್ನು ಕೇಳುತ್ತಿರುವ ನೆಟ್ಟಿಗರು

ಈಗಾಗಲೇ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. ನೂರಾರು ಜನರು ಪ್ರತಿಕ್ರಿಯೆ ವ್ಯಕ್ತಪಡಿಸಿ ಮೆಚ್ಚಿದ್ದಾರೆ. ನಿಮ್ಮ ಉತ್ಸಾಹ ಮತ್ತು ಶಕ್ತಿ ನಮ್ಮನ್ನು ಪ್ರಭಾವಿತಗೊಳಿಸಿದೆ ಎಂದು ಅನೇಕರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:22 am, Tue, 16 May 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ