Viral Video: ಚಿರತೆಯನ್ನು ಪಂಜರದಲ್ಲಿ ಕಾಡಿಗೆ ತಂದು ಬಿಡುವ ಅದ್ಭುತ ವೀಡಿಯೊ ಹಂಚಿಕೊಂಡ ಅರಣ್ಯಾಧಿಕಾರಿ
ನಾಡಿನಲ್ಲಿ ಸುತ್ತಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದನ್ನು ತೋರಿಸುವ ಹೃದಯಸ್ಪರ್ಶಿ ವೀಡಿಯೊವನ್ನು ಅರಣ್ಯಾಧಿಕಾರಿ ಹಂಚಿಕೊಂಡಿದ್ದಾರೆ.

ಕಾಡು ಪ್ರಾಣಿಗಳು ಕಾಡು ಬಿಟ್ಟು ನಾಡಿಗೆ ಬಂದಾಗ ಅವುಗಳನ್ನು ಮತ್ತೆ ಆವಾಸಸ್ಥಾನಗಳಿಗೆ ಕಳಿಸುವ ಅನೇಕ ವೀಡಿಯೊಗಳನ್ನು ನೀವು ನೋಡಿರಬಹುದು, ಇಂತಹದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದೆ. ಅದೆಷ್ಟು ಭಯಾನಕ ಮತ್ತು ಒಂದು ಬಾರಿ ಪಂಚರದಿಂದ ಹೊರಗೆ ಬಂದಾಗ ಅವುಗಳಿಗೆ ಆಗುವ ಖುಷಿಯನ್ನು ಈ ವೀಡಿಯೊದಲ್ಲಿ ನೋಡಬಹುದು. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಅನೇಕ ಇಂತಹ ವೀಡಿಯೊಗಳನ್ನು ಬಹಳಷ್ಟು ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಕೂಡ ಅವರೇ ಹಂಚಿಕೊಂಡಿದ್ದಾರೆ. ನಾಡಿನಲ್ಲಿ ಸುತ್ತಾಡುತ್ತಿದ್ದ ಚಿರತೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದನ್ನು ತೋರಿಸುವ ಹೃದಯಸ್ಪರ್ಶಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಕಸ್ವಾನ್ ಅವರು ಈ ವೀಡಿಯೊ ಜತೆಗೆ ಶೀರ್ಷಿಕೆಯೊಂದನ್ನು ಹಂಚಿಕೊಂಡಿದ್ದಾರೆ, “ಆ ಚಿರತೆ ಸ್ವಲ್ಪ ಆತುರದಲ್ಲಿದೆ. ಯಶಸ್ವಿಯಾಗಿ ರಕ್ಷಿಸಲಾಗಿದೆ ಮತ್ತು ಕಾಡಿಗೆ ಬೀಡಲಾಗಿದೆ. ಯಾವುದೇ ಅಪಾಯವಿಲ್ಲದೆ ನಿನ್ನೆ ರಾತ್ರಿ ನಮ್ಮ ತಂಡ ಈ ಕಾರ್ಯವನ್ನು ಮಾಡಿದೆ” ಎಂದು ಹೇಳಿದ್ದಾರೆ.
That leopard was in some hurry. Successfully rescued & released in wild. Without any untoward incident. Yesterday night by our teams. Forest is a 24X7 job. pic.twitter.com/1Bny0fXhId
— Parveen Kaswan, IFS (@ParveenKaswan) May 14, 2023
19 ಸೆಕೆಂಡುಗಳ ಈ ವೀಡಿಯೊ ಕ್ಲಿಪ್‌ನಲ್ಲಿ ಅಧಿಕಾರಿಗಳು ಚಿರತೆಯನ್ನು ರಕ್ಷಿಸಿದ ನಂತರ ರಾತ್ರಿಯಲ್ಲಿ ಅರಣ್ಯಕ್ಕೆ ಬಿಡುವುದನ್ನು ತೋರಿಸಲಾಗಿದೆ. ಪ್ರಾಣಿಗಳು ಉದ್ದೇಶಿತವಾಗಿ ನಾಡಿನತ್ತ ಬರಲ್ಲ, ಆಹಾರ ಅಥವಾ ದಾರಿ ತಪ್ಪಿದಾಗ ನಾಡಿನತ್ತ ಬರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಸಣ್ಣ ಪಿಕಪ್ ಟ್ರಕ್‌ನ ಹಿಂಭಾಗದ ಪಂಜರದಲ್ಲಿ ಈ ಚಿರತೆಯನ್ನು ಇರಿಸಲಾಗಿತ್ತು. ಅಧಿಕಾರಿಗಳು ಚಿರತೆಯನ್ನು ಪಂಜರದಿಂದ ಮುಕ್ತಗೊಳಿಸಿದ ತಕ್ಷಣ, ಚಿರತೆ ಲಾರಿಯಿಂದ ಜಿಗಿದು ಕಾಡಿನತ್ತ ಓಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.
ಇದನ್ನೂ ಓದಿ:Viral Video: ಪ್ಯಾರಾಗ್ಲೈಡಿಂಗ್ ವೇಳೆ ಹಿಂದಿ ಹಾಡು ಹಾಡಿದ ಯುವಕರು, ಬೇಷ್ ಎಂದ ನೆಟ್ಟಿಗರು
ಈ ವೀಡಿಯೊಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಟ್ವಿಟರ್ ಬಳಕೆದಾರರೂ ಹಾರ್ಟ್ ಎಮೋಟಿಕಾನ್ ಕಮೆಂಟ್ ಮಾಡಿದ್ದಾರೆ. ಪ್ರಾಣಿಗಳು ಬಂಧನದಿಂದ ಮುಕ್ತವಾಗುವ ಎಷ್ಟು ಸಂತೋಷಪಡುತ್ತದೆ ನೋಡಿ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ. ಇನ್ನೂ ಅನೇಕರು ಅರಣ್ಯ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಒಳ್ಳೆಯದು. ಕಾಡು ಪ್ರಾಣಿಯನ್ನು ಮರಳಿ ಕಾಡಿನಲ್ಲಿ ಯಶಸ್ವಿಯಾಗಿ ಬಿಡುವುದಕ್ಕಿಂತ ಉತ್ತಮವಾದದ್ದೇನೂ ಇಲ್ಲ. ತಂಡಕ್ಕೆ ಅಭಿನಂದನೆಗಳು ಒಬ್ಬ ಟ್ವಿಟರ್ ಬಳಕೆದಾರ ಹೇಳಿದ್ದಾರೆ. ಅರಣ್ಯ ಇಲಾಖೆಗೆ ಅಪಾರ ಗೌರವ ನೀಡಬೇಕು. ಅವರು ಪ್ರಕೃತಿಯ ನಿಜವಾದ ಹೀರೋಗಳು ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:14 pm, Tue, 16 May 23