Viral Video: ‘ವಾಟರ್ 2.0’ ಹೊಸ ಪ್ರಯೋಗ ವೈರಲ್, ನೀರು ಕೂಡ ಒಂದು ಪಾಕವಿಧಾನ
ಹಲವಾರು ಭಕ್ಷ್ಯಗಳ ಆವೃತ್ತಿಯನ್ನು ತಯಾರಿಸುವ ವೀಡಿಯೋಗಳನ್ನು ನಾವೆಲ್ಲರೂ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೇವೆ. ಆದರೆ ಸುಧಾರಿತ ನೀರನ್ನು ತಯಾರಿಸುವ ಪಾಕವಿಧಾನವನ್ನು ನೀವು ಎಂದಾದರೂ ನೋಡಿದ್ದೀರಾ?, ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಜಕಾರಿ ನೆಮನ್ ಅವರು ಸುಧಾರಿತ ನೀರನ್ನು ತಯಾರಿಸಿದ್ದು, ಈ ಪಾಕವಿಧಾನವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಸಿಗುವ ಹಲವಾರು ಬಗೆಯ ಭಕ್ಷ್ಯ ತಯಾರಿಕೆಯ ವೀಡಿಯೋಗಳನ್ನು ನೋಡಿರುತ್ತೇವೆ. ಆದರೆ ನೀವು ‘ಹೊಸ ಮತ್ತು ಸುಧಾರಿತ ನೀರಿನ’ ಬಗ್ಗೆ ಎಂದಾದರೂ ಕೇಳಿದ್ದೀರಾ? ಮಾನವನ ಉಳಿವು ಮತ್ತು ನಾಗರಿಕತೆಗೆ ಅಗತ್ಯವಾದ ಪ್ರಮುಖ ಅಂಶಗಳಲ್ಲಿ ನೀರು ಕೂಡಾ ಒಂದು. ನೀರನ್ನು ಭೂಮಿಯ ಮೇಲಿನ ಜೀವಿಗಳ ಅಸ್ತಿತ್ವದ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. ಜೀವಿಗಳಿಗೆ ಜೀವಿಸಲು ಅತೀ ಮೂಲಭೂತವಾಗಿ ಬೇಕಾಗಿರುವ ನೀರು ಸುಲಭವಾಗಿ ಲಭ್ಯವಿರುವಾಗ, ಬಾಣಸಿಗ ಜಕಾರಿ ನೆಮನ್ ಅವರು ನೀರಿನ ಹೊಸ ಮತ್ತು ಸುಧಾರಿತ ಆವೃತ್ತಿಯನ್ನು ತಯಾರಿಸಿದ್ದಾರೆ. ಅದನ್ನು ಅವರು ‘ವಾಟರ್ 2.0’ ಎಂದು ಕರೆದಿದ್ದಾರೆ.
ನೆಮನ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ತಾವು ಕುಡಿಯುವ ಸುಧಾರಿತ ನೀರಿನ ತಯಾರಿಕೆಯ ಪಾಕವಿಧಾನ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅವರು ನೀರನ್ನು ಸರಣಿ ಹಂತಗಳಲ್ಲಿ ತಯಾರಿಸುವುದನ್ನು ವೀಡಿಯೋದಲ್ಲಿ ಕಾಣಬಹುದು. ಮೊದಲ ಹಂತದಲ್ಲಿ ಅವರು ಐಸ್ ತುಂಡುಗಳನ್ನು ತೆಗೆದುಕೊಂಡು ಅದನ್ನು ಸಣ್ಣ ಸ್ಲೆಸ್ಗಳಾಗಿ ತುಂಡರಿಸಿದರು. ಎರಡನೇ ಹಂತದಲ್ಲಿ ಒಂದು ಪ್ಯಾನ್ ಬಿಸಿ ಮಾಡಿ ಅದಕ್ಕೆ ಮೊದಲೇ ತುರಿದಿಟ್ಟ ಐಸ್ ಜೊತೆಗೆ ಎರಡು ಚಮಚ ಉಗುರು ಬೆಚ್ಚಗಿನ ನೀರನ್ನು ಸುರಿಯುತ್ತಾರೆ. ಮೂರನೇ ಹಂತದಲ್ಲಿ ಆ ಪ್ಯಾನ್ ಗೆ ತಾಜಾ ಐಸ್ ಕ್ಯೂಬ್ ಗಳನ್ನು ಹಾಕುತ್ತಾರೆ. ಮತ್ತು ಅದನ್ನು ಸಂಪೂರ್ಣವಾಗಿ ಕರಗಲು ಬಿಡದೆ, ಒಂದು ಪ್ಲಾಸ್ಟಿಕ್ ಚೀಲವನ್ನು ತೆಗೆದುಕೊಂಡು, ಆ ಐಸ್ ಕ್ಯೂಬ್ ಗಳ ಜೊತೆಗೆ ಅದರಲ್ಲಿದ ನೀರನ್ನು ಕೂಡಾ ಚೀಲಕ್ಕೆ ತುಂಬುತ್ತಾರೆ. ನಾಲ್ಕನೇ ಹಂತದಲ್ಲಿ ಒಂದು ಟಬ್ ತೆಗೆದುಕೊಂಡು ಅದಕ್ಕೆ ನೀರು ಹಾಕಿ, ಅದರ ಒಳಗೆ ನೀರು ತುಂಬಿಸಿಟ್ಟ ಚೀಲವನ್ನು ಹಾಕುತ್ತಾರೆ. ಅದನ್ನು 1.33 ಗಂಟೆಗಳ ಕಾಲ ಸೌಸ್ ವಿಡ್ ನಲ್ಲಿ ಇರಿಸುತ್ತಾರೆ.
View this post on Instagram
ಐದನೇ ಹಂತದಲ್ಲಿ ಬ್ಲೆಂಡರ್ ಒಂದನ್ನು ತೆಗೆದುಕೊಂಡು ಅದಕ್ಕೆ ಚೀಲದಲ್ಲಿ ತುಂಬಿಟ್ಟ ನೀರನ್ನು ಸುರಿಯುತ್ತಾರೆ. ಮತ್ತು ನೀರಿನ ಸ್ಥಿರತೆ ಕಾಪಾಡಲು ಅದಕ್ಕೆ ಟ್ಯಾಪ್ ನೀರನ್ನು ಕೂಡಾ ಸೇರಿಸುತ್ತಾರೆ. ಏಳನೇ ಹಂತದಲ್ಲಿ ತಯಾರಿಸಿದ ನೀರನ್ನು ಸೋಸಿ ಒಂದು ಬಟ್ಟಲಿಗೆ ಸುರಿಯುತ್ತಾರೆ. ಮತ್ತು ಅದಕ್ಕೆ ಸ್ವಲ್ಪ ತುರಿದ ಅಂಟಾರ್ಕ್ಟಿಟ್ ಐಸ್ ಸೇರಿಸುತ್ತಾರೆ. ನಂತರ ಸ್ಪೂನ್ ನಿಂದ ಆ ನಿರನ್ನು ಕುಡಿಯುತ್ತಾರೆ.
ಇದನ್ನೂ ಓದಿ: Viral:ಬುಕ್ ಮಾಡಿದ ಆಟೋ 71 ನಿಮಿಷಗಳಲ್ಲಿ ನಿಮ್ಮನ್ನು ತಲುಪಲಿದೆ! ಮುಂದೆ?
ಇನ್ಸ್ಟಾಗ್ರಾಮ್ ಬಳಕೆದಾರರು, ನೆಮನ್ ಅವರ ಹಂತಹಂತದ ವಾಟರ್ 2.0 ಪಾಕವಿಧಾನವನ್ನು ಕಂಡು ದಿಗ್ಬ್ರಮೆರು. ಈ ವೈರಲ್ ವೀಡಿಯೋ ಸುಮಾರು 14 ಮಿಲಿಯನ್ ವೀಕ್ಷಣೆಗಳನ್ನು 1.1 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಮತ್ತು ಹಲವಾರು ಕಮೆಂಟ್ಸ್ ಗಳು ಈ ವೀಡಿಯೋಗೆ ಹರಿದು ಬಂದಿವೆ. ಒಬ್ಬ ಬಳಕೆದಾರರು ‘ಇದನ್ನು ನೋಡಿ ನನಗೆ ಬಾಯಾರಿಕೆಯಾಯಿತು’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಪಾಕವಿಧಾನವನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ನನ್ನ ಮಕ್ಕಳು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ಇದು ಅಧಿಕೃತವಾಗಿ ನನ್ನ ಗಂಡನ ಮೆಚ್ಚಿನದ್ದಾಗಿದೆ. ನನ್ನ ಪತಿ ಅವರ ತಾಯಿಗಿಂತಲೂ ಈ ಪಾಕವಿಧಾನವನ್ನು ನಾನು ಉತ್ತಮವಾಗಿ ಮಾಡಿದ್ದೇನೆ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನೀವು ಅಡುಗೆ ಮಾಡುವ ಮೊದಲು ಐಸ್ ತೊಳೆಯಲು ಮರೆತಿದ್ದೀರಿ’ ಎಂದು ಕಾಲೆಳೆದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ