Viral Video: ಪ್ಯಾರಾಗ್ಲೈಡಿಂಗ್ ವೇಳೆ ಹಿಂದಿ ಹಾಡು ಹಾಡಿದ ಯುವಕರು, ಬೇಷ್ ಎಂದ ನೆಟ್ಟಿಗರು

ವೃತ್ತಿಪರ ಗಾಯಕ ಮೊಹ್ನಿಶ್ ಆರ್ಯ ಅವರು ಪ್ಯಾರಾಗ್ಲೈಡಿಂಗ್ ಚಟುವಟಿಕೆಯನ್ನು ಮಾಡುವ ವೇಳೆ ನಟ ಶಾರಖ್ ಖಾನ್ ಚಲನಚಿತ್ರದ ‘ಹವಾಯಿನ್’ ಗೀತೆಯನ್ನು ಹಾಡಿದ್ದಾರೆ, ಈ ವಿಡಿಯೋವನ್ನು ಗಾಯಕ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

Viral Video: ಪ್ಯಾರಾಗ್ಲೈಡಿಂಗ್ ವೇಳೆ ಹಿಂದಿ ಹಾಡು ಹಾಡಿದ ಯುವಕರು, ಬೇಷ್ ಎಂದ ನೆಟ್ಟಿಗರು
ವೈರಲ್​​ ವೀಡಿಯೊ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: May 15, 2023 | 6:51 PM

ಪ್ಯಾರಾಗ್ಲೈಡಿಂಗ್ ಎಂಬ ಸಾಹಸಮಯ ಕ್ರೀಡೆಯು ಜನರನ್ನು ಭಯಪಡಿಸುವಂತೆ ಮಾಡುತ್ತದೆ, ಅಷ್ಟು ಎತ್ತರದಿಂದ ಕೆಳಗೆ ನೋಡಿದಾಗ ತಲೆ ತಿರುಗುವಂತೆ ಮಾಡುತ್ತದೆ. ಅಲ್ಲದೆ ಪ್ಯಾರಾಗ್ಲೈಡಿಂಗ್ ಸಮಯದಲ್ಲಿ ಜನರು ಮಾಡಿದ ವೀಡಿಯೋಗಳನ್ನು ವೀಕ್ಷಿಸಲು ಸಾಕಷ್ಟು ಆಸಕ್ತಿದಾಯಕವಾಗಿರುತ್ತದೆ. ಅಲ್ಲಿ ಅವರು ಅನುಭವಿಸುವ ವಿವಿಧ ಬಗೆಯ ಭಾವನೆಗಳನ್ನು ನೋಡಬಹುದು. ಕೆಲವೊಬ್ಬರ ವೀಡಿಯೋಗಳು ನಗು ತರಿಸುವಂತಿರುತ್ತವೆ. ಪ್ಯಾರಾಗ್ಲೈಡಿಂಗ್ ಮಾಡುವಾಗ ಜನರು ಹೆಚ್ಚಾಗಿ ಚೀರಾಡುತ್ತಾರೆ. ಆದರೆ ಈ ಇಬ್ಬರು ಯುವಕರು ಪ್ಯಾರಾಗ್ಲೈಡಿಂಗ್ ಮಾಡುವಾಗ ಭಯಪಟ್ಟು ಚೀರಾಡದೆ, ಅರಿಜಿತ್ ಸಿಂಗ್ ಅವರ ‘ಹವಾಯಿನ್’ ಹಾಡನ್ನು ಹಾಡುತ್ತಾ, ಇದನ್ನು ತುಂಬಾನೇ ಆನಂದಿಸಿದ್ದಾರೆ. ಜೊತೆಗೆ ಹಾಡಿನ ಮೂಲಕ ಎಲ್ಲರನ್ನು ಆಕರ್ಷಿಸಿದ್ದಾರೆ. ಸದ್ಯ ಇವರ ಈ ಹಾಡಿನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕರಿಬ್ಬರು ಈ ಸಾಹಸ ಚಟುವಟಿಕೆಯನ್ನು ಮಾಡುವಾಗ, ಸೆಲ್ಫಿ ವೀಡಿಯೋ ಮಾಡಿ ಯಾವುದೇ ಭಯವಿಲ್ಲದೆ, ಉತ್ಸಾಹದಿಂದ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮ ನಟನೆಯ ಜಬ್ ಹ್ಯಾರಿ ಮೆಟ್ ಸೇಜಲ್’ ಚಲನಚಿತ್ರದ ‘ಹವಾಯಿನ್ ಹಾಡನ್ನು ಹಾಡುತ್ತಾ, ಚಟುವಟಿಕೆಯನ್ನು ಆನಂದಿಸುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.

View this post on Instagram

A post shared by Mohnish Arya (@mohnish_arya)

ಇದನ್ನೂ ಓದಿ: Video Viral: ತವಾಘಾಟ್-ಲಿಪುಲೇಖ್ ಹೆದ್ದಾರಿಯ ಗರ್ಬಾಧರ್‌ ಪರ್ವತ ಕುಸಿತ, ತಪ್ಪಿದ ಭಾರೀ ಅನಾಹುತ

ಮೊಹ್ನಿಶ್ ಆರ್ಯ ಎನ್ನುವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಹವಾಯಿನ್ ನಿಜವಾಗಿಯೂ ಭಾವನೆಗಳನ್ನು ವ್ಯಕ್ತಪಡಿಸುತ್ತದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಹಂಚಿಕೊಂಡಾಗಿನಿಂದ ಈ ವೀಡಿಯೋವು 19 ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಅನೇಕರು ಕಮೆಂಟ್ಸ್ ಮಾಡುವುದರ ಮೂಲಕ ಮೊಹ್ನಿಶ್ ಅವರ ಗಾಯನ ಪ್ರತಿಭೆಯನ್ನು ಹೊಗಳಿದ್ದಾರೆ. ಒಬ್ಬ ಬಳಕೆದಾರರು ‘ಸನ್ನಿವೇಶಕ್ಕೆ ತಕ್ಕ ಹಾಡು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ನಾನು ಕೂಡಾ ಇದನ್ನು ಪ್ರಯತ್ನಸುವೆ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ